ಸೌತ್‌ ಏಶ್ಯನ್‌ ಗೇಮ್ಸ್‌: ಭಾರತದ ಪದಕ “ಶತಕ’

Team Udayavani, Dec 5, 2019, 10:44 PM IST

ಕಾಠ್ಮಂಡು: ಸೌತ್‌ ಏಶ್ಯನ್‌ ಗೇಮ್ಸ್‌ ನಲ್ಲಿ ಭಾರತ “ಪದಕ ಶತಕ’ ದಾಖಲಿಸಿದೆ. ಕೂಟದ 4ನೇ ದಿನವಾದ ಗುರುವಾರ 56 ಪದಕಗಳನ್ನು ಬೇಟೆಯಾಡುವ ಮೂಲಕ ಭಾರತ ಈ ಸಾಧನೆಗೈದಿತು. 62 ಚಿನ್ನ, 41 ಬೆಳ್ಳಿ ಹಾಗೂ 21 ಕಂಚು ಸೇರಿದಂತೆ ಒಟ್ಟು 124 ಪದಕಗಳನ್ನು ಬೇಟೆಯಾಡಿದೆ.

ಆತಿಥೇಯ ನೇಪಾಲ 101 ಪದಕಗ ಳೊಂದಿಗೆ ದ್ವಿತೀಯ ಸ್ಥಾನಿಯಾಗಿದೆ (36 ಚಿನ್ನ, 27 ಬೆಳ್ಳಿ, 38 ಕಂಚು). ಲಂಕಾ 107 ಪದಕ ಜಯಿಸಿದರೂ ಚಿನ್ನದಲ್ಲಿ ಹಿಂದುಳಿದು (17) 3ನೇ ಸ್ಥಾನ ಪಡೆದಿದೆ. ಗುರುವಾರ ಭಾರತ 30 ಚಿನ್ನ, 18 ಬೆಳ್ಳಿ,8 ಕಂಚಿನ ಪದಕಗಳನ್ನು ಜಯಿಸಿತು.

ಭಾರತದ ಹೆಚ್ಚಿನ ಸಂಖ್ಯೆಯ ಪದಕಗಳು ಈಜು, ವುಶು, ವೇಟ್‌ಲಿಫ್ಟಿಂಗ್‌ ಮತ್ತು ಆ್ಯತ್ಲೆಟಿಕ್ಸ್‌ನಲ್ಲಿ ಬಂದವು. ಸೂರಜ್‌ ಸಿಂಗ್‌ ವುಶು ಆಲ್‌ರೌಂಡ್‌ ವಿಭಾಗದಲ್ಲಿ ಚಿನ್ನ ಗೆಲ್ಲುವ ಮೂಲಕ ದಿನದ ಖಾತೆ ತೆರೆದರು. ಬಳಿಕ ವೈ. ಸಂತೋಯಿದೇವಿ, ಪೂನಂ, ದೀಪಿಕಾ, ಸುಶೀಲಾ, ರೋಶಿಬಿನಾ ದೇವಿ ಮತ್ತು ಸುನೀಲ್‌ ಸಿಂಗ್‌ ಕೂಡ ವುಶು ಚಿನ್ನ ಬೇಟೆಯಾಡಿದರು.

ಸ್ವಿಮ್ಮಿಂಗ್‌ನಲ್ಲಿ 11 ಪದಕ
ಈಜು ಸ್ಪರ್ಧೆಯಲ್ಲಿ ಭಾರತ 11 ಪದಕಗಳನ್ನು ಬಾಚಿತು. ಇದರಲ್ಲಿ 4 ಚಿನ್ನ, 6 ಬೆಳ್ಳಿ, ಒಂದು ಕಂಚು ಸೇರಿದೆ. ಲಿಕಿತ್‌ ಸೆಲ್ವರಾಜ್‌ ಪ್ರೇಮ ಪುರುಷರ 200 ಮೀ. ಬ್ರೆಸ್ಟ್‌ ಸ್ಟ್ರೋಕ್‌ನಲ್ಲಿ, ಅಪೇಕ್ಷಾ ಡೆಲಿಲಾ ಫೆರ್ನಾಂಡಿಸ್‌ ವನಿತಾ 200 ಮೀ. ಬ್ರೆಸ್ಟ್‌ ಸ್ಟ್ರೋಕ್‌ನಲ್ಲಿ ಹಾಗೂ ದಿವ್ಯಾ ಸತಿಜಾ ವನಿತಾ 100 ಮೀ. ಬಟರ್‌ಫ್ಲೈ ವಿಭಾಗದಲ್ಲಿ ಮೊದಲ ಸ್ಥಾನ ಅಲಂಕರಿಸಿದರು. ಬಳಿಕ ವನಿತಾ 400 ಮೀ. ಫ್ರೀಸ್ಟೈಲ್‌ ರಿಲೇ ತಂಡವೂ ಚಿನ್ನ ಗೆದ್ದಿತು.

ವೇಟ್‌ಲಿಫ್ಟಿಂಗ್‌ ಸ್ಪರ್ಧೆಯ ಆರಂಭದ ದಿನವಾದ ಗುರುವಾರ 4 ಚಿನ್ನ ಭಾರತದ ಪಾಲಾಯಿತು. ಟೆÌàಕಾಂಡೊ ಸ್ಪರ್ಧೆಯಲ್ಲೂ ಭಾರತದ ಪ್ರಭುತ್ವ ಮುಂದುವರಿಯಿತು. 3 ಚಿನ್ನ, 2 ಬೆಳ್ಳಿ, ಒಂದು ಕಂಚು ಒಲಿಯಿತು.

ಆ್ಯತ್ಲೆಟಿಕ್ಸ್‌ನಲ್ಲಿ ಒಂದು ಚಿನ್ನ ಸಹಿತ 6 ಪದಕಗಳನ್ನು ಭಾರತ ಬುಟ್ಟಿಗೆ ಹಾಕಿಕೊಂಡಿತು. ಏಕೈಕ ಬಂಗಾರ ಟ್ರಿಪಲ್‌ ಜಂಪರ್‌ ಕಾರ್ತಿಕ್‌ ಉನ್ನಿಕೃಷ್ಣನ್‌ ಪಾಲಾಯಿತು.

ಫ‌ುಟ್‌ಬಾಲ್‌: ವನಿತೆಯರಿಗೆ ಜಯ
ಫ‌ುಟ್‌ಬಾಲ್‌ನಲ್ಲಿ ಅಮೋಘ ಸಾಧನೆ ಮುಂದುವರಿಸಿದ ಭಾರತದ ವನಿತೆಯರು ಗುರುವಾರ ಶ್ರೀಲಂಕಾವನ್ನು 6-0 ಅಂತರದಿಂದ ಮಣಿಸಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