ಅಭ್ಯಾಸ ಆರಂಭಿಸಿದ ದಕ್ಷಿಣ ಆಫ್ರಿಕಾ ಆಟಗಾರರು
Team Udayavani, Jun 3, 2022, 11:14 PM IST
ಹೊಸದಿಲ್ಲಿ: ಟಿ20 ಸರಣಿ ಯನ್ನಾಡಲು ಭಾರತಕ್ಕೆ ಆಗಮಿಸಿರುವ ದಕ್ಷಿಣ ಆಫ್ರಿಕಾ ತಂಡದ ಸದಸ್ಯರು ಶುಕ್ರವಾರ “ಫಿರೋಜ್ ಷಾ ಕೋಟ್ಲಾ’ ದಲ್ಲಿ ಮೊದಲ ಸುತ್ತಿನ ಅಭ್ಯಾಸ ನಡೆಸಿದರು. ಇದಕ್ಕೂ ಮುನ್ನ ಜಿಮ್ನಲ್ಲಿ ವ್ಯಾಯಾಮ ಮಾಡಿದರು.
ಸ್ಪಿನ್ದ್ವಯರಾದ ತಬ್ರೇಜ್ ,ಕೇಶವ್ ಮಹಾರಾಜ್ ಮತ್ತು ಬ್ಯಾಟರ್ ಐಡನ್ ಮಾರ್ಕ್ರಮ್ ಹೆಚ್ಚಿನ ಅವಧಿಯ ಅಭ್ಯಾಸ ನಡೆಸಿದರು. ಈ ಮೂವರು 5 ಪಂದ್ಯಗಳ ಸರಣಿಯಲ್ಲಿ ಪ್ರಮುಖ ಪಾತ್ರ ನಿಭಾಯಿಸುವ ಎಲ್ಲ ಸಾಧ್ಯತೆ ಇದೆ.
5 ವರ್ಷಗಳ ಬಳಿಕ ತಂಡಕ್ಕೆ ಮರಳಿದ ವೇಯ್ನ ಪಾರ್ನೆಲ್, ವೇಗಿ ಡ್ವೇನ್ ಪ್ರಿಟೋರಿಯಸ್, ರಸ್ಸಿ ವಾನ್ ಡರ್ ಡುಸೆನ್ ಕೂಡ ಕಠಿನ ಅಭ್ಯಾಸ ನಡೆಸಿದರು. ಪ್ರಧಾನ ಕೋಚ್ ಮಾರ್ಕ್ ಬೌಷರ್ ಅಭ್ಯಾಸದ ಉಸ್ತುವಾರಿ ವಹಿಸಿದ್ದರು. ಇವರು ವೇಗಿ ಮಾರ್ಕೊ ಜಾನ್ಸೆನ್ಗೆ ಕೆಲವು ಬೌಲಿಂಗ್ ಟಿಪ್ಸ್ ಹೇಳಿಕೊಟ್ಟರು.
ಐಪಿಎಲ್ನಲ್ಲಿ ಮಿಂಚಿದ ಡೇವಿಡ್ ಮಿಲ್ಲರ್ ಮಾಲ್ಡೀವ್ಸ್ನಲ್ಲಿ ರಜಾ ದಿನಗಳನ್ನು ಕಳೆಯುತ್ತಿದ್ದು, ಸದ್ಯವೇ ತಂಡವನ್ನು ಕೂಡಿಕೊಳ್ಳಲಿದ್ದಾರೆ.
ನೆಗೆಟಿವ್ ಫಲಿತಾಂಶ: ದ. ಆಫ್ರಿಕಾ ಸದಸ್ಯರೆಲ್ಲರ ಆರ್ಟಿ ಪಿಸಿಆರ್ ಫಲಿತಾಂಶ ನೆಗೆಟಿವ್ ಬಂದಿದ್ದು, ಅನಂತರವೇ ಎಲ್ಲರೂ ಅಭ್ಯಾಸಕ್ಕೆ ಇಳಿದಿದ್ದರು. ಮೊದಲ ಪಂದ್ಯ ಹೊಸ ದಿಲ್ಲಿಯಲ್ಲಿ ಗುರುವಾರ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು
ಸಂಸದ ಡಿ.ಕೆ.ಸುರೇಶ್ ಆಸ್ತಿ ಮೌಲ್ಯ 593 ಕೋಟಿ ರೂ.!
IPL; ಇಂದು ಚಿನ್ನಸ್ವಾಮಿಯಲ್ಲಿ ಆರ್ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?
Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್
Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