ಮೂಡಿಬರಲಿದೆ ಸೌರವ್ ಗಂಗೂಲಿ ಸಿನೆಮಾ
Team Udayavani, Dec 14, 2018, 9:18 AM IST
ಹೊಸದಿಲ್ಲಿ: ಬಾಲಿವುಡ್ನಲ್ಲಿ ಕ್ರೀಡಾಪಟುಗಳ ಜೀವನಾಧಾರಿತ ಸಿನೆಮಾ ಬರುವುದು ಈಗ ಮಾಮೂಲು. ಈಗಾಗಲೇ ಬಾಕ್ಸರ್ ಮೇರಿ ಕೋಮ್, ಕ್ರಿಕೆಟಿಗ ಎಂ.ಎಸ್. ಧೋನಿ ಕುರಿತಾದ ಸಿನಿಮಾಗಳು ತೆರೆಗೆ ಬಂದಿವೆ. ಈಗ ಕ್ರಿಕೆಟ್ ಲೋಕದ ಮತ್ತೋರ್ವ ದಿಗ್ಗಜ ಸೌರವ್ ಗಂಗೂಲಿ ಕುರಿತಾದ ಸಿನೆಮಾ ಸಿದ್ದಗೊಳ್ಳುತ್ತಿದೆ.
ಈ ಸಿನೆಮಾ ಶ್ರೀಜಿತ್ ಅವರ ನಿರ್ದೇಶನದಲ್ಲಿ ಮೂಡಿಬರಲಿದ್ದು, ನಿರ್ಮಾಣದಲ್ಲಿ ಏಕ್ತಾ ಕಪೂರ್ ಆಸಕ್ತಿ ಹೊಂದಿದ್ದಾರೆ ಎಂದು ಈ ಹಿಂದೆ ಸುದ್ದಿಯಾಗಿತ್ತು. ಇದಕ್ಕೆ ಪುಷ್ಠಿ ನೀಡುವಂತೆ ಶ್ರೀಜಿತ್ ಮುಖರ್ಜಿ ಅವರು ಗಂಗೂಲಿಯನ್ನು ಭೇಟಿ ಮಾಡಿ ಸಿನೆಮಾ ಕುರಿತು ಚರ್ಚೆ ಮಾಡಿದ್ದಾರೆ. ಆದರೆ ಗಂಗೂಲಿ ಈ ಬಗ್ಗೆ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ. ಇದು ಗಂಗೂಲಿ ಅವರ “ಎ ಸೆಂಚುರಿ ಈಸ್ ನಾಟ್ ಇನಫ್’ ಆತ್ಮಚರಿತ್ರೆಯ ಆಧಾರದಲ್ಲಿ ಮೂಡಿಬರಲಿದೆ.