ಸ್ಪೇನ್‌ನ ಫ‌ುಟ್ಬಾಲ್‌ ಕೋಚ್‌ ಕೊರೊನಾಕ್ಕೆ ಬಲಿ


Team Udayavani, Mar 18, 2020, 6:30 AM IST

ಸ್ಪೇನ್‌ನ ಫ‌ುಟ್ಬಾಲ್‌ ಕೋಚ್‌ ಕೊರೊನಾಕ್ಕೆ ಬಲಿ

ಟೋಕಿಯೊ: ಜಪಾನ್‌ನಲ್ಲಿ ಒಲಿಂಪಿಕ್ಸ್‌ ಕೂಟ ನಡೆಸಬೇಕು ಅಥವಾ ಬೇಡ? ಎನ್ನುವ ಕುರಿತು ಚರ್ಚೆ ಶುರುವಾಗಿರುವ ಬೆನ್ನಲ್ಲೇ ಜಪಾನ್‌ ಒಲಿಂಪಿಕ್ಸ್‌ ಸಮಿತಿ ಉಪ ಮುಖ್ಯಸ್ಥ ಕೊಝೊ ತಶಿಮಾ ಅವರೇ ಕೊರೊನಾ ಸೋಂಕಿಗೆ ಒಳಗಾಗಿರುವ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಇದೇ ವೇಳೆ ಸ್ಪೇನ್‌ನಲ್ಲಿ ಓರ್ವ ಫ‌ುಟ್‌ಬಾಲ್‌ ಕೋಚ್‌ ಕೊರೊನಾಕ್ಕೆ ಬಲಿಯಾಗಿದ್ದಾರೆ ಎನ್ನುವ ಆಘಾತಕಾರಿ ಸುದ್ದಿ ಪ್ರಕಟಗೊಂಡಿದೆ.

ಸ್ಪೇನ್‌ನಲ್ಲಿ ಫ‌ುಟ್ಬಾಲ್‌ ಕೋಚ್‌ ಸಾವು
ಕ್ರೀಡಾ ಪಟುಗಳು ಕೊರೊನಾ ತಪಾಸಣೆಗೆ ಒಳಗಾಗಿದ್ದನ್ನು ನೋಡಿದ್ದೇವೆ. ಆದರೆ ಸ್ಪೇನ್‌ನಲ್ಲಿ 21 ವರ್ಷದ ಫ‌ುಟ್‌ಬಾಲ್‌ ಕೋಚ್‌ ಫ್ರಾನ್ಸಿಸ್ಕೊ ಗಾರ್ಸಿಯಾ ಎನ್ನುವವರು ಕೊರೊನಾಕ್ಕೆ ಬಲಿಯಾಗಿದ್ದಾರೆ, ಕ್ರೀಡಾಲೋಕದಲ್ಲಿ ಕೊರೊನಾಕ್ಕೆ ಮೃತಪಟ್ಟ ಮೊದಲ ವ್ಯಕ್ತಿ ಆಗಿದ್ದಾರೆ. ಸ್ಪೇನ್‌ನ ಮಲಗ ಪ್ರಾದೇಶಿಕ ಆಸ್ಪತ್ರೆಯಲ್ಲಿ ಸ್ಪೇನ್‌ ಕೋಚ್‌ ಸಾವಿಗೀಡಾಗಿರುವುದನ್ನು ಸೆಕೆಂಡ್‌ ಡಿವಿಷನ್‌ ಕ್ಲಬ್‌ ಅಟ್ಲೆಟಿಕೊ ಪೋರ್ಟಾಡ ಅಲ್ಟಾ ಸ್ಪಷ್ಟಪಡಿಸಿದೆ. ಇವರಿಗೆ ರಕ್ತ ಕ್ಯಾನ್ಸರ್‌ ಇತ್ತು, ಆಸ್ಪತ್ರೆಗೆ ತಪಾಸಣೆಗೆ ತೆರಳಿದ್ದಾಗ ಕೊರೊನಾ ಸೋಂಕಿರುವುದು ಗೊತ್ತಾಗಿದೆ ಎನ್ನಲಾಗಿದೆ.

