ರೋಜರ್ ಕಪ್ ಟೆನಿಸ್: ಹಾಲೆಪ್ ಸೆಮಿಫೈನಲಿಗೆ ಪ್ರವೇಶ
Team Udayavani, Aug 12, 2018, 6:30 AM IST
ಮಾಂಟ್ರಿಯಲ್: ಅಗ್ರ ಶ್ರೇಯಾಂಕದ ಸಿಮೋನಾ ಹಾಲೆಪ್ ಕಠಿನ ಹೋರಾಟದಲ್ಲಿ ಕ್ಯಾರೋಲಿನ್ ಗಾರ್ಸಿಯಾ ಅವರನ್ನು ಕೆಡಹಿ ರೋಜರ್ ಕಪ್ ಟೆನಿಸ್ ಕೂಟದ ಸೆಮಿಫೈನಲ್ ತಲುಪಿದ್ದಾರೆ.
ಫ್ರೆಂಚ್ ಓಪನ್ ಚಾಂಪಿಯನ್ ಆಗಿರುವ ಹಾಲೆಪ್ ಈ ಹಿಂದಿನ ಪಂದ್ಯದಲ್ಲಿ ಮೂರು ಸೆಟ್ಗಳ ಮ್ಯಾರಥಾನ್ ಹೋರಾಟದಲ್ಲಿ ಅನಾಸ್ತಾಸಿಯಾ ಪಾವುಚೆಂಕೋವಾ ಅವರನ್ನು ಉರುಳಿಸಿದ್ದರೂ ಯಾವುದೇ ಆಯಾಸ ತೋರ್ಪಡಿಸದೇ ಗಾರ್ಸಿಯಾ ಅವರನ್ನು ಎದುರಿಸಿದ್ದರು. ಭರ್ಜರಿ ಆಟ ಆಡುವ ಮೂಲಕ ಗಾರ್ಸಿಯಾ ಅವರನ್ನು 7-5, 6-1 ಸೆಟ್ಗಳಿಂದ ಕೆಡಹಿ ಮುನ್ನಡೆದರು.
ಸೆಮಿಫೈನಲ್ನಲ್ಲಿ ಹಾಲೆಪ್ ಆಸ್ಟ್ರೇಲಿಯದ ಆ್ಯಶೆ ಬಾರ್ಟಿ ಅವರ ಸವಾಲನ್ನು ಎದುರಿಸಲಿದ್ದಾರೆ. ಅವರು ಇನ್ನೊಂದು ಪಂದ್ಯದಲ್ಲಿ ಕಿಕಿ ಬಾರ್ಟೆನ್ಸ್ ಅವರನ್ನು 6-3, 6-1 ಸೆಟ್ಗಳಿಂದ ಕೆಡಹಿದ್ದರು. 15ನೇ ಶ್ರೇಯಾಂಕದ ಬಾರ್ಟಿ ಮೊದಲ ಸರ್ವ್ನಲ್ಲಿಯೇ ಶೇಕಡಾ 80ರಷ್ಟು ಅಂಕವನ್ನು ಪಡೆದಿದ್ದರಲ್ಲದೇ ಬಾರ್ಟೆನ್ಸ್ ಅವರ ಗೇಮ್ ಅನ್ನು ನಾಲ್ಕು ಬಾರಿ ಬ್ರೇಕ್ ಮಾಡಿ ಸುಲಭವಾಗಿ ಪಂದ್ಯ ಗೆದ್ದಿದ್ದರು. ಹಾಲೆಪ್ ಮತ್ತು ಬಾರ್ಟಿ ತಮ್ಮ ಬಾಳ್ವೆಯಲ್ಲಿ ಮೊದಲ ಬಾರಿ ಮುಖಾಮುಖೀಯಾಗುತ್ತಿದ್ದಾರೆ.
ಸ್ಟೀಫನ್ಸ್ ಸೆಮಿಗೆ
ಅಮೆರಿಕದ ಸ್ಲೋನ್ ಸ್ಟೀಫನ್ಸ್ ಅವರು ಲಾತ್ವಿಯಾದ ಅನಾಸ್ತಾಸಿಜಾ ಸೆವಾಸ್ತೋವಾ ಅವರನ್ನು 6-2, 6-2 ನೇರ ಸೆಟ್ಗಳಿಂದ ಸೋಲಿಸಿ ಸೆಮಿಫೈನಲ್ ತಲುಪಿದ್ದಾರೆ. ಸತತ ಎರಡನೇ ವರ್ಷ ಇಲ್ಲಿ ಸೆಮಿಫೈನಲ್ ತಲುಪಿರುವ ಸ್ಟೀಫನ್ಸ್ ಅವರು ಫೈನಲ್ ತೇರ್ಗಡೆಯ ಕಾದಾಟದಲ್ಲಿ ಹಾಲಿ ಚಾಂಪಿಯನ್ ಎಲಿನಾ ಸ್ವಿಟೋಲಿನಾ ಅವರ ಸವಾಲನ್ನು ಎದುರಿಸಬೇಕಾಗಿದೆ. ಸ್ವಿಟೋಲಿನಾ ಇನ್ನೊಂದು ಕ್ವಾರ್ಟರ್ಫೈನಲ್ ಪಂದ್ಯದಲ್ಲಿÉ ಎಲಿಸ್ ಮಾರ್ಟೆನ್ಸ್ ಅವರನ್ನು 7-5, 6-3 ಸೆಟ್ಗಳಿಂದ ಸೋಲಿಸಿದ್ದರು. ಸ್ಟೀಫನ್ಸ್ ಕಳೆದ ವರ್ಷ ಇಲ್ಲಿ ಸೆಮಿಫೈನಲ್ನಲ್ಲಿ ಕ್ಯಾರೋಲಿನ್ ವೋಜ್ನಿಯಾಕಿ ಕೈಯಲ್ಲಿ ಸೋತಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