ಮಾಂಟ್ರಿಯಲ್‌ ಟೆನಿಸ್‌: ವೀನಸ್‌ ವಿರುದ್ಧ ಹಾಲೆಪ್‌ ಹಾರಾಟ

Team Udayavani, Aug 11, 2018, 8:21 AM IST

17.jpg

ಮಾಂಟ್ರಿಯಲ್‌: ವಿಶ್ವದ ನಂಬರ್‌ ವನ್‌ ಆಟಗಾರ್ತಿ ಸಿಮೋನಾ ಹಾಲೆಪ್‌ ಮಾಂಟ್ರಿಯಲ್‌ ಎಟಿಪಿ ಟೆನಿಸ್‌ ಪಂದ್ಯಾವಳಿಯಲ್ಲಿ ವೀನಸ್‌ ವಿಲಿಯಮ್ಸ್‌ ಆಟವನ್ನು ಕೊನೆಗೊಳಿಸಿದ್ದಾರೆ. ಕೇವಲ 71 ನಿಮಿಷಗಳ ಹೋರಾಟದ ಬಳಿಕ ವೀನಸ್‌ಗೆ 6-2, 6-2 ಅಂತರದ ಸೋಲುಣಿಸಿ ಕ್ವಾರ್ಟರ್‌ ಫೈನಲ್‌ ತಲುಪಿದ್ದಾರೆ. ರಶ್ಯದ ಮರಿಯಾ ಶರಪೋವಾ ಕೂಡ ವೀನಸ್‌ ಹಾದಿಯನ್ನೇ ಹಿಡಿದಿದ್ದಾರೆ.

ರಶ್ಯದ ಪಾವು ಚೆಂಕೋವಾ ವಿರುದ್ಧದ ಮಳೆಬಾಧಿತ ಸುದೀರ್ಘ‌ ಪಂದ್ಯವನ್ನು ಗೆದ್ದ ಕೆಲವೇ ಗಂಟೆಗಳಲ್ಲಿ ಸಿಮೋನಾ ಹಾಲೆಪ್‌ ಪ್ರಿ-ಕ್ವಾರ್ಟರ್‌ ಫೈನಲ್‌ ಆಡಲಿಳಿ ದಿದ್ದರು. ಹಾಲೆಪ್‌ ಅವರ ಎಂಟರ ಸುತ್ತಿನ ಎದುರಾಳಿ ಫ್ರಾನ್ಸ್‌ನ ಕ್ಯಾರೋಲಿನ್‌ ಗಾರ್ಸಿಯಾ. ಅವರು ಮರಿಯಾ ಶರಪೋವಾಗೆ 6-3, 6-2 ಅಂತರದ ಸೋಲುಣಿಸಿದರು. ಕಳೆದ ವರ್ಷವೂ ಹಾಲೆಪ್‌-ಗಾರ್ಸಿಯಾ ಕ್ವಾರ್ಟರ್‌ ಫೈನಲ್‌ನಲ್ಲಿ ಎದುರಾಗಿದ್ದರು. ಇದರಲ್ಲಿ ಹಾಲೆಪ್‌ಗೆ ಗೆಲುವು ಒಲಿದಿತ್ತು.

ಸ್ಟೀಫ‌ನ್ಸ್‌-ಸೆವತ್ಸೋವಾ ಮುಖಾಮುಖಿ
ಯುಎಸ್‌ ಓಪನ್‌ ಚಾಂಪಿಯನ್‌ ಸ್ಲೋನ್‌ ಸ್ಟೀಫ‌ನ್ಸ್‌ ಸ್ಪೇನಿನ ಕಾರ್ಲಾ ಸೂರೆಜ್‌ ನವಾರೊ ವಿರುದ್ಧ 6-2, 7-5 ಅಂತರದ ಜಯ ಸಾಧಿಸಿ ಕ್ವಾರ್ಟರ್‌ ಫೈನಲ್‌ ತಲುಪಿದ್ದಾರೆ. ಇವರ ಎದುರಾಳಿ ಲಾತ್ವಿಯಾದ ಅನಾಸ್ತಾಸಿಜಾ ಸೆವತ್ಸೋವಾ. ಅವರು ಜರ್ಮನಿಯ ಜೂಲಿಯಾ ಜಾರ್ಜಸ್‌ ವಿರುದ್ಧ 6-3, 7-6 (7-2) ಅಂತರದಿಂದ ಗೆದ್ದು ಬಂದರು. 

