ಮುಗುರುಜಾ-ಸ್ಟೋಸರ್‌ ಮುಖಾಮುಖಿ


Team Udayavani, Jun 1, 2018, 6:00 AM IST

z-36.jpg

ಪ್ಯಾರಿಸ್‌: 2016ರ ಚಾಂಪಿಯನ್‌ ಸ್ಪೇನಿನ ಗಾರ್ಬಿನ್‌ ಮುಗುರುಜಾ, ಆಸ್ಟ್ರೇಲಿಯದ ಸಮಂತಾ ಸ್ಟೋಸರ್‌, ಡರಿಯಾ ಗವ್ರಿಲೋವಾ, ಸ್ಲೊವಾಕಿಯಾದ ಮ್ಯಾಗ್ಡಲಿನಾ ರಿಬರಿಕೋವಾ ಮೊದಲಾದವರೆಲ್ಲ ಗುರುವಾರದ ವನಿತಾ ಸಿಂಗಲ್ಸ್‌ ಪಂದ್ಯ ಗೆದ್ದು 3ನೇ ಸುತ್ತಿಗೆ ಮುನ್ನುಗ್ಗಿದ್ದಾರೆ. ಗಾರ್ಬಿನ್‌ ಮುಗುರುಜಾ ಆತಿಥೇಯ ನಾಡಿನ ವೈಲ್ಡ್‌ ಕಾರ್ಡ್‌ ಆಟಗಾರ್ತಿ ಫಿಯೋನಾ ಫೆರೊ ಅವರನ್ನು 6-4, 6-3 ಅಂತರದಿಂದ ಮಣಿಸಿದರು. ಇದು 21ರ ಹರೆಯದ ಫೆರೊ ವಿರುದ್ಧ ಮುಗುರುಜಾ ಆಡಿದ ಮೊದಲ ಪಂದ್ಯವಾಗಿತ್ತು.

“ಫೆರೊ ಯುವ ಹಾಗೂ ಪ್ರತಿಭಾನ್ವಿತ ಆಟಗಾರ್ತಿ. ಸಹಜವಾಗಿಯೇ ಇವರ ವಿರುದ್ಧ ಆಡುವುದು ದೊಡ್ಡ ಸವಾಲು’ ಎಂಬುದಾಗಿ ಮುಗುರುಜಾ ಹೇಳಿದರು. ಅವರಿನ್ನು ಆಸ್ಟ್ರೇಲಿಯದ ಸಮಂತಾ ಸ್ಟೋಸರ್‌ ವಿರುದ್ಧ ಸೆಣಸಲಿದ್ದಾರೆ. ದಿನದ ಇನ್ನೊಂದು ಪಂದ್ಯದಲ್ಲಿ ಸ್ಟೋಸರ್‌ 6-2, 7-6 (7-1) ಅಂತರದಿಂದ ರಶ್ಯದ ಅನಾಸ್ತಾಸಿಯಾ ಪಾವುಚೆಂಕೋವಾಗೆ ಸೋಲುಣಿಸಿದರು.

ಆಸ್ಟ್ರೇಲಿಯದ ಮತ್ತೋರ್ವ ಆಟಗಾರ್ತಿ, 24ನೇ ಶ್ರೇಯಾಂಕದ ಡರಿಯಾ ಗವ್ರಿಲೋವಾ ಕೂಡ ಗೆಲುವಿನ ಓಟ ಮುಂದುವರಿಸಿದ್ದಾರೆ. ಅವರು ಅಮೆರಿಕದ ಬರ್ನಾರ್ಡ್‌ ಪೆರಾ ವಿರುದ್ಧ 5-7, 7-5, 6-3ರಿಂದ ಹಿಮ್ಮೆಟ್ಟಿಸಿದರು. 19ನೇ ಶ್ರೇಯಾಂಕದ ಮ್ಯಾಗ್ಡಲಿನಾ ರಿಬರಿಕೋವಾ ಸ್ವಿಟ್ಸರ್‌ಲ್ಯಾಂಡಿನ ಬೆಲಿಂಡಾ ಬೆನ್ಸಿಕ್‌ ಅವರನ್ನು 6-2, 6-4 ಅಂತರದಿಂದ ಪರಾಭವಗೊಳಿಸಿದರು. 16ನೇ ಶ್ರೇಯಾಂಕದ ಬೆಲ್ಜಿಯಂ ಆಟಗಾರ್ತಿ ಎಲಿಸ್‌ ಮಾರ್ಟೆನ್ಸ್‌  ಕೂಡ ಮುನ್ನಡೆ ಸಾಧಿಸಿದ್ದು, ಅಮೆರಿಕದ ಹೀತರ್‌ ವಾಟ್ಸನ್‌ಗೆ 6-3, 6-4 ಅಂತರದ ಸೋಲುಣಿಸಿದರು.

