ರ್ಯಾಂಕಿಂಗ್: ಅಗ್ರ ಸ್ಥಾನ ಕಾಯ್ದುಕೊಂಡ ಮಂಧನಾ
Team Udayavani, Feb 19, 2019, 12:30 AM IST
ದುಬಾೖ: ಭಾರತ ತಂಡದ ಆರಂಭಿಕ ಆಟಗಾರ್ತಿ ಸ್ಮತಿ ಮಂಧನಾ ನೂತನ ಏಕದಿನ ಬ್ಯಾಟಿಂಗ್ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಏಕದಿನ ತಂಡದ ನಾಯಕಿ ಮಿಥಾಲಿ ರಾಜ್ ಕೂಡ 5ನೇ ಸ್ಥಾನದಲ್ಲೇ ಉಳಿದುಕೊಂಡಿದ್ದಾರೆ.
774 ಅಂಕ ಗಳಿಸಿರುವ ಮಂಧನಾ ಆಸ್ಟ್ರೇಲಿಯದ ಎಲಿಸ್ ಪೆರ್ರಿ ಹಾಗೂ ಮೆಗ್ ಲಾನ್ನಿಂಗ್ ಅವರಿಗಿಂದ ಮುಂದಿದ್ದಾರೆ. ಕಿವೀಸ್ ತಂಡದ ಆ್ಯಮಿ ಸ್ಯಾಟರ್ವೆàಟ್ 4ನೇ ಸ್ಥಾನದಲ್ಲಿದಾರೆ. ಅಗ್ರ 20ರಲ್ಲಿ ಸ್ಥಾನ ಪಡೆದ ಭಾರತದ ಉಳಿದ ಆಟಗಾರ್ತಿಯರೆಂದರೆ ದೀಪ್ತಿ ಶರ್ಮ ಮತ್ತು ಹರ್ಮನ್ಪ್ರೀತ್ ಕೌರ್. ದೀಪ್ತಿ ಶರ್ಮ ಒಂದು ಸ್ಥಾನ ಮೇಲೆರಿದ್ದು, 17ನೇ ಸ್ಥಾನದಲ್ಲಿದ್ದಾರೆ. ಕೌರ್ 19ನೇ ಸ್ಥಾನದಲ್ಲಿದ್ದಾರೆ.
ಬೌಲಿಂಗ್ ರ್ಯಾಂಕಿಂಗ್ನಲ್ಲಿ ಭಾರತದ ವೇಗಿ ಜೂಲನ್ ಗೋಸ್ವಾಮಿ 3ನೇ ಸ್ಥಾನ ಲಭಿಸಿದೆ. ಆಸ್ಟ್ರೇಲಿಯದ ಮೆಗಾನ್ ಶಟ್ ಹಾಗೂ ಪಾಕಿಸ್ಥಾನ ಸನಾ ಮಿರ್ ಮೊದಲೆರಡು ಸ್ಥಾನದಲ್ಲಿದ್ದಾರೆ. ದೀಪ್ತಿ ಶರ್ಮ ಮತ್ತು ಪೂನಂ ಯಾದವ್ ಅಗ್ರ ಹತ್ತರಲ್ಲಿದ್ದು, ಕ್ರಮವಾಗಿ 8 ಹಾಗೂ 9ನೇ ಸ್ಥಾನದಲ್ಲಿದ್ದಾರೆ. ದೀಪ್ತಿ ಶರ್ಮ ಅಲ್ರೌಂಡರ್ ರ್ಯಾಂಕಿಂಗ್ನಲ್ಲೂ ಕಾಣಿಸಿಕೊಂಡಿದ್ದು, ಜೀವನಶ್ರೇಷ್ಠ 3ನೇ ಸ್ಥಾನ ಅಲಂಕರಿಸಿದ್ದಾರೆ.