ರೂಡಿ ಸೆಕೆಂಡ್‌ ಬದಲು ಹೆನ್ರಿ ಕ್ಲಾಸೆನ್‌ ಸೇರ್ಪಡೆ

ದಕ್ಷಿಣ ಆಫ್ರಿಕಾ ಟೆಸ್ಟ್‌ ತಂಡ

Team Udayavani, Aug 19, 2019, 5:08 AM IST

ಜೊಹಾನ್ಸ್‌ಬರ್ಗ್‌: ಮುಂಬರುವ ಭಾರತ ಪ್ರವಾಸಕ್ಕಾಗಿ ಕಳೆದ ವಾರವಷ್ಟೇ ತನ್ನ ಟೆಸ್ಟ್‌ ತಂಡವನ್ನು ಪ್ರಕಟಿಸಿದ ದಕ್ಷಿಣ ಆಫ್ರಿಕಾ, ಈಗ ಇದರಲ್ಲಿ ಅನಿವಾರ್ಯವಾಗಿ ಒಂದು ಬದಲಾವಣೆ ಮಾಡಿಕೊಂಡಿದೆ. ವಿಕೆಟ್‌ ಕೀಪರ್‌ ರೂಡಿ ಸೆಕೆಂಡ್‌ ಗಾಯಾಳಾದ ಕಾರಣ ಇವರ ಸ್ಥಾನಕ್ಕೆ ಹೆನ್ರಿ ಕ್ಲಾಸೆನ್‌ ಅವರನ್ನು ಸೇರಿಸಿಕೊಳ್ಳಲಾಗಿದೆ.

ರೂಡಿ ಸೆಕೆಂಡ್‌ ದಕ್ಷಿಣ ಆಫ್ರಿಕಾ “ಎ’ ತಂಡದ ಪರ ಅಭ್ಯಾಸ ನಡೆಸುತ್ತಿದ್ದಾಗ ಗಾಯಾಳಾಗಿದ್ದು, ಅವರಿಗೆ ತುರ್ತು ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು “ಸೌತ್‌ ಆಫ್ರಿಕಾ ಕ್ರಿಕೆಟ್‌’ ತಿಳಿಸಿದೆ.

ಸದ್ಯ ದಕ್ಷಿಣ ಆಫ್ರಿಕಾ “ಎ’ ತಂಡ ಭಾರತ ಪ್ರವಾಸದಲ್ಲಿದ್ದು, ಈ ತಂಡದಲ್ಲಿ ಕ್ಲಾಸೆನ್‌ ಕೂಡ ಇದ್ದಾರೆ. “ಎ’ ತಂಡಗಳ ನಡುವೆ ಆ. 29ರಿಂದ ತಿರುವನಂತಪುರದಲ್ಲಿ 5 ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದೆ.

ಪರಿಷ್ಕೃತ ಟೆಸ್ಟ್‌ ತಂಡ
ಫಾ ಡು ಪ್ಲೆಸಿಸ್‌ (ನಾಯಕ), ಟೆಂಬ ಬವುಮ, ಥಿಯುನಿಸ್‌ ಡಿ ಬ್ರುಯಿನ್‌, ಕ್ವಿಂಟನ್‌ ಡಿ ಕಾಕ್‌, ಡೀನ್‌ ಎಲ್ಗರ್‌, ಜುಬೇರ್‌ ಹಮ್ಜ, ಕೇಶವ್‌ ಮಹಾರಾಜ್‌, ಐಡನ್‌ ಮಾರ್ಕ್‌ರಮ್‌, ಸೇನುರನ್‌ ಮುತ್ತುಸಾಮಿ, ಲುಂಗಿ ಎನ್‌ಗಿಡಿ, ಅನ್ರಿಚ್‌ ನೋರ್ಜೆ, ವೆರ್ನನ್‌ ಫಿಲಾಂಡರ್‌, ಡೇನ್‌ ಪೀಟ್‌, ಕಾಗಿಸೊ ರಬಾಡ, ಹೆನ್ರಿಕ್‌ ಕ್ಲಾಸೆನ್‌.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