Udayavni Special

ಭಾರತದ ಟೆಸ್ಟ್ ಸರಣಿ ಗೆಲುವು ಶ್ಲಾಘಿಸಿದ ಶೋಹೆಬ್… ಆಂಗ್ಲರಿಗೆ ಕುಟುಕಿದ ಪಾಕ್ ಮಾಜಿ ಬೌಲರ್

Team Udayavani, Mar 7, 2021, 2:36 PM IST

sohebh

ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಜಯಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್‍ಗೆ ಲಗ್ಗೆ ಇಟ್ಟ ಭಾರತೀಯ ಕ್ರಿಕೆಟ್ ತಂಡಕ್ಕೆ ಪಾಕ್‍ನ ಮಾಜಿ ವೇಗದ ಬೌಲರ್ ಶೋಹೆಬ್ ಅಖ್ತರ್ ಹೊಗಳಿಕೆ ಸುರಿಮಳೆ ಸುರಿಸಿದ್ದಾರೆ. ಇದೇ ವೇಳೆ ಆಂಗ್ಲರ್ ತಂಡಕ್ಕೆ ತಮ್ಮ ಮೊನಚಾದ ಮಾತುಗಳಿಂದ ಚುಚ್ಚಿದ್ದಾರೆ.

ಅಹ್ಮದಾಬಾದ್ ನ ಮೊಟೆರಾದ ನರೇಂದ್ರ ಮೋದಿ ನಾಮಾಂಕಿತ ಮೈದಾನದಲ್ಲಿ ನಡೆದ ಟೆಸ್ಟ್ ಪಂದ್ಯಗಳಲ್ಲಿ ವಿರಾಟ್ ಪಡೆ ಗೆಲುವಿನ ಪಾರಮ್ಯ ಮೆರೆದಿತ್ತು. ನಾಲ್ಕು ಪಂದ್ಯಗಳ ಪೈಕಿ 3-1 ಜಯ ಸಾಧಿಸುವ ಮೂಲಕ ಸರಣಿ ವಶಪಡಿಸಿಕೊಂಡು ಬೀಗಿತ್ತು.

ಮೊಟೆರಾದಲ್ಲಿ ನಡೆದ ಪಂದ್ಯಗಳಲ್ಲಿ ಭಾರತದ ಜಯದ ಯಾತ್ರೆ ಹಲವರ ಪರಾಮರ್ಶೆಗಳಿಗೆ ಎಡೆ ಮಾಡಿಕೊಟ್ಟಿತು. ಇಲ್ಲಿಯ ಪಿಚ್ ಬಗ್ಗೆ ಪರ-ವಿರೋಧದ ಚರ್ಚೆಗಳು ಕಾವು ಪಡೆದುಕೊಂಡವು. ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್, ಮಿಮ್ಸ್ ಗಳು ಹರಿದಾಡಿದವು. ಕೆಲ ಅಂತಾರಾಷ್ಟ್ರೀಯ ಕ್ರಿಕೆಟಿಗರು ಕೂಡ ಮೋದಿ ಮೈದಾನದ ಪಿಚ್ ಬಗ್ಗೆ ತೆಗಳಿಕೆಯ ಮಾತುಗಳನ್ನಾಡಿದ್ದಾರೆ. ಇದೀಗ ಭಾರತದ ಪರ ಬ್ಯಾಟ್ ಮಾಡಿರುವ ಶೋಯೆಬ್ ಅಖ್ತರ್, ರಿಷಭ್ ಪಂತ್, ವಾಷಿಂಗ್ಟನ್ ಸುಂದರ್ ಅವರಿಂದ ಸಾಧ್ಯವಾಗಿದ್ದು, ಇಂಗ್ಲೆಂಡ್ ಆಟಗಾರರಿಂದ ಯಾಕೆ ಆಗಲಿಲ್ಲ ಎಂದು ಪ್ರಶ್ನಿಸಿದ್ದಾರೆ.

ತಮ್ಮ ಯುಟ್ಯೂಬ್ ಚಾನೆಲ್‍ನಲ್ಲಿ ಮಾತಾಡಿರುವ ಶೋಯೆಬ್ , ಇದು ಇಂಗ್ಲೆಂಡ್ ತಂಡಕ್ಕೆ ಅವಮಾನಕರ ಸೋಲು. ಇನ್ಮುಂದೆ ಅವರು ಪಿಚ್ ಬಗ್ಗೆ ಯೋಚಿಸದೆ ಚನ್ನಾಗಿ ಆಟವಾಡುವ ಬಗೆಯ ಬಗ್ಗೆ ಪರಾಮರ್ಶಿಸಿಕೊಳ್ಳುವ ಅಗತ್ಯ ಇದೆ ಎಂದಿದ್ದಾರೆ.

