ಸೌತ್‌ ಏಶ್ಯನ್‌ ಗೇಮ್ಸ್‌ ಭಾರತದ ಶ್ರೇಷ್ಠ ನಿರ್ವಹಣೆ

Team Udayavani, Dec 11, 2019, 12:29 AM IST

ಕಾಠ್ಮಂಡು: ಭಾರತೀಯ ಕ್ರೀಡಾಪಟುಗಳು ಸೌತ್‌ ಏಶ್ಯನ್‌ ಗೇಮ್ಸ್‌ ನಲ್ಲಿ ಶ್ರೇಷ್ಠ ನಿರ್ವಹಣೆ ನೀಡಿ ಗಮನ ಸೆಳೆದಿದ್ದಾರೆ. ಒಟ್ಟಾರೆ 312 ಪದಕ ಗೆಲ್ಲುವ ಮೂಲಕ ಸತತ 13ನೇ ಬಾರಿ ಪದಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ಸಾಧನೆ ಮಾಡಿದೆ. 10 ದಿನಗಳ ಈ ಬಹುಸ್ಪರ್ಧೆಗಳ ಕೂಟದಲ್ಲಿ ಭಾರತ 174 ಚಿನ್ನ, 93 ಬೆಳ್ಳಿ ಮತ್ತು 45 ಕಂಚಿನ ಪದಕ ಜಯಿಸಿದ್ದು 2016ರಲ್ಲಿ ಗುವಾಹಾಟಿ ಮತ್ತು ಶಿಲ್ಲಾಂಗ್‌ನಲ್ಲಿ ನಡೆದ ಗೇಮ್ಸ್‌ ಸಾಧನೆಯನ್ನು ಹಿಂದಿಕ್ಕಿದೆ. 2016ರಲ್ಲಿ ಭಾರತ 189 ಚಿನ್ನ ಸಹಿತ 309 ಪದಕ ಜಯಿಸಿತ್ತು. ಚಿನ್ನದ ಲೆಕ್ಕದಲ್ಲಿ ಭಾರತ ಈ ಬಾರಿ ಕಡಿಮೆ ಸಾಧನೆ ಮಾಡಿದೆ.

ಆತಿಥೇಯ ನೇಪಾಲ 51 ಚಿನ್ನ ಸಹಿತ 206 ಪದಕ ಗೆದ್ದು ದ್ವಿತೀಯ ಸ್ಥಾನದಲ್ಲಿದ್ದರೆ ಶ್ರೀಲಂಕಾ ಮೂರನೇ ಸ್ಥಾನ ಪಡೆದಿದೆ.

ಕಿನ್ನಿಗೋಳಿ ಮೂಲದ ಅಪೇಕ್ಷಾಗೆ 2 ಚಿನ್ನ
ಸ್ಪರ್ಧೆಯ ಅಂತಿಮ ದಿನ ಭಾರತ 15 ಚಿನ್ನ ಸಹಿತ 18 ಪದಕ ಪಡೆದಿದೆ. ಈಜು ಸ್ಪರ್ಧೆಯಲ್ಲಿ ಭಾರತದ ಅಪೇಕ್ಷಾ ಫೆರ್ನಾಂಡಿಸ್‌ ತಲಾ ಎರಡು ಚಿನ್ನ ಮತ್ತು ಬೆಳ್ಳಿ ಗೆದ್ದಿದ್ದಾರೆ. ಕಿನ್ನಿಗೋಳಿ ಮೂಲದ ಅಪೇಕ್ಷಾ 200 ಮೀ. ಬ್ರೆಸ್ಟ್‌ ಸ್ಟ್ರೋಕ್‌ ಮತ್ತು 200 ಮೀ. ಬಟರ್‌ಫ್ಲೈನಲ್ಲಿ ಚಿನ್ನ ಗೆದ್ದಿದ್ದರೆ 100 ಮೀ. ಬಟರ್‌ಫ್ಲೈ ಮತ್ತು 400 ಮೀ. ವೈಯಕ್ತಿಕ ಮೆಡ್ಲೆಯಲ್ಲಿ ಬೆಳ್ಳಿ ಜಯಿಸಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಪೈಂಟಿಂಗ್‌, ಶಿಲ್ಪ, ಲೋಹ ಶಿಲ್ಪ, ಟೆಕ್ಸ್‌ಟೈಲ್‌ ಡಿಸೈನ್‌, ಇಂಟೀರಿಯರ್‌ ಡೆಕೋರೇಶನ್‌ ಮುಂತಾದ ವಿಭಾಗಗಳಲ್ಲಿ ಸ್ಪೆಶಲೈಸೇಶನ್‌ ಮಾಡಲು ಸಾಧ್ಯವಿದೆ. ಲಲಿತ ಕಲಾ...

  • ದೇಶ-ಭಾಷೆಯ ಪ್ರೇಮವನ್ನು ಸಾರುವ, ವ್ಯಕ್ತಿತ್ವ-ಅಭಿಪ್ರಾಯವನ್ನು ಬಿಂಬಿಸುವ, ಓದಿದ ಕೂಡಲೇ ವಾವ್‌ ಅನ್ನಿಸುವ ಚಂದದ ಸಾಲುಗಳನ್ನು ವಸ್ತ್ರದ ಮೇಲೆ ಮೂಡಿಸಿಕೊಳ್ಳಬಹುದು....

  • ಶಿಕ್ಷಣದಲ್ಲಿ ಇಂದು ಹಲವಾರು ಹೊಸತನಗಳು ಬಂದಿವೆ. ಕಲಿಯುವ, ಕಲಿಸುವ ಜವಾಬ್ದಾರಿಗಳು ಹೆಚ್ಚುತ್ತಾ ಹೋಗುತ್ತವೆ. ಕೆಲವೊಂದು ಕಡೆ ಶಿಕ್ಷಣ ಪದ್ಧತಿಗಳು ವಿದ್ಯಾರ್ಥಿಗಳಿಗೆ...

  • ಮಾನಸಿಕವಾಗಿ ಕುಗ್ಗಿರುವ ಹೆಣ್ಣುಮಕ್ಕಳನ್ನು ಖೆಡ್ಡಾಗೆ ಬೀಳಿಸಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳಲು ಹೊಂಚು ಹಾಕುತ್ತಿರುವ ತೋಳಗಳೇನೂ ಕಡಿಮೆ ಇಲ್ಲ. ತಾನೊಬ್ಬ...

  • ಸಿಟಿಗಳಲ್ಲಿರುವ ಹುಡುಗೀರು, ಈಗಷ್ಟೇ ಮೂವತ್ತಾಯ್ತು. ಎರಡು ವರ್ಷ ಬಿಟ್ಟು ಮದುವೆ ಆದರಾಯ್ತು. ಈಗ್ಲೆ ಏನವಸರ ಅನ್ನುತ್ತಾರೆ. ಆದರೆ, ಹಳ್ಳಿಯಲ್ಲಿರುವ ಹೆಣ್ಣುಮಕ್ಕಳಿಗೆ,...