ರಿಷಭ್ ಪಂತ್ ಗೆ ಸಲಹೆ ನೀಡಿದ ಸೌರವ್ ಗಂಗೂಲಿ

Team Udayavani, Dec 7, 2019, 4:15 PM IST

ಸಂಗ್ರಹ ಚಿತ್ರ

ಕೋಲ್ಕತ: ಐಪಿಎಲ್‌ ಮೂಲಕ ಅದ್ಭುತ ಪ್ರದರ್ಶನ ನೀಡಿ ಭಾರತ ತಂಡಕ್ಕೆ ಆಯ್ಕೆಯಾದ ರಿಷಭ್‌ ಪಂತ್‌ ಇತ್ತೀಚೆಗೆ ಟೀಕೆಗಳಿಂದಲೇ ಸುದ್ದಿಯಾಗುತ್ತಿದ್ದಾರೆ. ಆರಂಭದಲ್ಲಿ  ಉತ್ತಮ ಬ್ಯಾಟಿಂಗ್‌ ಮೂಲಕ ಫೆಂಟಾಸ್ಟಿಕ್‌ ಪಂತ್‌’ ಎಂದೇ ಕರೆಯಲ್ಪಡುತ್ತಿದ್ದ ಅವರೀಗ ಸಾಲು ಸಾಲು ವೈಫ‌ಲ್ಯ ಎದುರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಒಂದಿಷ್ಟು ಸಲಹೆ ನೀಡಿದ್ದಾರೆ

ರಿಷಭ್‌ ಪಂತ್‌ ತಮ್ಮ ವಿರುದ್ಧದ ಟೀಕೆಗಳನ್ನು ಸ್ಫೂರ್ತಿಯಾಗಿ ತೆಗೆದುಕೊಂಡು ಆಡಬೇಕು. ಟೀಕೆಗಳು ಒಳ್ಳೆಯದೇ. ಇದಕ್ಕೆ ಅವರು ಒಗ್ಗಿಕೊಳ್ಳಬೇಕು. ಇವೆಲ್ಲವನ್ನೂ ಕೇಳಿಸಿ ಕೊಳ್ಳುತ್ತಲೇ ಯಶಸ್ಸಿನ ಹಾದಿ ಕಂಡು ಕೊಳ್ಳಬೇಕು. ನಾವು ಮಾಡುವ ತಪ್ಪುಗಳೇ ನಮಗೆ ಹೆಚ್ಚಿನ ಕಲಿಕೆಗೆ ದಾರಿ ಆಗಿರುತ್ತದೆ’ ಎಂದು ಗಂಗೂಲಿ ಹೇಳಿದ್ದಾರೆ.

ಇದೇ ವೇಳೆ ಗಂಗೂಲಿ, ಭಾರತಕ್ಕೆ 2 ವಿಶ್ವಕಪ್‌ತಂದಿತ್ತ ನಾಯಕ ಮಹೇಂದ್ರ ಸಿಂಗ್‌ ಧೋನಿ ಯೊಂದಿಗೆ ಪಂತ್‌ ಅವರನ್ನು ಹೋಲಿಸಿ ಮಾತಾಡಿದರು. ಧೋನಿ ಸಾಧನೆಯನ್ನು ಸಮೀಪಿಸಲು ಪಂತ್‌ಗೆ ಕನಿಷ್ಠ 15 ವರ್ಷಗಳಾದರೂ ಬೇಕು. ಭಾರತೀಯ ಕ್ರಿಕೆಟಿಗೆ ಧೋನಿ ಕೊಡುಗೆ ಅಪಾರ. ಪ್ರತೀ ಬಾರಿಯೂ ನಿಮಗೆ ಧೋನಿ ಲಭಿಸಲು ಸಾಧ್ಯವಿಲ್ಲ’ ಎಂದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