ಎಲ್ಲರೂ ಪಿಚ್ ಬಗ್ಗೆ ಮಾತಾಡುತ್ತಿದ್ದಾರೆ. ಆದರೆ, ಅದೇ ಪಿಚ್‍ ನಲ್ಲಿ ಭಾರತ ತಂಡ 365 ರನ್ ಗಳಿಸಿತು. ಆದರೆ, ಇದು ಇಂಗ್ಲೆಂಡ್ ತಂಡದಿಂದ ಯಾಕೆ ಆಗಲಿಲ್ಲ ? ಭಾರತೀಯ ಬ್ಯಾಟ್ಸಮನ್‍ಗಳಾದ ರಿಷಭ್ ಪಂತ್ ಹಾಗೂ ವಾಷಿಂಗಷ್ಟನ್ ಸುಂದರ ಅದ್ಭುತ ಪ್ರದರ್ಶನ ತೋರಿದರು. ಇವರಿಂದ ಸಾಧ್ಯವಾಗಿದ್ದು, ಆಂಗ್ಲರ ಆಟಗಾರರಿಗೆ ಅಸಾಧ್ಯವಾಗಿದ್ದು ಹೇಗೆ ಎಂದು ಪ್ರಶ್ನಿಸಿದ್ದಾರೆ.

ಇಂಗ್ಲೆಂಡ್ ತಂಡ ಮುಜುಗರದ ಸೋಲನ್ನು ಹೇಗೆ ತೆಗೆದುಕೊಳ್ಳುತ್ತದೆಯೇ ಗೊತ್ತಿಲ್ಲ. ಆದರೆ, ಅವರು ಈ ಸೋಲಿನಿಂದ ಹೊರಬಂದು, ಸ್ವಸ್ಫೂರ್ತಿಯಿಂದ ಆಟವಾಡಬೇಕು ಎಂದು ಕಿವಿಮಾತು ಹೇಳಿದ್ದಾರೆ ಅಖ್ತರ್.

ಇನ್ನು ಇಂಗ್ಲೆಂಡ್ ವಿರುದ್ಧ ನಡೆದ ನಾಲ್ಕನೇ ಪಂದ್ಯದಲ್ಲಿ ವಾಷಿಂಗ್ಟನ್ ಸುಂದರ್ ಅಜೇಯ 96 ರನ್ ಗಳಿಸಿದ್ದರು. ಮತ್ತೋರ್ವ ಯುವ ಆಟಗಾರ ರಿಷಭ್ ಪಂತ್ ಭರ್ಜರಿ ಶತಕ ಬಾರಿಸುವ ಮೂಲಕ ಭಾರತ ತಂಡದ ಗೆಲುವಿನ ರೂವಾರಿಗಳಾಗಿದ್ದಾರೆ.

ಟಾಪ್ ನ್ಯೂಸ್

ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಗೆ ಕೋವಿಡ್ ಪಾಸಿಟಿವ್

ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಗೆ ಕೋವಿಡ್ ಪಾಸಿಟಿವ್

ghjgfhfg

ಕಂದಕಕ್ಕೆ ಉರುಳಿದ ಕಾರು : ತಂದೆ-ಮಗ ಸೇರಿ ಐವರ ದುರ್ಮರಣ

18-6

ಪುಸ್ತಕ ಅವಲೋಕನ : ‘ಗಾಲಿಬ್ ಸ್ಮೃತಿ’ : ಗಜಲ್ ‘ಮಲ್ಲಿ’ಗೆಯ ಘಮದೊಳಗೆ

d k shivakumar

ಪ್ರಧಾನಿಯವರಿಗೆ ಜನರ ಆರೋಗ್ಯ ಬೇಕಿಲ್ಲ, ಚುನಾವಣೆಯೇ ಮುಖ್ಯವಾಗಿದೆ: ಡಿಕೆಶಿ ವಾಗ್ದಾಳಿ

Article on School days memories – College Campus

ಮಳೆಯ ದಿನಗಳ ಶಾಲಾ ನೆನಪುಗಳು ಮಜಬೂತಾಗಿದ್ದವು..!

tried to smuggle gold by concealing in his worn socks

ಮಂಗಳೂರು: ಸಾಕ್ಸ್ ಒಳಗೆ ಅರ್ಧ ಕೆ.ಜಿ ಚಿನ್ನ ಅಕ್ರಮ ಸಾಗಾಟ ಮಾಡಿದ ಪ್ರಯಾಣಿಕ ವಶಕ್ಕೆ

india/7th-pay-commission-central-govt-employees-salary-da

ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ : ದೊಡ್ಡ ಪ್ರಮಾಣದಲ್ಲಿ ಡಿಎ ಏರಿಕೆ ಮಾಡಿದ ಸರ್ಕಾರಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಡಿಸೆಂಬರ್‌ನಲ್ಲಿ ರಣಜಿಗೆ ಬಿಸಿಸಿಐ ಯೋಜನೆ: ಇರಾನಿ, ದೇವಧರ್‌, ದುಲೀಪ್‌ ಟ್ರೋಫಿ ಅನುಮಾನ!