ಫ್ರಾನ್ಸ್‌ನ ಅಲಿಜೆ ಕಾರ್ನೆಟ್‌ ವಿರುದ್ಧ 7-6 (7-3), 6-4 ಅಂತರದ ಗೆಲುವು ಸಾಧಿಸಿದ ಆಸ್ಟ್ರೇಲಿಯದ ಆ್ಯಶ್ಲಿ ಬಾರ್ಟಿ ಕೂಡ ಕ್ವಾರ್ಟರ್‌ ಫೈನಲ್‌ ತಲುಪಿದ್ದಾರೆ. ಇವರ ಎದುರಾಳಿ ಹಾಲೆಂಡ್‌ನ‌ ಕಿಕಿ ಬರ್ಟೆನ್ಸ್‌. ಇನ್ನೊಂದು ಮುಖಾ ಮುಖೀಯಲ್ಲಿ ಬರ್ಟೆನ್ಸ್‌ 6-3, 6-2ರಿಂದ ಪೆಟ್ರಾ ಕ್ವಿಟೋವಾಗೆ ಸೋಲಿನೇಟು ನೀಡಿದರು.ಕ್ಯಾರೋಲಿನ್‌ ವೋಜ್ನಿಯಾಕಿ ಅವರನ್ನು ಮಣಿಸಿ ಟೆನಿಸ್‌ ಬಾಳ್ವೆಯ ದೊಡ್ಡ ಗೆಲುವು ಸಾಧಿಸಿದ ಬೆಲರೂಸ್‌ನ ಅರಿನಾ ಸಬಲೆಂಕಾ ಪ್ರಿ-ಕ್ವಾರ್ಟರ್‌ ಫೈನಲ್‌ನಲ್ಲಿ ಬೆಲ್ಜಿಯಂನ ಎಲಿಸ್‌ ಮಾರ್ಟೆನ್ಸ್‌ಗೆ ಶರಣಾಗಿದ್ದಾರೆ.

ಮಳೆಯಿಂದ ವಿಳಂಬಗೊಂಡ ದ್ವಿತೀಯ ಸುತ್ತಿನ ಪಂದ್ಯವೊಂದ ರಲ್ಲಿ ಬ್ರಿಟನ್ನಿನ ಜೊಹಾನ್ನಾ ಕೊಂಟಾ ಮಾಜಿ ನಂ.1 ಆಟಗಾರ್ತಿ ವಿಕ್ಟೋರಿಯಾ ಅಜರೆಂಕಾಗೆ 6-3, 6-1ರಿಂದ ಆಘಾತವಿಕ್ಕಿದ್ದಾರೆ. ಬಳಿಕ ಎಲೆನಾ ಸ್ವಿಟೋಲಿನಾಗೆ 6-3, 6-4ರಿಂದ ಶರಣಾಗಿದ್ದಾರೆ.