5 ಸೆಟ್‌ಗಳ ಕಾದಾಟ
ದ್ವಿತೀಯ ಶ್ರೇಯಾಂಕದ ಜರ್ಮನ್‌ ಆಟಗಾರ ಅಲೆಕ್ಸಾಂಡರ್‌ ಜ್ವೆರೇವ್‌ ಕೂಡ ದ್ವಿತೀಯ ಸುತ್ತಿನಲ್ಲಿ 5 ಸೆಟ್‌ಗಳ ಕಠಿನ ಹೋರಾಟದ ಬಳಿಕ ಜಯ ಕಾಣುವಲ್ಲಿ ಯಶಸ್ವಿಯಾದರು. ಸರ್ಬಿಯಾದ ದುಸಾನ್‌ ಲಾಜೋವಿಕ್‌ ವಿರುದ್ಧ 2-6, 7-5, 6-4, 6-1, 6-2 ಅಂತರದಿಂದ ಗೆದ್ದು ಮೂರನೇ ಸುತ್ತಿಗೆ ಏರಿದರು.

32ನೇ ಶ್ರೇಯಾಂಕದ ಗೇಲ್‌ ಮಾನ್‌ಫಿಲ್ಸ್‌ 2ನೇ ಸುತ್ತಿನಲ್ಲಿ ಸ್ಲೊವಾಕಿಯಾದ ಮಾರ್ಟಿನ್‌ ಕ್ಲಿಝಾನ್‌ರನ್ನು 6-2, 6-4, 6-4ರಿಂದ ಮಣಿಸಿ ತವರಿನ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದರು. ಫ್ರಾನ್ಸ್‌ನ ಮತ್ತೂಬ್ಬ ಆಟಗಾರ ಗಿಲ್ಲೆಸ್‌ ಸಿಮೋನ್‌ ಅಮೆರಿಕದ 12ನೇ ಶ್ರೇಯಾಂಕಿತ ಸ್ಯಾಮ್‌ ಕ್ವೆರ್ರಿ ವಿರುದ್ಧ 1-6, 7-6 (7-3), 6-4, 6-1ರಿಂದ ಮಣಿಸಿದರು. ಬುಧವಾರ ರಾತ್ರಿ 5 ಸೆಟ್‌ಗಳ ಹೋರಾಟದಲ್ಲಿ ಜಯ ಸಾಧಿಸಿದ ಮತ್ತೂಬ್ಬ ಟೆನಿಸಿಗ ಬಲ್ಗೇರಿಯಾದ ಗ್ರಿಗರ್‌ ಡಿಮಿಟ್ರೋವ್‌. ಅವರು 6-7 (2-7), 6-4, 4-6, 6-4, 10-8 ಅಂತರದಿಂದ ಅಮೆರಿಕದ ಜೇರ್ಡ್‌ ಡೊನಾಲ್ಡ್‌ಸನ್‌ಗೆ ಸೋಲುಣಿಸಿದರು. ಬೋಸ್ನಿಯಾದ ದಮಿರ್‌ ಜುಮುರ್‌ ಕೂಡ ಗೆಲುವಿಗಾಗಿ 5 ಸೆಟ್‌ಗಳ ಕಠಿನ ಕಾಳಗ ನಡೆಸಬೇಕಾಯಿತು. ಭಾರೀ ಪ್ರತಿರೋಧ ಒಡ್ಡಿದ ಮಾಲ್ಡೋವಾದ ರಾಡು ಅಲ್ಬೋಟ್‌ ಅವರನ್ನು 6-3, 6-3, 5-7, 1-6, 7-5ರಿಂದ ಮಣಿಸಿ ನಿಟ್ಟುಸಿರೆಳೆದರು. ಸ್ಪೇನಿನ ಫೆರ್ನಾಂಡೊ ವೆರ್ದೆಸ್ಕೊ 6-3, 6-2, 6-2 ಅಂತರದಿಂದ ಆರ್ಜೆಂಟೀನಾದ ಗಿಡೊ ಆ್ಯಂಡ್ರೋಝಿ ಅವರನ್ನು ಪರಾಭವಗೊಳಿಸಿದರು.

