ಶಟ್ಲರ್ ಸಿಕ್ಕಿ, ಕಿರಣ್ ಕೋವಿಡ್ ನೆಗೆಟಿವ್; ಸೋಮವಾರದಿಂದ ಶಿಬಿರ
Team Udayavani, Aug 15, 2020, 5:14 PM IST
ಹೈದರಾಬಾದ್: ಶನಿವಾರದ ದ್ವಿತೀಯ ಕೋವಿಡ್-19 ಪರೀಕ್ಷೆಯಲ್ಲಿ ಶಟ್ಲರ್ ಎನ್. ಸಿಕ್ಕಿ ರೆಡ್ಡಿ ಮತ್ತು ಫಿಸಿಯೋ ಕಿರಣ್ ಚಲ್ಲಂಗುಡ್ಲ ಅವರ ಫಲಿತಾಂಶ ನೆಗೆಟಿವ್ ಬಂದಿರುವುದು ಭಾರತದ ಬ್ಯಾಡ್ಮಿಂಟನ್ ವಲಯದಲ್ಲಿ ಸಂತಸ ಮೂಡಿಸಿದೆ. ಇದರಿಂದ ಸೋಮವಾರದಿಂದ ಹೈದರಾಬಾದ್ನಲ್ಲಿ ಬ್ಯಾಡ್ಮಿಂಟನ್ ಶಿಬಿರ ಪುನರಾರಂಭಗೊಳ್ಳಲಿದೆ.
ಕಾಮನ್ವೆಲ್ತ್ ಗೇಮ್ಸ್ ಕಂಚಿನ ಪದಕ ವಿಜೇತೆ, 26 ವರ್ಷದ ಸಿಕ್ಕಿ ರೆಡ್ಡಿ ಮತ್ತು ಕಿರಣ್ ಸಿ. ಅವರಲ್ಲಿ ಗುರುವಾರ ಪಾಸಿಟಿವ್ ಕಂಡುಬಂದಿತ್ತು. ಇಬ್ಬರೂ ಆಗ ಸಾಯ್ನ ಪುಲ್ಲೇಲ ಗೋಪಿಚಂದ್ ಅಕಾಡೆಮಿಯಲ್ಲಿದ್ದರು. ವಿಷಯ ತಿಳಿದ ಕೂಡಲೇ ಅಕಾಡೆಮಿಯನ್ನು ಮುಚ್ಚಿ ಸ್ಯಾನಿಟೈಸ್ ಮಾಡಲಾಯಿತು. ಶಿಬಿರವನ್ನು ಸ್ವಲ್ಪ ದಿನಗಳ ಕಾಲ ಸ್ಥಗಿತಗೊಳಿಸಲಾಯಿತು.
ಇಬ್ಬರೂ ಶುಕ್ರವಾರ ಖಾಸಗಿ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಕೊಂಡಿದ್ದು, ಇಬ್ಬರ ಫಲಿತಾಂಶವೂ ನೆಗೆಟಿವ್ ಬಂದಿದೆ ಎಂಬುದಾಗಿ ಸಾಯ್ ತಿಳಿಸಿದೆ. ಇವರಿಬ್ಬರ ಕುಟುಂಬದ ಸದಸ್ಯರಲ್ಲೂ ನೆಗೆಟಿವ್ ಬಂದಿದೆ.
ಆಟಗಾರರು, ಕೋಚ್ ಹಾಗೂ ಸಹಾಯಕ ಸಿಬಂದಿ ಸೇರಿದಂತೆ 21 ಮಂದಿಗೆ ಆ. 7ರಂದು ಸಾಯ್ ಕೋವಿಡ್-19 ಟೆಸ್ಟ್ ನಡೆಸಿತ್ತು. ಇದರಲ್ಲಿ 19 ಮಂದಿಯ ಫಲಿತಾಂಶ ನೆಗೆಟಿವ್ ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ
IPL; ಲಕ್ನೋ ಸೂಪರ್ ಜೈಂಟ್ಸ್ ಎದುರಾಳಿ:ಚೆನ್ನೈಗೆ ಇದು ಸೇಡಿನ ಪಂದ್ಯ
IPL; ಆಸ್ಟ್ರೇಲಿಯನ್ ಆಲ್ರೌಂಡರ್ ಮಾರ್ಷ್ ಔಟ್
IPL ನಾಯಕರಿಗೆ ದಂಡ, ಕೊಹ್ಲಿಗೂ ದಂಡ ; 29 ಸಲ 200 ರನ್ ನೀಡಿದ ಆರ್ಸಿಬಿ!
IPL; ಮುಂಬೈ ಎದುರು ರಾಜಸ್ಥಾನ್ ಯಶಸ್ವಿ ಗೆಲುವಿನ ಓಟ: ಜೈಸ್ವಾಲ್ ಅಮೋಘ ಶತಕ