ಟಾಪ್ ನ್ಯೂಸ್

‘Sachin Tendulkar would have scored one lakh runs’: Shoaib Akhtar

ಈ ಒಂದು ನಿಯಮ ಇದ್ದಿದ್ದರೆ ಸಚಿನ್ ಲಕ್ಷ ರನ್ ಗಳಿಸುತ್ತಿದ್ದರು..: ಅಖ್ತರ್

Under 19 WC: Australia won against Pakistan

ಅಂಡರ್ 19 ವಿಶ್ವಕಪ್: ಪಾಕ್ ಮಣಿಸಿ ಸೆಮಿ ಫೈನಲ್ ಪ್ರವೇಶಿಸಿದ ಆಸ್ಟ್ರೇಲಿಯಾ

ಕರಪತ್ರ ಹಂಚುವ ಮೂಲಕ ಬಿಜೆಪಿ ಕೋವಿಡ್ ಹರಡುತ್ತಿದೆ: ಅಖಿಲೇಶ್ ಯಾದವ್ ಆರೋಪ

ಕರಪತ್ರ ಹಂಚುವ ಮೂಲಕ ಬಿಜೆಪಿ ಕೋವಿಡ್ ಹರಡುತ್ತಿದೆ: ಅಖಿಲೇಶ್ ಯಾದವ್ ಆರೋಪ

ಪ್ರತಿ ಗ್ರಾಮದಲ್ಲೂ ಗೋಶಾಲೆ ಆರಂಭಿಸಿ: ಹೈಕೋರ್ಟ್‌ ಮೌಖಿಕ ಸೂಚನೆ

ಪ್ರತಿ ಗ್ರಾಮದಲ್ಲೂ ಗೋಶಾಲೆ ಆರಂಭಿಸಿ: ಹೈಕೋರ್ಟ್‌ ಮೌಖಿಕ ಸೂಚನೆ

ಕುಲಶೇಖರ: ರೈಲು ಮಾರ್ಗದ 2ನೇ ಸುರಂಗ ಶೀಘ್ರ ಸಂಚಾರಕ್ಕೆ ಮುಕ್ತ

ಕುಲಶೇಖರ: ರೈಲು ಮಾರ್ಗದ 2ನೇ ಸುರಂಗ ಶೀಘ್ರ ಸಂಚಾರಕ್ಕೆ ಮುಕ್ತ

ಗ್ರಾ.ಪಂ. ವ್ಯಾಪ್ತಿಯಲ್ಲಿ ಸಣ್ಣ ಬ್ಲಾಕ್‌ಗಳಿಗೆ ಅವಕಾಶ: ಸಚಿವ ಹಾಲಪ್ಪ ಆಚಾರ್‌

ಗ್ರಾ.ಪಂ. ವ್ಯಾಪ್ತಿಯಲ್ಲಿ ಸಣ್ಣ ಬ್ಲಾಕ್‌ಗಳಿಗೆ ಅವಕಾಶ: ಸಚಿವ ಹಾಲಪ್ಪ ಆಚಾರ್‌

ಮೊಟ್ಟೆ  ಖರೀದಿಗೆ ತಾ| ಹಂತದಲ್ಲಿ ಇ-ಟೆಂಡರ್‌

ಮೊಟ್ಟೆ  ಖರೀದಿಗೆ ತಾ| ಹಂತದಲ್ಲಿ ಇ-ಟೆಂಡರ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