ಕೀ ನಿಶಿಕೊರಿಗೆ ಮತ್ತೂಂದು ಫ್ರೆಂಚ್‌ ಟೆಸ್ಟ್‌
ಜಪಾನಿನ ಕೀ ನಿಶಿಕೊರಿ ಅವರಿಗೆ ಮತ್ತೂಂದು “ಫ್ರೆಂಚ್‌ ಟೆಸ್ಟ್‌’ ಎದುರಾಗಿದೆ. ದ್ವಿತೀಯ ಸುತ್ತಿನ ಪಂದ್ಯದಲ್ಲಿ ಫ್ರಾನ್ಸ್‌ನ ಬೆನೊಯಿಟ್‌ ಪೇರ್‌ ವಿರುದ್ಧ 5 ಸೆಟ್‌ಗಳ ಕಾದಾಟದ ಬಳಿಕ ಗೆದ್ದು ಬಂದ ನಿಶಿಕೊರಿ, ಮುಂದಿನ ಸುತ್ತಿನಲ್ಲಿ ಆತಿಥೇಯ ನಾಡಿನ ಮತ್ತೋರ್ವ ಆಟಗಾರ ಗಿಲ್ಲೆಸ್‌ ಸಿಮೋನ್‌ ಸವಾಲನ್ನು ಎದುರಿಸಲಿದ್ದಾರೆ. ಇದರೊಂದಿಗೆ ಮೊದಲ 3 ಸುತ್ತಿನ ಪಂದ್ಯಗಳಲ್ಲಿ ಫ್ರಾನ್ಸ್‌ ಟೆನಿಸಿಗರೇ ನಿಶಿಕೊರಿಗೆ ಎದುರಾದಂತಾಯಿತು. ಮೊದಲ ಸುತ್ತಿನಲ್ಲಿ ಅವರು  ಫ್ರಾನ್ಸ್‌ ನ ಮ್ಯಾಕ್ಸಿಮ್‌ ಜನ್ವೀರ್‌ ವಿರುದ್ಧ ಆಡಿದ್ದರು. ಬೆನೊಯಿಟ್‌ ಪೇರ್‌ ವಿರುದ್ಧ ನಿಶಿಕೊರಿ 6-3, 2-6, 4-6, 6-2, 6-3 ಅಂತರದ ಜಯ ಸಾಧಿಸಿದರು. 

ಶರಪೋವಾ, ಹಾಲೆಪ್‌ ಜಯ
ದ್ವಿತೀಯ ಸುತ್ತಿನ ಪಂದ್ಯದಲ್ಲಿ ಮರಿಯಾ ಶರಪೋವಾ, ಸಿಮೋನಾ ಹಾಲೆಪ್‌ ಜಯ ಸಾಧಿಸಿದ್ದಾರೆ. ಶರಪೋವಾ ಕ್ರೊವೇಶಿಯಾದ ಡೋನಾ ವೆಕಿಕ್‌ ಅವರನ್ನು 7-5, 6-4ರಿಂದ, ಹಾಲೆಪ್‌ ಅಮೆರಿಕದ ಟಯ್ಲರ್‌ ಟೌನ್‌ಸೆಂಡ್‌ ಅವರನ್ನು 6-3, 6-1ರಿಂದ ಮಣಿಸಿದರು.