ಡಿಸೆಂಬರ್‌ನಲ್ಲಿ ರಣಜಿಗೆ ಬಿಸಿಸಿಐ ಯೋಜನೆ: ಇರಾನಿ, ದೇವಧರ್‌, ದುಲೀಪ್‌ ಟ್ರೋಫಿ ಅನುಮಾನ!

ಇಂದು ಮೊದಲ ಡೇ ಮ್ಯಾಚ್‌; ಹ್ಯಾಟ್ರಿಕ್‌ ಹಾದಿಯಲ್ಲಿ ಆರ್‌ಸಿಬಿ

ಇಂದು ಮೊದಲ ಡೇ ಮ್ಯಾಚ್‌; ಹ್ಯಾಟ್ರಿಕ್‌ ಹಾದಿಯಲ್ಲಿ ಆರ್‌ಸಿಬಿ

ಟೀಕಿಸಿದ ಕ್ರಿಕೆಟ್‌ ಅಭಿಮಾನಿಗೆ ಪಂದ್ಯಶ್ರೇಷ್ಠ ಗೌರವ ಅರ್ಪಿಸಿದ ದೀಪಕ್‌ ಚಹರ್ !

ಟೀಕಿಸಿದ ಕ್ರಿಕೆಟ್‌ ಅಭಿಮಾನಿಗೆ ಪಂದ್ಯಶ್ರೇಷ್ಠ ಗೌರವ ಅರ್ಪಿಸಿದ ದೀಪಕ್‌ ಚಹರ್ !

ಹ್ಯಾಟ್ರಿಕ್‌ ಸೋಲಿಗೆ ತುತ್ತಾದ ಹೈದರಾಬಾದ್‌ ; ಮುಂಬೈಗೆ ಸತತ ಎರಡನೇ ಗೆಲುವು

ಹ್ಯಾಟ್ರಿಕ್‌ ಸೋಲಿಗೆ ತುತ್ತಾದ ಹೈದರಾಬಾದ್‌ ; ಮುಂಬೈಗೆ ಸತತ ಎರಡನೇ ಗೆಲುವು

ಒಲಿಂಪಿಯನ್‌, ಭಾರತದ ಮಾಜಿ ಫುಟ್ಬಾಲಿಗ ಅಹ್ಮದ್‌ ಹುಸೇನ್‌ ನಿಧನ

ಒಲಿಂಪಿಯನ್‌, ಭಾರತದ ಮಾಜಿ ಫುಟ್ಬಾಲಿಗ ಅಹ್ಮದ್‌ ಹುಸೇನ್‌ ನಿಧನ

MUST WATCH

udayavani youtube

ಕಡಿಮೆ ಭೂಮಿಯಲ್ಲಿ ಲಾಭದಾಯಕ ಕೈತೋಟ

udayavani youtube

ಕುಂಭಮೇಳ ಈಗ ಸಾಂಕೇತಿಕವಾಗಿರಲಿ: ಪ್ರಧಾನಿ ಮೋದಿ

udayavani youtube

COVID 2ನೇ ಅಲೆ ಎಚ್ಚರ ತಪ್ಪಬೇಡಿ

udayavani youtube

ಮನೆಯಂಗಳದಲ್ಲಿ ವೀಳ್ಯದೆಲೆ ಬೆಳೆದು ಯಶಸ್ಸು ಕಂಡ ನಿವೃತ ಅಧ್ಯಾಪಕ

udayavani youtube

ಕುದ್ರೋಳಿ ಗಣೇಶ್ ವಿಸ್ಮಯ ಜಾದೂ

ಹೊಸ ಸೇರ್ಪಡೆ

ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಗೆ ಕೋವಿಡ್ ಪಾಸಿಟಿವ್

ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಗೆ ಕೋವಿಡ್ ಪಾಸಿಟಿವ್

Central Guidelines for Covoid Control

ಕೋವಿಡ್ ನಿಯಂತ್ರಣಕ್ಕೆ ಕೇಂದ್ರ ಮಾರ್ಗಸೂಚಿ

ghjgfhfg

ಕಂದಕಕ್ಕೆ ಉರುಳಿದ ಕಾರು : ತಂದೆ-ಮಗ ಸೇರಿ ಐವರ ದುರ್ಮರಣ

18-6

ಪುಸ್ತಕ ಅವಲೋಕನ : ‘ಗಾಲಿಬ್ ಸ್ಮೃತಿ’ : ಗಜಲ್ ‘ಮಲ್ಲಿ’ಗೆಯ ಘಮದೊಳಗೆ

d k shivakumar

ಪ್ರಧಾನಿಯವರಿಗೆ ಜನರ ಆರೋಗ್ಯ ಬೇಕಿಲ್ಲ, ಚುನಾವಣೆಯೇ ಮುಖ್ಯವಾಗಿದೆ: ಡಿಕೆಶಿ ವಾಗ್ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.