ಶೂಟಿಂಗ್‌ನಲ್ಲಿ ಒಲಿಯಿತು ಮೊದಲ ಪದಕ


Team Udayavani, Aug 20, 2018, 6:00 AM IST

pti8192018000045b.jpg

ಪಾಲೆಂಬಾಂಗ್‌: ನಿರೀಕ್ಷೆಯಂತೆ ಶೂಟರ್‌ಗಳು 18ನೇ ಏಶ್ಯನ್‌ ಗೇಮ್ಸ್‌ನಲ್ಲಿ ಭಾರತದ ಪದಕ ಖಾತೆ ತೆರೆದಿದ್ದಾರೆ. ರವಿವಾರ ಮೊದಲ್ಗೊಂಡ ಶೂಟಿಂಗ್‌ ಸ್ಪರ್ಧೆಯ 10 ಮೀ. ಏರ್‌ ರೈಫ‌ಲ್‌ ಮಿಕ್ಸೆಡ್‌ ಟೀಮ್‌ ವಿಭಾಗದ ಸ್ಪರ್ಧೆಯಲ್ಲಿ ಅಪೂರ್ವಿ ಚಾಂಡೇಲ-ರವಿ ಕುಮಾರ್‌ ಕಂಚಿನ ಪದಕ ಗೆದ್ದರು. ಆದರೆ 10 ಮೀ. ಏರ್‌ ಪಿಸ್ತೂಲ್‌ ಮಿಕ್ಸೆಡ್‌ ಟೀಮ್‌ ಸ್ಪರ್ಧೆಯಲ್ಲಿ ಮನು ಭಾಕರ್‌-ಅಭಿಷೇಕ್‌ ವರ್ಮ ಫೈನಲ್‌ ತಲುಪದೆ ನಿರಾಸೆ ಮೂಡಿಸಿದರು.

48 ಶಾಟ್‌ಗಳ ಫೈನಲ್‌ನಲ್ಲಿ ಅಪೂರ್ವಿ ಚಾಂಡೇಲ-ರವಿ ಕುಮಾರ್‌ 429.9 ಅಂಕ ಸಂಪಾದಿಸಿ ತೃತೀಯ ಸ್ಥಾನಿಯಾದರು. ಚೈನೀಸ್‌ ತೈಪೆಯ ಯಿಂಹ್‌ಶಿನ್‌ ಲಿನ್‌-ಶೊಚುವಾನ್‌ ಲು ಚಿನ್ನ ಗೆದ್ದರೆ (494.1 ಅಂಕ), ಚೀನದ ರೌಝು ಜಾವೊ-ಹೊರಾನ್‌ ಯಾಂಗ್‌ ರಜತವನ್ನು ತಮ್ಮದಾಗಿಸಿಕೊಂಡರು (492.5 ಅಂಕ).

ಕೊರಿಯ ಮತ್ತು ಮಂಗೋಲಿಯಾ ಕ್ರಮವಾಗಿ 4ನೇ ಹಾಗೂ 5ನೇ ಸ್ಥಾನ ಪಡೆದವು. ಏಶ್ಯಾಡ್‌ನ‌ಲ್ಲಿ ಏರ್‌ ರೈಫ‌ಲ್‌ ಮಿಕ್ಸೆಡ್‌ ಟೀಮ್‌ ಸ್ಪರ್ಧೆಯನ್ನು ಇದೇ ಮೊದಲ ಅಳವಡಿಸಲಾಗಿತ್ತು.ಮೊದಲ ಸರಣಿಯಲ್ಲಿ 102.9 ಅಂಕ ಗಳಿಸಿದ್ದ ಭಾರತ ದ್ವಿತೀಯ ಸ್ಥಾನದಲ್ಲಿತ್ತು. 3ನೇ ಸುತ್ತಿನ ತನಕವೂ ಭಾರತ ಈ ಸ್ಥಾನವನ್ನು ಕಾಯ್ದುಕೊಂಡಿತ್ತು. ಬಳಿಕ ಚೀನ ಮುನ್ನುಗ್ಗಿತು. ಮಂಗೋಲಿಯಾ ಮೊದಲು ಹೊರಬಿತ್ತು. ಬಳಿಕ ಕೊರಿಯ ನಿರ್ಗಮಿಸಿತು.