ಟಾಪ್ ನ್ಯೂಸ್

ಸಿಎಂ ಮನೆ ಭದ್ರತೆಗೆ ನಿಯೋಜನೆಗೊಂಡಿದ್ದ ಇಬ್ಬರು ಕಾನ್‌ಸ್ಟೇಬಲ್‌ಗಳ ಬಂಧನ

ಸಿಎಂ ಮನೆ ಭದ್ರತೆಗೆ ನಿಯೋಜನೆಗೊಂಡಿದ್ದ 2 ಕಾನ್‌ಸ್ಟೇಬಲ್‌ಗಳು ಪರಪ್ಪನ ಅಗ್ರಹಾರದಲ್ಲಿ ಬಂಧಿ

ಎಟಿಎಸ್‌ ಸ್ಥಾಪಿಸಿದ ಐಪಿಎಸ್‌ ಅಧಿಕಾರಿ ಅಫ್ತಾಬ್‌ ಅಹ್ಮದ್‌ ನಿಧನ

ಎಟಿಎಸ್‌ ಸ್ಥಾಪಿಸಿದ ಐಪಿಎಸ್‌ ಅಧಿಕಾರಿ ಅಫ್ತಾಬ್‌ ಅಹ್ಮದ್‌ ನಿಧನ

ಅಕ್ರಮ ಸಂಬಂಧ ನಿರಾಕರಿಸಿದ ಮಹಿಳೆಯ ಸಹೋದರನ ಅಪಹರಣ : ಆರು ಮಂದಿ ಬಂಧನ

ಅಕ್ರಮ ಸಂಬಂಧ ನಿರಾಕರಿಸಿದ ಮಹಿಳೆಯ ಸಹೋದರನ ಅಪಹರಣ : ಭಗ್ನ ಪ್ರೇಮಿ ಸೇರಿ ಆರು ಮಂದಿ ಬಂಧನ

ಬಂಡೀಪುರ: ನುರಿತ ಐಸಿಟಿ ಪದವೀಧರರು, ಅರಣ್ಯಾಧಿಕಾರಿಗಳಿಂದ ಹುಲಿ ಗಣತಿ

ಬಂಡೀಪುರ: ನುರಿತ ಐಸಿಟಿ ಪದವೀಧರರು, ಅರಣ್ಯಾಧಿಕಾರಿಗಳಿಂದ ಹುಲಿ ಗಣತಿ

ರಸ್ತೆ ಸೌಕರ್ಯವಿಲ್ಲದೆ ತೆಪ್ಪದಲ್ಲೇ ಮೃತದೇಹ ಸಾಗಿಸಿ ಅಂತ್ಯಸಂಸ್ಕಾರ ನೆರವೇರಿಸಿದ ಕುಟುಂಬ

ರಸ್ತೆ ಸೌಕರ್ಯವಿಲ್ಲದೆ ತೆಪ್ಪದಲ್ಲೇ ಮೃತದೇಹ ಸಾಗಿಸಿ ಅಂತ್ಯಸಂಸ್ಕಾರ ನೆರವೇರಿಸಿದ ಕುಟುಂಬ

ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಹೆಸರುನಲ್ಲಿ ಮರ ಕಡಿತ : ಪರಸರವಾದಿಗಳ ಪ್ರತಿಭಟನೆ

ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಹೆಸರಿನಲ್ಲಿ ಮರ ಕಡಿತ : ಪರಸರವಾದಿಗಳ ಪ್ರತಿಭಟನೆ

ಸರ್ಕಾರಿ ಶಾಲೆ ವಿದ್ಯಾರ್ಥಿ…ಅಪ್ಪಟ ಹಳ್ಳಿ ಪ್ರತಿಭೆ ರಾಜ್ಯಕ್ಕೆ ಎರಡನೇ ರ್‍ಯಾಂಕ್‌

ಸರ್ಕಾರಿ ಶಾಲೆ ವಿದ್ಯಾರ್ಥಿ…ಅಪ್ಪಟ ಹಳ್ಳಿ ಪ್ರತಿಭೆ ರಾಜ್ಯಕ್ಕೆ ಎರಡನೇ ರ್‍ಯಾಂಕ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World Giants

ದಿಲ್ಶನ್,ತರಂಗ ಬ್ಯಾಟಿಂಗ್ ವೈಭವ: ವರ್ಲ್ಡ್ ಜೈಂಟ್ಸ್ ವಿರುದ್ಧ ಗೆದ್ದು ಬೀಗಿದ ಏಶ್ಯನ್ ಲಯನ್ಸ್

ಅಧಿಕೃತ: ಭಾರೀ ಮೊತ್ತಕ್ಕೆ ಲಕ್ನೋ ಪಾಲಾದ ರಾಹುಲ್; ಹಾರ್ದಿಕ್ ಗೆ 15 ಕೋಟಿ ಕೊಟ್ಟ ಅಹಮದಾಬಾದ್

ಅಧಿಕೃತ: ಭಾರೀ ಮೊತ್ತಕ್ಕೆ ಲಕ್ನೋ ಪಾಲಾದ ರಾಹುಲ್; ಹಾರ್ದಿಕ್ ಗೆ 15 ಕೋಟಿ ಕೊಟ್ಟ ಅಹಮದಾಬಾದ್

ಕೊಹ್ಲಿಗೆ ಶೋಕಾಸ್‌ ನೋಟಿಸ್‌ ನೀಡಬಯಸಿದ್ದ ಗಂಗೂಲಿ?

ಕೊಹ್ಲಿಗೆ ಶೋಕಾಸ್‌ ನೋಟಿಸ್‌ ನೀಡಬಯಸಿದ್ದ ಗಂಗೂಲಿ?