‘Sachin Tendulkar would have scored one lakh runs’: Shoaib Akhtar

ಈ ಒಂದು ನಿಯಮ ಇದ್ದಿದ್ದರೆ ಸಚಿನ್ ಲಕ್ಷ ರನ್ ಗಳಿಸುತ್ತಿದ್ದರು..: ಅಖ್ತರ್

Under 19 WC: Australia won against Pakistan

ಅಂಡರ್ 19 ವಿಶ್ವಕಪ್: ಪಾಕ್ ಮಣಿಸಿ ಸೆಮಿ ಫೈನಲ್ ಪ್ರವೇಶಿಸಿದ ಆಸ್ಟ್ರೇಲಿಯಾ

ಎರಡು ಹಂತಗಳಲ್ಲಿ ರಣಜಿ ಟ್ರೋಫಿ; ಐಪಿಎಲ್‌ಗೂ ಮುನ್ನ ಗ್ರೂಪ್‌ ಹಂತ, ಬಳಿಕ ನಾಕೌಟ್‌ ಹಂತ

ಎರಡು ಹಂತಗಳಲ್ಲಿ ರಣಜಿ ಟ್ರೋಫಿ; ಐಪಿಎಲ್‌ಗೂ ಮುನ್ನ ಗ್ರೂಪ್‌ ಹಂತ, ಬಳಿಕ ನಾಕೌಟ್‌ ಹಂತ

ಜಿಂಬಾಬ್ವೆ ತಂಡದ ಮಾಜಿ ನಾಯಕ ಬ್ರೆಂಡನ್‌ ಟೇಲರ್‌ಗೆ ಮೂರೂವರೆ ವರ್ಷ ನಿಷೇಧ

ಜಿಂಬಾಬ್ವೆ ತಂಡದ ಮಾಜಿ ನಾಯಕ ಬ್ರೆಂಡನ್‌ ಟೇಲರ್‌ಗೆ ಮೂರೂವರೆ ವರ್ಷ ನಿಷೇಧ

ಪರ್ತ್‌ ಸ್ಕಾರ್ಚರ್ ಬಿಗ್‌ ಬಾಶ್‌ ಚಾಂಪಿಯನ್‌

ಪರ್ತ್‌ ಸ್ಕಾರ್ಚರ್ ಬಿಗ್‌ ಬಾಶ್‌ ಚಾಂಪಿಯನ್‌

MUST WATCH

udayavani youtube

ಹುತಾತ್ಮ ಸೈನಿಕ ಮಗನ ಪ್ರತಿಮೆ ನಿರ್ಮಿಸಿದ ತಾಯಿ

udayavani youtube

ಇಲ್ಲಿದೆ ‘ಶುದ್ಧ’ ಸಾವಯವ ಅಕ್ಕಿ !ನೀವು ಕೇಳಿಯೇ ಇರದ 3 ವಿಶೇಷತೆಗಳು

udayavani youtube

400 ಕೋಟಿ ಬೆಲೆಬಾಳುವ 47 ಕೆಜಿ ಹೆರಾಯಿನ್ವಶಪಡಿಸಿಕೊಂಡ BSF

udayavani youtube

ಪ್ರಾಣವನ್ನೇ ಪಣಕ್ಕಿಟ್ಟು ನಾಯಿಯನ್ನು ರಕ್ಷಿಸಿದ ತೆಲಂಗಾಣ ಪೊಲೀಸ್​​ ಅಧಿಕಾರಿ

udayavani youtube

ಬೀದಿ ದೀಪ, ಸಿಬ್ಬಂದಿ ಸಂಬಳದ್ದೇ ಬಿಸಿ ಬಿಸಿ ಚರ್ಚೆ

ಹೊಸ ಸೇರ್ಪಡೆ

‘Sachin Tendulkar would have scored one lakh runs’: Shoaib Akhtar

ಈ ಒಂದು ನಿಯಮ ಇದ್ದಿದ್ದರೆ ಸಚಿನ್ ಲಕ್ಷ ರನ್ ಗಳಿಸುತ್ತಿದ್ದರು..: ಅಖ್ತರ್

1elephant

ಹುಣಸೂರು: ಗುಂಡೇಟಿಗೆ ಕಾಡಾನೆ ಬಲಿ

Under 19 WC: Australia won against Pakistan

ಅಂಡರ್ 19 ವಿಶ್ವಕಪ್: ಪಾಕ್ ಮಣಿಸಿ ಸೆಮಿ ಫೈನಲ್ ಪ್ರವೇಶಿಸಿದ ಆಸ್ಟ್ರೇಲಿಯಾ

ಕರಪತ್ರ ಹಂಚುವ ಮೂಲಕ ಬಿಜೆಪಿ ಕೋವಿಡ್ ಹರಡುತ್ತಿದೆ: ಅಖಿಲೇಶ್ ಯಾದವ್ ಆರೋಪ

ಕರಪತ್ರ ಹಂಚುವ ಮೂಲಕ ಬಿಜೆಪಿ ಕೋವಿಡ್ ಹರಡುತ್ತಿದೆ: ಅಖಿಲೇಶ್ ಯಾದವ್ ಆರೋಪ

ಪ್ರತಿ ಗ್ರಾಮದಲ್ಲೂ ಗೋಶಾಲೆ ಆರಂಭಿಸಿ: ಹೈಕೋರ್ಟ್‌ ಮೌಖಿಕ ಸೂಚನೆ

ಪ್ರತಿ ಗ್ರಾಮದಲ್ಲೂ ಗೋಶಾಲೆ ಆರಂಭಿಸಿ: ಹೈಕೋರ್ಟ್‌ ಮೌಖಿಕ ಸೂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.