“ದುರದೃಷ್ಟಕರ ಎಂಬಂತೆ ಕೋಚ್‌ ಫ್ರಾನ್ಸಿಸ್ಕೊ ಗಾರ್ಸಿಯಾ ನಮ್ಮನ್ನು ಅಗಲಿ¨ªಾರೆ. ಅವರ ಕುಟುಂಬ ಮತ್ತು ಬಂಧು-ಮಿತ್ರರಲ್ಲಿ ಸಂತಾಪ ಸೂಚಿಸುತ್ತೇವೆ. ನಮಗೆ ಅಗತ್ಯವಿದ್ದ ಸಂದರ್ಭದÇÉೆಲ್ಲ ನಿಮ್ಮ ಸೇವೆ ಒದಗಿಸಿದ್ದೀರಿ ನಿಮ್ಮನ್ನು ಮರೆಯಲು ಸಾಧ್ಯವಿಲ್ಲ. ಸದಾ ನಿಮ್ಮನ್ನು ಸ್ಮರಿಸಲಾಗುವುದು’ ಎಂದು ಅಟ್ಲೆಟಿಕೊ ಪೋರ್ಟಾಡ ಅಲ್ಟಾ ತಂಡ ತನ್ನ ಹೇಳಿಕೆಯಲ್ಲಿ ಸಂತಾಪ ಸೂಚಿಸಿದೆ.

ಶೇ.35 ಸ್ಪೇನ್‌ ಫ‌ುಟ್ಬಾಲಿಗರಿಗೆ ಕೊರೊನಾ
ಸ್ಪೇನ್‌ನ ಕ್ಲಬ್‌ ಫ‌ುಟ್ಬಾಲಿಗರಲ್ಲಿ ಶೇ.35ರಷ್ಟು ಆಟಗಾರರಿಗೆ ಕೊರೊನಾ ಸೋಂಕು ತಗುಲಿದೆಯಂತೆ, ಈ ವಿಷಯವನ್ನು ಅಲ್ಲಿನ ಕ್ಲಬ್‌ಗಳೇ ದೃಢಪಡಿಸಿವೆ. ಸೋಂಕಿನ ತೀವ್ರತೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ, ಕೊರೊನಾ ತಗುಲಿರುವ ಆಟಗಾರರನ್ನು ಪ್ರತ್ಯೇಕಿಸುವ ಕಾರ್ಯ ಶುರುವಾಗಬೇಕಿದೆ. ಅದರಲ್ಲೂ ವೆಲೆನ್ಶಿಯಾ ಫ‌ುಟ್‌ಬಾಲ್‌ ಕ್ಲಬ್‌ನ ಹೆಚ್ಚಿನ ಆಟಗಾರರಿಗೆ ಕೊರೊನಾ ಸೋಂಕಿದೆ ಎನ್ನುವುದನ್ನು ಸ್ವತಃ ಕ್ಲಬ್‌ ಬಹಿರಂಗಪಡಿಸಿದೆ.

ಒಲಿಂಪಿಕ್ಸ್‌ ಸಂಘಟಕನಿಗೆ ಕೊರೊನಾ
ಟೋಕಿಯೊ: ಜಪಾನ್‌ನಲ್ಲಿ ಒಲಿಂಪಿಕ್ಸ್‌ ಸಂಘಟಿಸುವ ಹೊಣೆ ವಹಿಸಿಕೊಂಡಿರುವ ಜಪಾನ್‌ ಒಲಿಂಪಿಕ್ಸ್‌ ಕಮಿಟಿಯ ಉಪ ಮುಖ್ಯಸ್ಥ ಕೊಝೊ ತಶಿಮಾ ಅವರಿಗೆ ಕೊರೊನಾ ಸೋಂಕು ತಟ್ಟಿದೆ. ಈ ಬೆಳವಣಿಗೆ ಟೋಕಿಯೊದಲ್ಲಿ ಒಲಿಂಪಿಕ್ಸ್‌ ನಡೆಸುವುದು ಎಷ್ಟು ಸುರಕ್ಷಿತ ಎಂಬ ಅನುಮಾನಕ್ಕೆ ಕಾರಣವಾಗಿದೆ.

ಜಪಾನ್‌ ಫ‌ುಟ್‌ಬಾಲ್‌ ಅಸೋಸಿಯೇಶನ್‌ನ ಮುಖ್ಯಸ್ಥರೂ ಆಗಿರುವ ತಶಿಮ ಅಸೋಸಿಯೇಶನ್‌ ಮೂಲಕ ನೀಡಿರುವ ಪ್ರಕಟನೆಯಲ್ಲಿ ತನಗೆ ಕೊರೊನಾ ಸೋಂಕು ತಗಲಿರುವುದನ್ನು ಬಹಿರಂಗ ಪಡಿಸಿದ್ದಾರೆ. ಸ್ವಲ್ಪ ಜ್ವರ ಬರುತ್ತಿತ್ತು. ವೈದ್ಯಕೀಯ ತಪಾಸಣೆ ಮಾಡಿಸಿಕೊಂಡಾಗ ಕೊರೊನಾ ಪಾಸಿಟಿವ್‌ ಎಂದು ದೃಢ ಪಟ್ಟಿದೆ ಈಗ ವೈದ್ಯರ ಸಲಹೆಯನ್ನು ಪಾಲಿಸುತ್ತಿದ್ದೇನೆ ಎಂದು ತಶಿಮ ಹೇಳಿಕೊಂಡಿದ್ದಾರೆ.

