- Saturday 07 Dec 2019
ಬುಮ್ರಾ ದೀ ಗ್ರೇಟ್ : ಇಪ್ಪತ್ತು ತಿಂಗಳು ಹನ್ನೆರಡು ಟೆಸ್ಟ್ ಅರವತ್ತೆರಡು ವಿಕೆಟ್‌ಗಳು
Team Udayavani, Oct 6, 2019, 6:39 PM IST
ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಬೌಲಿಂಗ್ ಶ್ರೇಯಾಂಕದಲ್ಲಿ ಮೂರನೇ ಸ್ಥಾನಕ್ಕೇರಿದ ಭಾರತದ ವೇಗದ ಬೌಲರ್ ಜಸ್ ಪ್ರೀತ್ ಬೂಮ್ರಾ ಅವರ ಸಾಧನೆಯನ್ನು ಬಿಂಬಿಸಲು ಈ ಮೂರು ಸಾಲುಗಳಷ್ಟೇ ಸಾಕಲ್ಲವೇ?
2018ರ ಜನವರಿಯಲ್ಲಿ ದಕ್ಷಿಣ ಆಫ್ರಿಕಾ ನೆಲದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಬುಮ್ರಾ ಇವತ್ತು ಇಡೀ ಕ್ರಿಕೆಟ್ ಜಗತ್ತನ್ನು ಆವರಿಸಿಕೊಂಡಿರುವ ಬೌಲರ್. ತನಗಿಂತಲೂ ಅನುಭವಿಗಳಾದ ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್ ಮತ್ತು ಇಶಾಂತ್ ಶರ್ಮಾ ಅವರ ಪೈಪೋಟಿಯನ್ನು ಮೀರಿ ಬೆಳೆದಿರುವ 25 ವರ್ಷದ ಬುಮ್ರಾ ಈಗ ಏಕದಿನ ಕ್ರಿಕೆಟ್‌ನಲ್ಲಿಯೂ ಅಗ್ರ ಶ್ರೇಯಾಂಕಿತ.
ನಿಗದಿತ ಓವರ್ ಗಳ ಕ್ರಿಕೆಟ್ ನಲ್ಲಿ ಡೆತ್ ಓವರ್ ಪರಿಣತನಾಗಿ ಬ್ಯಾಟ್ಸ್‌ಮನ್ ಗಳಿಗೆ ಮೈಚಳಿ ಬಿಡಿಸಿರುವ ಬುಮ್ರಾ ಟೆಸ್ಟ್ ಕ್ರಿಕೆಟ್‌ನಲ್ಲಿಯೂ ಮಿಂಚುವುದು ಕಷ್ಟ, ಏಕೆಂದರೆ ದೀರ್ಘ ಮಾದರಿಯಲ್ಲಿ ಫಿಟ್ನೆಸ್ ಮುಖ್ಯ.
ಟ್ವೆಂಟಿ-20ಯಲ್ಲಿ ನಾಲ್ಕು ಓವರ್ ಮತ್ತು ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ 10 ಓವರ್ ಮಾತ್ರ ಬೌಲಿಂಗ್ ಮಾಡಬೇಕು. ಆದರೆ ಟೆಸ್ಟ್‌ನಲ್ಲಿ ಸುದೀರ್ಘ ಸ್ಪೆಲ್ ಗಳು ಇರುತ್ತವೆ. ಇದು ನಿಜಕ್ಕೂ ಟೆಸ್ಟ್ ಎಂದು ಹಲವು ದಿಗ್ಗಜರು ಅನುಮಾನಿಸಿದ್ದರು. ವೈಟ್ ಬಾಲ್ ಮತ್ತು ರೆಡ್ ಬಾಲ್ ಕ್ರಿಕೆಟ್ ಗೆ ವ್ಯತ್ಯಾಸ ಇದೆ ಅಂದಿದ್ದರು.
ಅಂದು 85ನೇ ಶ್ರೇಯಾಂಕದೊಂದಿಗೆ ಕಣಕ್ಕಿಳಿದಿದ್ದ ಬೂಮ್ರಾ ದಕ್ಷಿಣ ಆಫ್ರಿಕಾ ಪ್ರವಾಸದ ಮೂರು ಟೆಸ್ಟ್‌ಗಳು ಮುಗಿದಾಗ 42ನೇ ಸ್ಥಾನಕ್ಕೇರಿದ್ದರು. 14 ವಿಕೆಟ್‌ಗಳು ಅವರ ಖಾತೆಯಲ್ಲಿದ್ದವು. ನಂತರ ಇಂಗ್ಲೆಂಡ್ ಪ್ರವಾಸದಲ್ಲಿ ಅವರ ಜಾದೂ ಮುಂದುವರಿಯಿತು. ಭಾರತ ಸರಣಿ ಸೋತರೂ ಬೂಮ್ರಾ ವಿಕೆಟ್ ಬೇಟೆ ನಿರಂತರವಾಗಿತ್ತು. ಶ್ರೇಯಾಂಕದಲ್ಲಿ ಒಂಬತ್ತು ಸ್ಥಾನಗಳ ಬಡ್ತಿ ಪಡೆದರು. ಆಸ್ಟ್ರೇಲಿಯಾದಲ್ಲಿಯೂ ಅವರು ಮಿಂಚಿದರು.
