ಶೂಟಿಂಗ್‌: ಮನು, ರಹಿ ಫೈನಲಿಗೇರಲು ವಿಫ‌ಲ

Team Udayavani, Nov 21, 2019, 1:20 AM IST

ಪುತಿಯನ್‌ (ಚೀನ): ಭಾರತದ ಮನು ಭಾಕರ್‌ ಮತ್ತು ರಹಿ ಸನೊìಬತ್‌ ಅವರು ವಿಶ್ವಕಪ್‌ ಶೂಟಿಂಗ್‌ ಫೈನಲ್ಸ್‌ನ ವನಿತೆಯರ 25 ಮೀ. ಏರ್‌ ಪಿಸ್ತೂಲ್‌ ವಿಭಾಗದಲ್ಲಿ ಫೈನಲ್‌ ಹಂತಕ್ಕೇರಲು ವಿಫ‌ಲರಾಗಿದ್ದಾರೆ.

ಕಾಮನ್‌ವೆಲ್ತ್‌ ಗೇಮ್ಸ್‌ ಚಿನ್ನ ವಿಜೇತೆ ಮನು ಅವರು ಅರ್ಹತಾ ಸುತ್ತಿನಲ್ಲಿ 583 ಅಂಕ ಗಳಿಸಿದ್ದರು. ಪ್ರಿಸಿಸನ್‌ ಮತ್ತು ರ್ಯಾಪಿಡ್‌ನ‌ಲ್ಲಿ ಅನುಕ್ರಮವಾಗಿ 292 ಮತ್ತು 291 ಅಂಕ ಪಡೆದಿದ್ದರು. ಇನ್ನಿತರ ಇಬ್ಬರು ಶೂಟರ್‌ಗಳಾದ ಜರ್ಮನಿಯ ದೊರೀನ್‌ ವೆನ್ನೆಕ್ಯಾಂಪ್‌ ಮತ್ತು ಆಸ್ಟ್ರೇಲಿಯದ ಎಲೆನಾ ಗಾಲಿಯಾಬೊವಿಟ್‌c ಅರ್ಹತಾ ಸುತ್ತಿನಲ್ಲಿ ಕೂಡ 583 ಅಂಕ ಗಳಿಸಿದ್ದರು. ಆದರೆ ಉತ್ತಮ ನಿರ್ವಹಣೆಯ ಆಧಾರದಲ್ಲಿ ದೊರೀನ್‌ ಫೈನಲ್‌ ಹಂತಕ್ಕೆ ಅರ್ಹತೆ ಗಳಿಸಿದರು.

ರಹಿ ಅವರ ನಿರ್ವಹಣೆ ಇನ್ನಷ್ಟು ಕಳಪೆಮಟ್ಟದಲ್ಲಿತ್ತು. ಏಶ್ಯನ್‌ ಗೇಮ್ಸ್‌ ಚಿನ್ನ ವಿಜೇತೆ ರಹಿ ಅರ್ಹತಾ ಸುತ್ತಿನಲ್ಲಿ 569 ಅಂಕ ಗಳಿಸಿ ಕೊನೆಯವಾಗಿ ಸ್ಪರ್ಧೆ ಮುಗಿಸಿ ನಿರಾಸೆಗೊಳಿಸಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