4ನೇ ಸುತ್ತಿನಲ್ಲಿ ಸಿಮೋನಾ ಹಾಲೆಪ್
Team Udayavani, Jun 2, 2019, 10:02 AM IST
ಪ್ಯಾರಿಸ್: ಹಾಲಿ ಚಾಂಪಿಯನ್ ಸಿಮೋನಾ ಹಾಲೆಪ್ ಫ್ರೆಂಚ್ ಓಪನ್ ಕೂಟದ 4ನೇ ಸುತ್ತಿಗೆ ಏರಿದ್ದಾರೆ. ಶನಿವಾರದ ಪಂದ್ಯದಲ್ಲಿ ಅವರು ಲೆಸಿಯಾ ಸುರೆಂಕೊ ವಿರುದ್ಧ 6-2, 6-1 ಅಂತರದ ಸುಲಭ ಜಯ ಸಾಧಿಸಿದರು. ಇದರೊಂದಿಗೆ ಸುರೆಂಕೊ ವಿರುದ್ಧ ಆಡಿದ ಎಲ್ಲ 8 ಪಂದ್ಯಗಳಲ್ಲೂ ಹಾಲೆಪ್ ಜಯಿಸಿದಂತಾಯಿತು.
ಒಸಾಕಾ ಔಟ್
ವಿಶ್ವದ ನಂ.1 ಆಟಗಾರ್ತಿ ಜಪಾನಿನ ನವೋಮಿ ಒಸಾಕಾ ಅವರ ಹ್ಯಾಟ್ರಿಕ್ ಗೆಲುವಿನ ಓಟಕ್ಕೆ ಜೆಕ್ ಗಣರಾಜ್ಯದ ಕ್ಯಾಥರಿನಾ ಸಿನಿಯಕೋವಾ ತಡೆಯಾಗಿದ್ದಾರೆ. ಹಾಲಿ ಯುಎಸ್ ಓಪನ್ ಹಾಗೂ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಆಗಿರುವ ಒಸಾಕಾ ಅವರನ್ನು ಸಿನಿಯಕೋವಾ 6-4, 6-2 ನೇರ ಸೆಟ್ಗಳಿಂದ ಮಣಿಸಿದರು.
ಸಿಸಿಪಸ್ ದಾಖಲೆ
ಸ್ಟೆಫನೆಸ್ ಸಿಸಿಪಸ್ ನೂತನ ದಾಖಲೆಯೊಂದಿಗೆ ಮುನ್ನುಗ್ಗಿದ್ದಾರೆ. 83 ವರ್ಷಗಳ ಬಳಿಕ ಗ್ರೀಕ್ ಟೆನಿಸಿಗನೋರ್ವ ಫ್ರೆಂಚ್ ಓಪನ್ ಕೂಟದ 16ರ ಸುತ್ತು ಪ್ರವೇಶಿಸಿದ ಹೆಗ್ಗಳಿಕೆ ಅವರದಾಗಿದೆ. ಸಿಸಿಪಸ್ ಫಿಲಿಪ್ ಕ್ರಜಿನೋವಿಕ್ ವಿರುದ್ಧ ಭಾರೀ ಹೋರಾಟ ನಡೆಸಿ 7-5, 6-3, 6-7 (5-7), 7-6 (8-6) ಅಂತರದಿಂದ ಗೆಲುವು ಕಾಣುವಲ್ಲಿ ಯಶಸ್ವಿಯಾದರು.
ಸಿಸಿಪಸ್ ಅವರ ಮುಂದಿನ ಎದುರಾಳಿ ಸ್ಟಾನಿಸ್ಲಾಸ್ ವಾವ್ರಿಂಕ ಅಥವಾ ಗ್ರಿಗರ್ ಡಿಮಿಟ್ರೋವ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಜಯಪ್ರಕಾಶ್ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು
ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ
ಕಾರ್ಗಿಲ್ ಯೋಧ ಮೆಲ್ವಿನ್ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