ಪಾಕ್ ಕ್ರಿಕೆಟ್ ಸರಣಿಯ ದಿನ ಪ್ರಕಟ
Team Udayavani, Apr 24, 2018, 6:30 AM IST
ಜೊಹಾನ್ಸ್‌ಬರ್ಗ್: ಮುಂಬರುವ ಜಿಂಬಾಬ್ವೆ, ಪಾಕಿಸ್ಥಾನ ಮತ್ತು ಶ್ರೀಲಂಕಾ ವಿರುದ್ಧ 2018-19ರ ಋತುವಿನಲ್ಲಿ ತವರಿನಲ್ಲಿ ನಡೆಯಲಿರುವ ಕ್ರಿಕೆಟ್ ಸರಣಿಗಳ ವೇಳಾಪಟ್ಟಿಯನ್ನು ಸೋಮವಾರ ಕ್ರಿಕೆಟ್ ದಕ್ಷಿಣ ಆಫ್ರಿಕಾ ಪ್ರಕಟಿಸಿದೆ.
ಸಪ್ಟೆಂಬರ್ ಅಂತ್ಯದಲ್ಲಿ ಜಿಂಬಾಬ್ವೆ ವಿರುದ್ಧದ ಮೂರು ಪಂದ್ಯಗಳ ಸರಣಿ ನಡೆಯಲಿದೆ. ಆಬಳಿಕ ಪಾಕಿಸ್ಥಾನವು ದಕ್ಷಿಣ ಆಫ್ರಿಕಾಕ್ಕೆ ಆಗಮಿಸಲಿದೆ. ಸೂಪರ್ ನ್ಪೋರ್ಟ್ಸ್ ಪಾರ್ಕ್‌ನಲ್ಲಿ ಈ ಸರಣಿಯ ಮೊದಲ ಪಂದ್ಯ ನಡೆಯಲಿದೆ. ಡೇ ಆಫ್ ಗುಡ್‌ವಿಲ್ (ಡಿ. 26) ದಿನ ಮೊದಲ ಪಂದ್ಯ ಆರಂಭವಾಗಲಿದೆ. ದ್ವಿತೀಯ ಟೆಸ್ಟ್ ಪಿಪಿಸಿ ನ್ಯೂಲ್ಯಾಂಡ್ಸ್‌ನಲ್ಲಿ ಹೊಸ ವರ್ಷದಂದು ಆರಂಭವಾಗಲಿದ್ದರೆ ಮೂರನೇ ಟೆಸ್ಟ್ ವಾಂಡರರ್ನಲ್ಲಿ ನಡೆಯಲಿದೆ. ಆಬಳಿಕ ಐದು ಪಂದ್ಯಗಳ ಏಕದಿನ ಮತ್ತು ಮೂರು ಪಂದ್ಯಗಳ ಟಿ20 ಸರಣಿಯ ಪಂದ್ಯಗಳು ನಡೆಯಲಿವೆ.
ಫೆಬ್ರವರಿ ಮಧ್ಯಭಾಗದಲ್ಲಿ ಶ್ರೀಲಂಕಾ ತನ್ನ ಪ್ರವಾಸ ಆರಂಭಿಸಲಿದ್ದು ಕಿಂಗ್ಸ್‌ಮೇಡ್, ಸೇಂಟ್ ಜಾರ್ಜ್‌ನಲ್ಲಿ ಟೆಸ್ಟ್ ಪಂದ್ಯಗಳನ್ನಾಡಲಿದೆ. ಆಬಳಿಕ ಐದು ಪಂದ್ಯಗಳ ಏಕದಿನ ಮತ್ತು ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಶ್ರೀಲಂಕಾ ತಂಡವು ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ.
ಪೂರ್ಣ ವೇಳಾಪಟ್ಟಿ
ನಮ್ಮ ತವರಿನ ಋತುವಿನ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಪೂರ್ಣ ವೇಳಾಪಟ್ಟಿಯನ್ನು ಪ್ರಕಟಿಸಲು ಹರ್ಷವಾಗುತ್ತಿದೆ ಎಂದು ಸಿಎಸ್‌ಎ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತಬಾಂಗ್ ಮೊರೊಯಿ ಹೇಳಿದ್ದಾರೆ. ಮೂರು ತಂಡಗಳ ಪ್ರವಾಸದ ಅವಧಿಯಲ್ಲಿ ನಾವು ಬ್ಯುಸಿಯಾಗಿ ಇರಲಿದ್ದೇವೆ. ವಿವಿಧ ಎದುರಾಳಿಗಳೆದುರು ನಮ್ಮ ತಂಡ 13 ಏಕದಿನ ಪಂದ್ಯಗಳ ಸಹಿತ ಹಲವು ಪಂದ್ಯ ಆಡಲಿದೆ. ಈ ಮೂಲಕ 2019ರ ಐಸಿಸಿ ವಿಶ್ವಕಪ್‌ಗೆ ಸಿದ್ಧಗೊಳ್ಳಲು ಪ್ರಯತ್ನಿಸಲಾಗುವುದು ಎಂದು ಅವರು ತಿಳಿಸಿದರು. ಮುಂದಿನ ವರ್ಷದ ಮೇ 30ರಿಂದ ಐಸಿಸಿ ವಿಶ್ವಕಪ್ ಆರಂಭವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಐಪಿಎಲ್ ಟೈ ಮ್ಯಾಚ್-07: ಗುಜರಾತ್ ಲಯನ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಮೇಲುಗೈ
ಮಹಿಳಾ ಟಿ20 ಚಾಲೆಂಜ್: ಮಿಥಾಲಿ ರಾಜ್-ಜೂಲನ್ ಗೋಸ್ವಾಮಿಗೆ ಇಲ್ಲ ಜಾಗ
ಐಪಿಎಲ್ 2022: ಡೆಲ್ಲಿ ಕ್ಯಾಪಿಟಲ್ಸ್-ಪಂಜಾಬ್ ಕಿಂಗ್ಸ್: ಮಸ್ಟ್ ವಿನ್ ಗೇಮ್
ಲಕ್ನೋ ಸೂಪರ್ಜೈಂಟ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 24 ರನ್ ಗೆಲುವು
ಪ್ರಧಾನಿ ಮೋದಿ ನಿವಾಸಕ್ಕೆ ಆಟಗಾರರಿಗೆ ಆಹ್ವಾನ