60 ಎಸೆತಗಳಲ್ಲಿ ಟಿ20 ಶತಕ ಸಿಡಿಸಿದ ಸ್ಮತಿ ಮಂಧನಾ
Team Udayavani, Aug 5, 2018, 6:00 AM IST
ಮ್ಯಾಂಚೆಸ್ಟರ್: ವನಿತೆಯರ “ಕಿಯಾ ಟಿ20 ಸೂಪರ್ ಲೀಗ್’ ಪಂದ್ಯಾವಳಿಯಲ್ಲಿ ಪ್ರಚಂಡ ಬ್ಯಾಟಿಂಗ್ ಪ್ರದರ್ಶಿಸುತ್ತಿರುವ ಭಾರತದ ಎಡಗೈ ಆರಂಭಕಾರ್ತಿ ಸ್ಮತಿ ಮಂಧನಾ 60 ಎಸೆತಗಳಲ್ಲಿ ಶತಕ ಬಾರಿಸಿ ಮಿಂಚಿದ್ದಾರೆ.
ವೆಸ್ಟರ್ನ್ ಸ್ಟಾಮ್ಸ್ì ತಂಡದ ಪರ ಆಡುತ್ತಿರುವ ಮಂಧನಾ ಶುಕ್ರವಾರದ ಪಂದ್ಯದಲ್ಲಿ ಲಂಕಾಶೈರ್ ಥಂಡರ್ ವಿರುದ್ಧ ಗುಡುಗಿದರು. ಇವರ ಬ್ಯಾಟಿಂಗ್ ಸಾಹಸದಿಂದ ವೆಸ್ಟರ್ನ್ ಸ್ಟಾಮ್ಸ್ì 7 ವಿಕೆಟ್ಗಳ ಸುಲಭ ಜಯ ಸಾಧಿಸಿತು. ಮಂಧನಾ 61 ಎಸೆತಗಳಿಂದ 102 ರನ್ ಬಾರಿಸಿದರು. ಈ ವೇಳೆ 12 ಬೌಂಡರಿ ಹಾಗೂ 4 ಸಿಕ್ಸರ್ ಸಿಡಿಸಿದರು. 154 ಗುರಿಯನ್ನು ವೆಸ್ಟರ್ನ್ ಸ್ಟಾಮ್ಸ್ì 18.4 ಓವರ್ಗಳಲ್ಲಿ ಸಾಧಿಸಿತು. ಲಂಕಾಶೈರ್ ಥಂಡರ್ ತಂಡದಲ್ಲಿದ್ದ ಮಂಧನಾ ಅವರ ರಾಷ್ಟ್ರೀಯ ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್ ಖಾತೆ ತೆರೆಯಲು ವಿಫಲರಾದರು.
ಇದು ಫ್ರಾಂಚೈಸಿ ಕ್ರಿಕೆಟ್ನಲ್ಲಿ ಸ್ಮತಿ ಮಂಧನಾ ಬಾರಿಸಿದ ಮೊದಲ ಶತಕ. ಈ ಕೂಟದಲ್ಲಿ ಮಂಧನಾ ಈವರೆಗೆ 48, 37, 19 ಎಸೆತಗಳಲ್ಲಿ 52, 27 ಎಸೆತಗಳಲ್ಲಿ 43 ರನ್ ಹೊಡೆದಿದ್ದಾರೆ. ಶತಕ ಬಾರಿಸಿದ ಬೆನ್ನಲೇ ಮಂಧನಾ ವಿಕೆಟ್ ಉರುಳಿತು. ಈ ಕೂಟದಲ್ಲಿ ಅವರು ಔಟಾದದ್ದು ಇದೇ ಮೊದಲು. ಅವರೀಗ ಒಟ್ಟು 282 ರನ್ ಬಾರಿಸಿ ಕೂಟದ ಟಾಪ್ ಬ್ಯಾಟ್ಸ್ಮನ್ ಎನಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