ರಾಹುಲ್‌, ಮಲಿಕ್‌ ರಿವರ್ಸ್‌ ಸ್ವೀಪ್‌!

Team Udayavani, Jan 26, 2020, 12:37 AM IST

ಆಕ್ಲೆಂಡ್‌/ಕರಾಚಿ: ಮಹೇಂದ್ರ ಸಿಂಗ್‌ ಧೋನಿ, ವಿರಾಟ್‌ ಕೊಹ್ಲಿ ಮೊದಲಾದ ಕ್ರಿಕೆಟಿಗರು ಪತ್ರಕರ್ತರಿಗೆ ಚುರುಕಿನ ಉತ್ತರ ನೀಡಿದ್ದನ್ನು ನೋಡಿದ್ದೇವೆ. ಇದೀಗ ಕೆ.ಎಲ್‌. ರಾಹುಲ್‌, ಪಾಕಿಸ್ಥಾನಿ ಕ್ರಿಕೆಟಿಗ ಮಲಿಕ್‌ ಸರದಿ.

ಆಕ್ಲೆಂಡ್‌ನ‌ಲ್ಲಿ ನ್ಯೂಜಿಲ್ಯಾಂಡ್‌ ಎದುರಿನ ಮೊದಲ ಟಿ20 ಪಂದ್ಯ ಮುಗಿದ ಬಳಿಕ ಪತ್ರಕರ್ತರೊಬ್ಬರು, “ರಿಷಭ್‌ ಪಂತ್‌ ಮರಳಿ ತಂಡಕ್ಕೆ ಬಂದಿದ್ದಾರೆ. ಈ ಸರಣಿಯಲ್ಲಿ ಅವರಿಗೆ ಆಡುವ ಅವಕಾಶ ಸಿಗಬಹುದೇ?’ ಎಂದು ರಾಹುಲ್‌ ಅವರನ್ನು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ರಾಹುಲ್‌, “ಇದು ನನಗೆ ಸಂಬಂಧಿಸಿದ ವಿಷಯವಲ್ಲ, ಇದರ ಹೊರತಾಗಿ ನನಗೆ ನೀಡಿರುವ ಜವಾಬ್ದಾರಿ ಯನ್ನು ಖುಷಿಯಿಂದ ವಹಿಸಿದ್ದೇನೆ’ ಎಂದರು.

ಕೋಚ್‌ಗಿಂತ ಹಿರಿಯರು!
ಮತ್ತೂಂದು ಘಟನೆಯಲ್ಲಿ, ಬಾಂಗ್ಲಾ ವಿರುದ್ಧ ಭರ್ಜರಿ ಅರ್ಧ ಶತಕ ಸಿಡಿಸಿ ಫಾರ್ಮ್ಗೆ ಮರಳಿರುವ ಮಲಿಕ್‌ಗೆ ಪತ್ರಕರ್ತ ರೊಬ್ಬರು, “ನಿಮ್ಮ ಕೋಚ್‌ ಮಿಸ್ಬಾಗಿಂತ ಹಿರಿಯರು ನೀವು. ಕಿರಿಯರ ಜತೆ ನೀವು ಕೂಡ ಅವರ ಜತೆ ಪಳಗಿದ್ದೀರಾ?’ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಮಲಿಕ್‌, “ಎಲ್ಲವನ್ನೂ ಕಲಿತಿದ್ದೇವೆ ಎಂದು ಯಾರೂ ಹೇಳುವುದಿಲ್ಲ, ಇದುವರೆಗೆ ತೆಂಡುಲ್ಕರ್‌ ಸಹಿತ ಯಾರೂ ಹೇಳಿಲ್ಲ, ಕ್ರಿಕೆಟಿಗರು, ಕೋಚ್‌ಗಳು ಬರುತ್ತಾರೆ ಹೋಗುತ್ತಾರೆ. ಆದರೆ ಕಲಿಕೆ ನಿರಂತರ, ಅದಕ್ಕೆ ಅಂತ್ಯವಿಲ್ಲ’ ಎಂದಿದ್ದಾರೆ. ಈ ಮೂಲಕ ಕಿರಿಯರಿಂದಲೂ ಕಲಿಯುವುದಿದೆ ಎನ್ನುವುದನ್ನು ಮಲಿಕ್‌ ಪರೋಕ್ಷವಾಗಿ ಹೇಳಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