ತಶಿಮ ಫೆ. 28ರಿಂದೀಚೆಗೆ ವಿದೇಶ ಪ್ರವಾಸದಲ್ಲಿದ್ದರು. ಈ ಸಂದರ್ಭದಲ್ಲಿ ಬೆಲ್‌ ಫಾಸ್ಟ್‌, ಆಮ್‌ ಸ್ಟರ್‌ಡಾಮ್‌, ಯುರೋಪ್‌, ಅಮೆರಿಕ ಮತ್ತಿತರ ದೇಶಗಳಿಗೆ ಭೇಟಿ ನೀಡಿದ್ದಾರೆ. ಅಲ್ಲೆಲ್ಲ ಹಸ್ತಲಾಘವ, ಅಪ್ಪುಗೆ, ಬೈಸಸ್‌( ಕೆನ್ನೆಗೆ ಮುತ್ತಿಕ್ಕುವುದು) ಮಾಡಿಸಿಕೊಂಡಿದ್ದಾರೆ. ಹೀಗಾಗಿ ಅಲ್ಲೇ ಎಲ್ಲೋ ಸೋಂಕು ತಗಲಿರುವ ಅನುಮಾನವಿದೆ.

ಟಾಪ್ ನ್ಯೂಸ್

ಮೆಲಾನಿಯಾ ಟ್ರಂಪ್‌ ಟೋಪಿಗಿಲ್ಲ ಬೆಲೆ

ಮೆಲಾನಿಯಾ ಟ್ರಂಪ್‌ ಟೋಪಿಗಿಲ್ಲ ಬೆಲೆ

ಆಮಿಷಕ್ಕೊಳಗಾಗಿ ಮತದಾನ ಮಾಡಬೇಡಿ: ನ್ಯಾ| ಹೆಗ್ಡೆ

ಆಮಿಷಕ್ಕೊಳಗಾಗಿ ಮತದಾನ ಮಾಡಬೇಡಿ: ನ್ಯಾ| ಹೆಗ್ಡೆ

1-dds

ಸೊರಬ ಪುರಸಭೆ : ಪುನಃ ಅಧಿಕಾರದ ಚುಕ್ಕಾಣಿ ಹಿಡಿದ ಬಿಜೆಪಿ

1-ffff

ಸಿ.ಎಂ. ಇಬ್ರಾಹಿಂ ಭೇಟಿಯಾದ ಹೆಚ್ ಡಿಕೆ: ಮಹತ್ವದ ಚರ್ಚೆ

ಬಿಜೆಪಿ ಸಂಚು;ಹೆಲಿಕಾಪ್ಟರ್ ನಲ್ಲಿ ಮುಜಾಫರ್ ನಗರಕ್ಕೆ ತೆರಳಲು ಅವಕಾಶ ನೀಡುತ್ತಿಲ್ಲ; ಅಖಿಲೇಶ್

ಬಿಜೆಪಿ ಸಂಚು;ಹೆಲಿಕಾಪ್ಟರ್ ನಲ್ಲಿ ಮುಜಾಫರ್ ನಗರಕ್ಕೆ ತೆರಳಲು ಅವಕಾಶ ನೀಡುತ್ತಿಲ್ಲ; ಅಖಿಲೇಶ್

1-dsds

ಮೊಮ್ಮಗಳ ಆತ್ಮಹತ್ಯೆ : ಮೌನಕ್ಕೆ ಶರಣಾದ ಬಿಎಸ್ ವೈ; ಪ್ರಧಾನಿ, ಗಣ್ಯರಿಂದ ಸಾಂತ್ವನ

ಬಿಎಸ್ ವೈ ಮೊಮ್ಮಗಳು ಸೌಂದರ್ಯ ಸಾವಿಗೆ ಪ್ರಸವ ನಂತರದ ಖಿನ್ನತೆಯೇ ಕಾರಣ: ಆರಗ ಜ್ಞಾನೇಂದ್ರ

ಬಿಎಸ್ ವೈ ಮೊಮ್ಮಗಳು ಸೌಂದರ್ಯ ಸಾವಿಗೆ ಪ್ರಸವ ನಂತರದ ಖಿನ್ನತೆಯೇ ಕಾರಣ: ಆರಗ ಜ್ಞಾನೇಂದ್ರಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ravi shastri