ಅಪೂರ್ವಿಗೆ ಮೊದಲ ಏಶ್ಯಾಡ್‌ ಪದಕ
ಇದು ಅಪೂರ್ವಿ ಚಾಂಡೇಲ ಪಾಲಾದ ಮೊದಲ ಏಶ್ಯಾಡ್‌ ಪದಕ. 10 ಮೀ. ಏರ್‌ ರೈಫ‌ಲ್‌ ವೈಯಕ್ತಿಕ ಸ್ಪರ್ಧೆಯಲ್ಲೂ ಅವರು ಕಣಕ್ಕಿಳಿಯುವರು. ಇದೇ ವಿಭಾಗದ 2014ರ ಗ್ಲಾಸೊY ಕಾಮನ್ವೆಲ್ತ್‌ ಗೇಮ್ಸ್‌ ಸ್ಪರ್ಧೆಯಲ್ಲಿ ಅವರು ಬಂಗಾರದಿಂದ ಸಿಂಗಾರಗೊಂಡಿದ್ದರು.

ವಿಶ್ವಕಪ್‌ನಲ್ಲಿ ಕಂಚಿನ ಪದಕ ಜಯಿಸಿದ್ದ ರವಿ ಕುಮಾರ್‌ ಕಳೆದ ಏಶ್ಯಾಡ್‌ನ‌ಲ್ಲಿ 10 ಮೀ. ರೈಫ‌ಲ್‌ ತಂಡ ಸ್ಪರ್ಧೆಯಲ್ಲೂ ಕಂಚಿನ ಪದಕ ಗೆದ್ದಿದ್ದರು. ಒಲಿಂಪಿಕ್ಸ್‌ ಹೀರೋ ಅಭಿನವ್‌ ಬಿಂದ್ರಾ ಅವರು ರವಿ ಕುಮಾರ್‌ ಅವರ ಮೆಂಟರ್‌ ಆಗಿದ್ದಾರೆ.
“ಅಪೂರ್ವಿಯಿಂದಾಗಿ ಈ ಕಂಚು ನನಗೆ ಲಭಿಸಿತು. ಅರ್ಹತಾ ಸುತ್ತಿನಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಫೈನಲ್‌ ಸ್ಪರ್ಧೆ ನಿರಾಸೆ ತಂದಿದೆ. ನಮ್ಮಿಬ್ಬರಿಗೆ ಒಟ್ಟಾಗಿ ಅಭ್ಯಾಸ ನಡೆಸಲು ಹೆಚ್ಚಿನ ಅವಕಾಶ ಲಭಿಸಲಿಲ್ಲ’ ಎಂಬುದು ರವಿ ಕುಮಾರ್‌ ಪ್ರತಿಕ್ರಿಯೆ.

“ವಿಶ್ವಕಪ್‌ನಲ್ಲಿ ನಾವಿಬ್ಬರೂ 4ನೇ ಸ್ಥಾನ ಸಂಪಾದಿಸಿದ್ದೆವು. ಇದು ನನ್ನ ಮೊದಲ ಏಶ್ಯಾಡ್‌ ಪದಕ ಹಾಗೂ ಈ ಕೂಟದಲ್ಲಿ ದೇಶಕ್ಕೆ ಲಭಿಸಿದ ಮೊದಲ ಪದಕವೂ ಆಗಿದೆ. ಇದಕ್ಕಾಗಿ ಬಹಳ ಖುಷಿಯಾಗುತ್ತಿದೆ. ಇದು ನಾಳಿನ 10 ಮೀ. ರೈಫ‌ಲ್‌ ಸ್ಪರ್ಧೆಗೆ ಸ್ಫೂರ್ತಿ ತುಂಬಿದೆ’
– ಅಪೂರ್ವಿ ಚಾಂಡೇಲ

ಟಾಪ್ ನ್ಯೂಸ್

Mother Geetha hiremath statement on daughter Neha incident

Hubli; ನನ್ನ ಮಗಳು ಹೊಲಸು ಕೆಲಸ ಮಾಡಿಲ್ಲ…: ನೇಹಾ ತಾಯಿ ಗೀತಾ ಹಿರೇಮಠ ಹೇಳಿಕೆ

8

Mollywood: ಈ ದಿನ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿಗೆ ಬರುವುದು ಖಚಿತ; ಯಾವುದರಲ್ಲಿ ಸ್ಟ್ರೀಮ್?

kl rahul breaks ms dhoni record in ipl

IPL 2024; ಎಂ.ಎಸ್ ಧೋನಿ ದಾಖಲೆ ಮುರಿದ ಕೆ.ಎಲ್ ರಾಹುಲ್

7-snake

Snake: 50 ಅಡಿ ಉದ್ದದ ದೈತ್ಯ ಹಾವು “ವಾಸುಕಿ’!

