ಕುಟುಂಬದೊಂದಿಗೆ ಕಾಲ ಕಳೆಯಲು ನಿವೃತ್ತಿ: ಡಿ ಕಾಕ್
Team Udayavani, Jan 1, 2022, 5:00 AM IST
ಸೆಂಚುರಿಯನ್: ಕುಟುಂಬದೊಂದಿಗೆ ಹೆಚ್ಚಿನ ಸಮಯ ಕಳೆಯುವ ಸಲುವಾಗಿ ತಾನು ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಲು ನಿರ್ಧರಿಸಿದೆ ಎಂಬುದಾಗಿ ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್ ಕ್ವಿಂಟನ್ ಡಿ ಕಾಕ್ ಹೇಳಿದ್ದಾರೆ.
ಭಾರತದೆದುರಿನ ಸೆಂಚುರಿಯನ್ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 113 ರನ್ನುಗಳ ಸೋಲನುಭವಿಸಿದ ಬೆನ್ನಲ್ಲೇ ಡಿ ಕಾಕ್ ದಿಢೀರನೇ ಟೆಸ್ಟ್ ನಿವೃತ್ತಿ ಘೋಷಿಸಿದ್ದರು.
“ಇದು ಸುಲಭವಾಗಿ ತೆಗೆದುಕೊಂಡ ನಿರ್ಧಾರವಲ್ಲ. ನಾನು ಮತ್ತು ಪತ್ನಿ ಸಶಾ ಹರ್ಲಿ ನಮ್ಮ ಮೊದಲ ಮಗುವನ್ನು ಸ್ವಾಗತಿಸುತ್ತಿದ್ದೇವೆ. ನನ್ನ ಭವಿಷ್ಯ ಹೇಗಿರುತ್ತದೆ ಮತ್ತು ನನ್ನ ಜೀವನದಲ್ಲಿ ಯಾವುದಕ್ಕೆ ಆದ್ಯತೆ ನೀಡಬೇಕು ಎಂಬುದರ ಕುರಿತು ಯೋಚಿಸಲು ನಾನು ಸಾಕಷ್ಟು ಸಮಯ ತೆಗೆದುಕೊಂಡಿದ್ದೇನೆ. ಈ ಜಗತ್ತಿನಲ್ಲಿ ನಮ್ಮ ಕುಟುಂಬಕ್ಕೂ ಮೀರಿ ನನಗೇನೂ ಇಲ್ಲ. ನನ್ನ ಕುಟುಂಬ ನನಗೆ ಎಲ್ಲವೂ ಆಗಿದೆ ಮತ್ತು ನಮ್ಮ ಜೀವನದ ಈ ಹೊಸ ಅಧ್ಯಾಯದಲ್ಲಿ ಅವರೊಂದಿಗೆ ಹೆಚ್ಚು ಸಮಯ ಕಳೆಯಲು ನಾನು ಬಯಸುತ್ತೇನೆ. ಹೀಗಾಗಿ ಟೆಸ್ಟ್ ಕ್ರಿಕೆಟ್‌ಗೆ
ನಿವೃತ್ತಿ ಘೋಷಿಸುತ್ತಿದ್ದೇನೆ’ ಎಂದು ಡಿ ಕಾಕ್ ತಿಳಿಸಿದರು.
ಇದನ್ನೂ ಓದಿ:ಬೂಸ್ಟರ್ ಡೋಸ್ ಪಡೆಯಲು ವಾಕ್-ಇನ್ ಮೂಲಕ ನೋಂದಣಿ
ವೃತ್ತಿ ಜೀವನದ ಅಂತ್ಯವಲ್ಲ
“ಈ ನಿರ್ಧಾರ ನನ್ನ ವೃತ್ತಿ ಜೀವನದ ಅಂತ್ಯವಲ್ಲ. ಸೀಮಿತ ಓವರ್ ಕ್ರಿಕೆಟ್‌ನಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳುತ್ತೇನೆ’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಟಿ20 ಸರಣಿ: ನ್ಯೂಜಿಲ್ಯಾಂಡ್ ವಿರುದ್ಧ ವೆಸ್ಟ್ ಇಂಡೀಸ್ ಗೆ 8 ವಿಕೆಟ್ ಗಳ ಜಯಭೇರಿ
ಜಿಂಬಾಬ್ವೆಗೆ ಆಗಮಿಸಿದ ಟೀಮ್ ಇಂಡಿಯಾ: ಆಗಸ್ಟ್ 18ರಿಂದ 3 ಪಂದ್ಯಗಳ ಏಕದಿನ ಸರಣಿ
ನಾನು ನಿಜಕ್ಕೂ ಅದೃಷ್ಟವಂತೆ,ಈ ಬಾರಿ ಹ್ಯಾಟ್ರಿಕ್ ತಪ್ಪಲಿಲ್ಲ: ಅಲಾನಾ ಕಿಂಗ್
ಟೆಸ್ಟ್ ಸರಣಿ: ದಕ್ಷಿಣ ಆಫ್ರಿಕಾ ತಂಡದ ಬಲಗೈ ಪೇಸ್ ಬೌಲರ್ ಡ್ನೂನ್ ಒಲಿವರ್ ಔಟ್
ಕೆನಡಿಯನ್ ಮಾಸ್ಟರ್: ಹ್ಯೂಬರ್ಟ್ ಹುರ್ಕಾಝ್- ಪಾಬ್ಲೊ ಕರೆನೊ ಬುಸ್ಟ ಮುಖಾಮುಖಿ