ರಣಜಿ ಟ್ರೋಫಿ ಭಾರತೀಯ ಕ್ರಿಕೆಟ್ ನ ಬೆನ್ನುಮೂಳೆಯಂತೆ,ಅದನ್ನು ನಿರ್ಲಕ್ಷಿಸಬೇಡಿ:ರವಿ ಶಾಸ್ತ್ರಿ

ಆಸ್ಟ್ರೇಲಿಯಾ ಓಪನ್ ಫೈನಲ್ ತಲುಪಿದ ರಫೆಲ್ ನಡಾಲ್: ದಾಖಲೆಗೆ ಬೇಕು ಇನ್ನೊಂದೇ ಗೆಲುವು

ಆಸ್ಟ್ರೇಲಿಯಾ ಓಪನ್ ಫೈನಲ್ ತಲುಪಿದ ರಫೆಲ್ ನಡಾಲ್: ದಾಖಲೆಗೆ ಬೇಕು ಇನ್ನೊಂದೇ ಗೆಲುವು

ICC U-19 World Cup: Afghanistan beat Sri Lanka

ಲಂಕಾಗೆ ಶಾಕ್ ನೀಡಿದ ಅಫ್ಘಾನ್ ಹುಡುಗರು: ಸೆಮಿ ಫೈನಲ್ ತಲುಪಿದ ಅಫ್ಘಾನ್ ಅಂಡರ್ 19 ತಂಡ

India Maharajas lost match against World Giants in legends league

ಬ್ರೆಟ್ ಲಿ ಯಾರ್ಕರ್ ಗೆ ಮಣಿದ ಮಹಾರಾಜರು ಕೂಟದಿಂದ ಔಟ್; ನಮನ್-ಪಠಾಣ್ ಹೋರಾಟ ವ್ಯರ್ಥ; ವಿಡಿಯೋ

ಅಂಡರ್‌-19 ವಿಶ್ವಕಪ್‌ : ಸೆಮಿ ಪ್ರವೇಶಿಸಿದ ಇಂಗ್ಲೆಂಡ್‌

ಅಂಡರ್‌-19 ವಿಶ್ವಕಪ್‌ : ಸೆಮಿ ಪ್ರವೇಶಿಸಿದ ಇಂಗ್ಲೆಂಡ್‌

MUST WATCH

udayavani youtube

ಹುತಾತ್ಮ ಸೈನಿಕ ಮಗನ ಪ್ರತಿಮೆ ನಿರ್ಮಿಸಿದ ತಾಯಿ

udayavani youtube

ಇಲ್ಲಿದೆ ‘ಶುದ್ಧ’ ರಾಸಾಯನಿಕ ಅಕ್ಕಿ !ನೀವು ಕೇಳಿಯೇ ಇರದ 3 ವಿಶೇಷತೆಗಳು

udayavani youtube

400 ಕೋಟಿ ಬೆಲೆಬಾಳುವ 47 ಕೆಜಿ ಹೆರಾಯಿನ್ವಶಪಡಿಸಿಕೊಂಡ BSF

udayavani youtube

ಪ್ರಾಣವನ್ನೇ ಪಣಕ್ಕಿಟ್ಟು ನಾಯಿಯನ್ನು ರಕ್ಷಿಸಿದ ತೆಲಂಗಾಣ ಪೊಲೀಸ್​​ ಅಧಿಕಾರಿ

udayavani youtube

ಬೀದಿ ದೀಪ, ಸಿಬ್ಬಂದಿ ಸಂಬಳದ್ದೇ ಬಿಸಿ ಬಿಸಿ ಚರ್ಚೆ

ಹೊಸ ಸೇರ್ಪಡೆ

ಮೆಲಾನಿಯಾ ಟ್ರಂಪ್‌ ಟೋಪಿಗಿಲ್ಲ ಬೆಲೆ

ಮೆಲಾನಿಯಾ ಟ್ರಂಪ್‌ ಟೋಪಿಗಿಲ್ಲ ಬೆಲೆ

ಆಮಿಷಕ್ಕೊಳಗಾಗಿ ಮತದಾನ ಮಾಡಬೇಡಿ: ನ್ಯಾ| ಹೆಗ್ಡೆ

ಆಮಿಷಕ್ಕೊಳಗಾಗಿ ಮತದಾನ ಮಾಡಬೇಡಿ: ನ್ಯಾ| ಹೆಗ್ಡೆ

1-dds

ಸೊರಬ ಪುರಸಭೆ : ಪುನಃ ಅಧಿಕಾರದ ಚುಕ್ಕಾಣಿ ಹಿಡಿದ ಬಿಜೆಪಿ

chikkamagalore news

ಹುಲಿ ಗಣತಿಯಲ್ಲಿ ಕಾಫಿ ನಾಡಿಗೆ ಪ್ರಥಮ ಸ್ಥಾನ?

sagara news

ನ್ಯಾಯಾಧೀಶರ ವಿರುದ್ಧ ಕ್ರಮಕ್ಕೆ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.