Mollywood: ಸೂಪರ್‌ ಹಿಟ್‌ ʼಪ್ರೇಮಲುʼ ಸೀಕ್ವೆಲ್‌ ಅನೌನ್ಸ್; ಹೆಚ್ಚಾಯಿತು ನಿರೀಕ್ಷೆ

Mollywood: ಸೂಪರ್‌ ಹಿಟ್‌ ʼಪ್ರೇಮಲುʼ ಸೀಕ್ವೆಲ್‌ ಅನೌನ್ಸ್; ಹೆಚ್ಚಾಯಿತು ನಿರೀಕ್ಷೆ

Hubli; Dingaleshwar Swamiji received payment to compete: Yatnal alleges

Hubli; ಸ್ಪರ್ಧೆ ಮಾಡಲು ದಿಂಗಾಲೇಶ್ವರ ಸ್ವಾಮೀಜಿಗೆ ಪೇಮೆಂಟ್ ಬಂದಿದೆ: ಯತ್ನಾಳ್ ಆರೋಪ

Box office: ಈ ವಾರ ಬಾಲಿವುಡ್‌ನಲ್ಲಿ ಎರಡು ಸಿನಿಮಾಗಳು ರಿಲೀಸ್: 1st Day ಗಳಿಸಿದ್ದೆಷ್ಟು?

Box office: ಈ ವಾರ ಬಾಲಿವುಡ್‌ನಲ್ಲಿ ಎರಡು ಸಿನಿಮಾಗಳು ರಿಲೀಸ್: 1st Day ಗಳಿಸಿದ್ದೆಷ್ಟು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kl rahul breaks ms dhoni record in ipl

IPL 2024; ಎಂ.ಎಸ್ ಧೋನಿ ದಾಖಲೆ ಮುರಿದ ಕೆ.ಎಲ್ ರಾಹುಲ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ

1-RCB

RCB ; ರವಿವಾರ ಕೆಕೆಆರ್‌ ವಿರುದ್ಧ ಈಡನ್‌ನಲ್ಲಿ ಗೋ ಗ್ರೀನ್‌ ಗೇಮ್‌

1-ewqe

Olympics ಅರ್ಹತೆ ತಪ್ಪುವ ಭೀತಿಯಲ್ಲಿ ದೀಪಕ್‌, ಸುಜೀತ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

9

Neha Case: ನೇಹಾ ಅಮಾನುಷ ಹತ್ಯೆಗೆ ಜೆ.ಪಿ.ಹೆಗ್ಡೆ ಖಂಡನೆ

Mother Geetha hiremath statement on daughter Neha incident

Hubli; ನನ್ನ ಮಗಳು ಹೊಲಸು ಕೆಲಸ ಮಾಡಿಲ್ಲ…: ನೇಹಾ ತಾಯಿ ಗೀತಾ ಹಿರೇಮಠ ಹೇಳಿಕೆ

8-muddebihala

Muddebihal: ನೇಹಾ ಕೊಲೆ ಖಂಡಿಸಿ ಪ್ರತಿಭಟನೆ: ಮುಸ್ಲಿಂ ಮುಖಂಡರು ಭಾಗಿ

8

Mollywood: ಈ ದಿನ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿಗೆ ಬರುವುದು ಖಚಿತ; ಯಾವುದರಲ್ಲಿ ಸ್ಟ್ರೀಮ್?

kl rahul breaks ms dhoni record in ipl

IPL 2024; ಎಂ.ಎಸ್ ಧೋನಿ ದಾಖಲೆ ಮುರಿದ ಕೆ.ಎಲ್ ರಾಹುಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.