ಟಿ20: ಆಫ್ರಿಕಾ ವಿರುದ್ಧ ಬಾಂಗ್ಲಾಕ್ಕೆ ಸೋಲು
Team Udayavani, Oct 28, 2017, 7:50 AM IST
ಬ್ಲೋಮ್ಫಾಂಟೇನ್: ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಉತ್ತಮ ಹೋರಾಟ ನೀಡಿಯೂ ಬಾಂಗ್ಲಾದೇಶ 20 ರನ್ನುಗಳ ಸೋಲನುಭವಿಸಿದೆ.
ಗುರುವಾರ ರಾತ್ರಿ ಬ್ಲೋಮ್ಫಾಂಟೀನ್ನಲ್ಲಿ ಮೊದಲು ಬ್ಯಾಟಿಂಗ್ ಆಯ್ದುಕೊಂಡ ದಕ್ಷಿಣ ಆಫ್ರಿಕಾ ನಾಲ್ಕೇ ವಿಕೆಟಿಗೆ 195 ರನ್ ಬಾರಿಸಿದರೆ, ಈ ಮೊತ್ತವನ್ನು ಬೆನ್ನಟ್ಟಿಕೊಂಡು ಬಂದ ಬಾಂಗ್ಲಾದೇಶ 9ಕ್ಕೆ 175 ರನ್ ಬಾರಿಸಿ ಶರಣಾಯಿತು. ಹರಿಣಗಳ ಬೃಹತ್ ಮೊತ್ತದಲ್ಲಿ ಆರಂಭಕಾರ ಕ್ವಿಂಟನ್ ಡಿ ಕಾಕ್ (44 ಎಸೆತ, 59 ರನ್, 5 ಬೌಂಡರಿ, 1 ಸಿಕ್ಸರ್), ಎಬಿ ಡಿ ವಿಲಿಯರ್ (27 ಎಸೆತ, 49 ರನ್, 8 ಬೌಂಡರಿ), ಕೊನೆಯಲ್ಲಿ ಸಿಡಿದು ನಿಂತ ಫರ್ಹಾನ್ ಬೆಹದೀìನ್ (ಅಜೇಯ 36 ರನ್, 17 ಎಸೆತ, 2 ಬೌಂಡರಿ, 2 ಸಿಕ್ಸರ್), ಡೇವಿಡ್ ಮಿಲ್ಲರ್ (ಅಜೇಯ 25 ರನ್, 19 ಎಸೆತ) ಅವರ ಬ್ಯಾಟಿಂಗ್ ಮಹತ್ವದ ಪಾತ್ರ ವಹಿಸಿತು. ಮಿಲ್ಲರ್-ಬೆಹರ್ದಿನ್ ಕೊನೆಯ 5 ಓವರ್ಗಳಲ್ಲಿ 62 ರನ್ ಸಿಡಿಸಿದರು. ಎಬಿಡಿ ಪಂದ್ಯಶ್ರೇಷ್ಠರೆನಿಸಿದರು.
ಸಂಕ್ಷಿಪ್ತ ಸ್ಕೋರ್: ದಕ್ಷಿಣ ಆಫ್ರಿಕಾ 20 ಓವರ್, 195/5 (ಡಿ ಕಾಕ್ 59, ಡಿ ವಿಲಿಯರ್ 49, ಮಿರಾಜ್ 31ಕ್ಕೆ 2). ಬಾಂಗ್ಲಾದೇಶ 20 ಓವರ್, 175/9 (ಸರ್ಕಾರ್ 47, ಸೈಫುದ್ದೀನ್ 39, ಫೆಲುಕ್ವಾಯೊ 25ಕ್ಕೆ 2).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು
LSG vs CSK: ಲಕ್ನೋದಲ್ಲೂ ಚೆನ್ನೈ ಫೇವರಿಟ್
IPL; ರೋಚಕ ಪಂದ್ಯದಲ್ಲಿ ಪಂಜಾಬ್ ಎದುರು 9 ರನ್ ಜಯ ಸಾಧಿಸಿದ ಮುಂಬೈ
Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ
ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್ನಿಂದ ಹೊರಬಿದ್ದ ಶ್ರೀಶಂಕರ್
MUST WATCH
ಹೊಸ ಸೇರ್ಪಡೆ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು
Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್