ಬೂಮ್ರಾ ತಮ್ಮ ವಿಶಿಷ್ಟ ಶೈಲಿಯ ಛಾಪು ಮೂಡಿಸಿ ಮೂಡಿಸಿದ್ದಾರೆ. ಆಡಿರುವ ಒಂದು ಡಜನ್ ಪಂದ್ಯಗಳಲ್ಲಿಯೇ ಐದು ಸಲ ಐದು ವಿಕೆಟ್ ಗೊಂಚಲುಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡಿದ್ದಾರೆ. ಈಚೆಗೆ ವೆಸ್ಟ್ ಇಂಡೀಸ್ ತಂಡದ ಎದುರಿನ ಸರಣಿಯ ಎರಡನೇ ಪಂದ್ಯದಲ್ಲಿ ಹ್ಯಾಟ್ರಿಕ್ ಕೂಡ ಗಳಿಸಿದರು.
ವಿದೇಶಿ ನೆಲದ ಸಾಧಕ
ಬೂಮ್ರಾ ಸಾಧನೆಯ ಹಾದಿ ಇನ್ನೊಂದು ವಿಶೇಷ ಏನು ಗೊತ್ತಾ? ಅವರು ಇದುವರೆಗೆ ಭಾರತದಲ್ಲಿ ಒಂದೇ ಒಂದು ಪಂದ್ಯ ಆಡಿಲ್ಲ. ಎಲ್ಲ ಪಂದ್ಯಗಳನ್ನೂ ಅವರು ಆಡಿರುವುದು ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ದೇಶಗಳಲ್ಲಿ. ಮಧ್ಯಮ ವೇಗಿಗಳಿಗೆ ನೆರವು ನೀಡುವ ಪಿಚ್ ಗಳು ಅಲ್ಲಿವೆ. ಆದರೆ, ಅ ಪಿಚ್ ಗಳಿಗೆ ಹೊಂದಿಕೊಂಡು ಬೌಲಿಂಗ್ ಮಾಡುವುದು ಕೂಡ ಕಷ್ಟಸಾಧ್ಯವಾದ ಸಾಧನೆ.
ವಿಂಡೀಸ್ ನಲ್ಲಿ ವಿಪರೀತ ಬಿಸಿಲಿನಲ್ಲಿ ಪಿಚ್ ವರ್ತಿಸಿದ ರೀತಿಯನ್ನು ನೋಡಿದ್ದೇವೆ. ಅಲ್ಲಿಯ ಬೌಲರ್ ಗಳೇ ಲಯ ಕಂಡುಕೊಳ್ಳಲು ಪರದಾಡಿದ್ದರು. ಆದರೆ ಅದೇ ಪಿಚ್ ನಲ್ಲಿ ಅಹಮದಾಬಾದಿನ ಹುಡುಗ ಜಸ್ಸಿ ಹ್ಯಾಟ್ರಿಕ್ ಮಾಡಿದ್ದರು. ಒಂದೇ ಇನಿಂಗ್ಸ್ ನಲ್ಲಿ ಆರು ವಿಕೆಟ್ ಕೂಡ ಕಬಳಿಸಿದ್ದರು. ನಾನು ತಂಡದಲ್ಲಿ ಹೊಸಬ. ಆದ್ದರಿಂದ ಹಿರಿಯ ಆಟಗಾರರಿಗೆ ಬಹಳಷ್ಟು ಪ್ರಶ್ನೆಗಳನ್ನು ಕೇಳುತ್ತೇನೆ. ಕಲಿಯುವ ಅವಕಾಶವನ್ನು ಬಿಡುವುದಿಲ್ಲ’ ಎಂದು ಹೇಳುವ ಬುಮ್ರಾ, ಈ ಹ್ಯಾಟ್ರಿಕ್ ಸಾಧನೆಯನ್ನು ನಾಯಕ ವಿರಾಟ್ ಕೊಹ್ಲಿಗೆ ಅರ್ಪಿಸುತ್ತೇನೆ’ ಎಂದಿದ್ದಾರೆ.
