ಕ್ವಾರ್ಟರ್ಗೆ ಸಿಂಧು, ಸೈನಾ
Team Udayavani, Aug 26, 2018, 3:43 PM IST
ಜಕಾರ್ತಾ: ಏಶ್ಯಾಡ್ನ ವನಿತೆಯರ ಬ್ಯಾಡ್ಮಿಂಟನ್ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಸ್ಟಾರ್ ಆಟಗಾರ್ತಿಯರಾದ ಸೈನಾ ನೆಹ್ವಾಲ್, ಪಿ.ವಿ. ಸಿಂಧು ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಶನಿವಾರ ನಡೆದ ಮೊದಲ ಪ್ರಿ -ಕ್ವಾರ್ಟರ್ನಲ್ಲಿ ಸೈನಾ ನೆಹ್ವಾಲ್ ಇಂಡೋನೇಶ್ಯದ ಫಿತ್ರಿಯಾನಿ ಅವರನ್ನು 2-0 ಗೇಮ್ಗಳ ಅಂತರದಿಂದ ಸೋಲಿಸಿದರೆ, ಪಿ.ವಿ. ಸಿಂಧು ಇಂಡೋನೇಶ್ಯದ ಗ್ರೆಗೊರಿಯಾ ಮಾರಿಸ್ಕಾ ಅವರನ್ನು 2-0 ಗೇಮ್ಗಳ ಅಂತರದಿಂದ ಸೋಲಿಸಿ ಕ್ವಾರ್ಟರ್ ಫೈನಲ್ಗೆ ಲಗ್ಗೆಯಿಟ್ಟರು.
ಪುರುಷರ ಡಬಲ್ಸ್ ವಿಭಾಗದ 16ನೇ ಸುತ್ತಿನ ಪಂದ್ಯದಲ್ಲಿ ಭಾರತದ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ, ಚಿರಾಗ್ ಶೆಟ್ಟಿ ಸೋಲನುಭವಿಸಿದ್ದಾರೆ. ಆದರೆ ಇನ್ನೊಂದು ಪುರುಷರ ಡಬಲ್ಸ್ನಲ್ಲಿ ಮನು ಅತ್ರಿ, ಸುಮೀತ್ ರೆಡ್ಡಿ ಸೋತರು. ವನಿತೆಯರ ಡಬಲ್ಸ್ ಕ್ವಾರ್ಟರ್ಫೈನಲ್ನಲ್ಲಿ ಅಶ್ವಿನಿ ಪೊನ್ನಪ್ಪ, ಎನ್. ಸಿಕ್ಕಿ ರೆಡ್ಡಿ ಸೋತು ಹೊರನಡೆದರು.