ಅಂಡರ್‌-19 ವಿಶ್ವಕಪ್‌ ಕ್ರಿಕೆಟ್‌; ಕ್ವಾರ್ಟರ್‌ ಫೈನಲ್‌ಗೆ ಇಂಗ್ಲೆಂಡ್‌, ಪಾಕಿಸ್ಥಾನ

ಅಂಡರ್‌-19 ವಿಶ್ವಕಪ್‌ ಕ್ರಿಕೆಟ್‌; ಕ್ವಾರ್ಟರ್‌ ಫೈನಲ್‌ಗೆ ಇಂಗ್ಲೆಂಡ್‌, ಪಾಕಿಸ್ಥಾನ

ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌: ಒಸಾಕಾ ಆಟ ಮುಗಿಸಿದ ಅನಿಸಿಮೋವಾ

ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌: ಒಸಾಕಾ ಆಟ ಮುಗಿಸಿದ ಅನಿಸಿಮೋವಾ

MUST WATCH

udayavani youtube

ಮಧ್ವರಾಜ್ ಮನದಾಳದ ಮಾತು

udayavani youtube

ಫಾರ್ಮ್‌ಹೌಸ್‌ನಲ್ಲಿ ಸಿನಿಮಾ ತಾರೆಯರ ಶವ ಸಮಾಧಿ ಆರೋಪ ! ನ್ಯಾಯಾಲಯದ ಮೊರೆ ಸಲ್ಲು

udayavani youtube

ಅಮಿತ್ ಶಾರಿಂದ ಮನೆ ಮನೆ ಪ್ರಚಾರ

udayavani youtube

ಗಣರಾಜ್ಯೋತ್ಸವ paradeಗಾಗಿ ಭಾರತೀಯ ನೌಕಾಪಡೆ ಉತ್ಸಾಹದಿಂದ ತಯಾರಿ ನಡೆಸುತ್ತಿದೆ

udayavani youtube

Viral Video: ನೀರಿನಲ್ಲಿ ಮುಳುಗುತ್ತಿದ್ದ ಜಿಂಕೆ ಮರಿಯನ್ನು ರಕ್ಷಿಸಿದ ನಾಯಿ

ಹೊಸ ಸೇರ್ಪಡೆ

ಸಿಎಂ ಮನೆ ಭದ್ರತೆಗೆ ನಿಯೋಜನೆಗೊಂಡಿದ್ದ ಇಬ್ಬರು ಕಾನ್‌ಸ್ಟೇಬಲ್‌ಗಳ ಬಂಧನ

ಸಿಎಂ ಮನೆ ಭದ್ರತೆಗೆ ನಿಯೋಜನೆಗೊಂಡಿದ್ದ 2 ಕಾನ್‌ಸ್ಟೇಬಲ್‌ಗಳು ಪರಪ್ಪನ ಅಗ್ರಹಾರದಲ್ಲಿ ಬಂಧಿ

ಎಟಿಎಸ್‌ ಸ್ಥಾಪಿಸಿದ ಐಪಿಎಸ್‌ ಅಧಿಕಾರಿ ಅಫ್ತಾಬ್‌ ಅಹ್ಮದ್‌ ನಿಧನ

ಎಟಿಎಸ್‌ ಸ್ಥಾಪಿಸಿದ ಐಪಿಎಸ್‌ ಅಧಿಕಾರಿ ಅಫ್ತಾಬ್‌ ಅಹ್ಮದ್‌ ನಿಧನ

ದತಯಯಜಯಹಗ

ಸೊರಬ ಮಾರ್ಗವಾಗಿ ರೈಲ್ವೆ ಸಂಪರ್ಕಕ್ಕೆ ಒತ್ತಾಯ

್ಗಹಹಗಹಗದಗ

ಶಿವಕುಮಾರ ಶ್ರೀಗಳ ಬದುಕೇ ಶಿವಮಯ

ಅಕ್ರಮ ಸಂಬಂಧ ನಿರಾಕರಿಸಿದ ಮಹಿಳೆಯ ಸಹೋದರನ ಅಪಹರಣ : ಆರು ಮಂದಿ ಬಂಧನ

ಅಕ್ರಮ ಸಂಬಂಧ ನಿರಾಕರಿಸಿದ ಮಹಿಳೆಯ ಸಹೋದರನ ಅಪಹರಣ : ಭಗ್ನ ಪ್ರೇಮಿ ಸೇರಿ ಆರು ಮಂದಿ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.