ಭಾರತ ತಂಡದ ಸಾಧನೆಗಳ ಇತಿಹಾಸವನ್ನು ನೋಡಿದಾಗ. ವಿದೇಶಿ ನೆಲದಲ್ಲಿ ಹೆಚ್ಚು ಯಶಸ್ವಿಯಾದ ನಾಯಕರ ಬಳಗದಲ್ಲಿ ಪರಿಣಾಮಕಾರಿ ಮಧ್ಯಮ ವೇಗಿಗಳಿದ್ದರು. ಮೊಹಮ್ಮದ್ ಅಜರುದ್ದೀನ್ ಅವರಿಗೆ ಜಾವಗಲ್ ಶ್ರೀನಾಥ್ ಸೌರವ್ ಗಂಗೂಲಿಗೆ ಜಹೀರ್ ಖಾನ್, ಇಶಾಂತ್ ಶರ್ಮಾ ಅವರ ಸಾಥ್ ಸಿಕ್ಕಿತ್ತು. ಮಹೇಂದ್ರಸಿಂಗ್ ಧೋನಿ ಸಮಯದಲ್ಲಿ ಜಹೀರ್, ಇರ್ಫಾನ್,ಉಮೇಶ್ ಯಾದವ್, ಇಶಾಂತ್, ಶಮಿ, ಭುವನೇಶ್ವರ್ ಅವರಂತಹ ಬೌಲರ್‌ಗಳು ಮಿಂಚಿದ್ದರು.
ಮಧ್ಯಮವೇಗಿಗಳು ಗಾಯಗೊಳ್ಳುವುದು ಹೆಚ್ಚು ಅದರಲ್ಲೂ ಇಂದಿನ ಕ್ರಿಕೆಟ್ ನಲ್ಲಿ ಆಟಗಾರರು ಬಿಡುವಿಲ್ಲದೇ ಆಡುತ್ತಿದ್ದಾರೆ. ಮೂರೂ ಮಾದರಿಗಳಲ್ಲಿ ದೇಶಿ-ವಿದೇಶಿ ಟೂರ್ನಿ ಇದೆಲ್ಲದರಲ್ಲಿಯೂ ಮಿಂಚುವ ಜೊತೆಗೆ ತಮ್ಮ ದೈಹಿಕ ಮತ್ತು ಮಾನಸಿಕ ಕ್ಷಮತೆಯನ್ನು ಕಾಪಾಡಿಕೊಳ್ಳುವ ಸವಾಲು ಮಧ್ಯಮ ವೇಗಿಗಳಿಗೆ ಇದೆ. ಬ್ಯಾಟ್ಸ್‌ಮನ್ ಗಳಿಗೆ ಸಿಕ್ಕಷ್ಟು ತಾರಾಮೌಲ್ಯ ಬೌಲರ್‌ಗಳಿಗೆ ಸಿಗುವುದು ಕಡಿಮೆ. ಕಪಿಲ್, ಶ್ರೀನಾಥ್, ಜಹೀರ್ ಅವರು ಆ ಸಾಧನೆ ಮಾಡಿದ ಪ್ರಮುಖರು.
ಇದೀಗ ಬುಮ್ರಾ ಅದೇ ಹಾದಿಯಲ್ಲಿದ್ದಾರೆ. ಇಂಗ್ಲೆಂಡ್‌ನ ಜೋಫ್ರಾ ಆರ್ಚರ್, ಆ್ಯಂಡರ್ಸನ್ ಸ್ಟುವರ್ಟ್ ಬ್ರಾಡ್, ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್. ನ್ಯೂಜಿಲ್ಯಾಂಡ್‌ನ ಟ್ರೆಂಟ್ ಬೌಲ್ಟ್, ಟಿಮ್ ಸೌಥಿ, ಪಾಕಿಸ್ಥಾನದ ಮೊಹಮ್ಮದ್ ಆಮಿರ್, ದಕ್ಷಿಣ ಆಫ್ರಿಕಾದ ಕಗಿಸೊ ರಬಾಡ, ಲುಂಗಿ ಗಿಡಿ ಅವರ ಪೈಪೋಟಿಯೂ ಬೂಮ್ರಾಗೆ ಇದೆ. ಸದ್ಯಕ್ಕಂತೂ ಅವರೆಲ್ಲರನ್ನೂ ಹಿಂದಿಕ್ಕಿ ಮುಂದೆ ಸಾಗುತ್ತಿರುವ ಬುಮ್ರಾ ಎಷ್ಟು ಸಮಯದವರೆಗೆ ಉತ್ತುಂಗ ಶಿಖರದಲ್ಲಿ ಮೆರೆಯುತ್ತಾರೆ ಎನ್ನುವ ಕುತೂಹಲ ಅವರ ಅಭಿಮಾನಿ ವಲಯದಲ್ಲಿ ಗರಿಗೆದರಿದೆ.
ನೋಬಾಲ್ ಕಳಂಕಮೀರಿದ ಸಾಧಕ
ಎರಡು ವರ್ಷಗಳ ಹಿಂದೆ ಪಂದ್ಯದ ಮಹತ್ವದ ಘಟ್ಟದಲ್ಲಿ ನೋಬಾಲ್ ಎಸೆತಗಳನ್ನು ಹಾಕಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು ಬೂಮ್ರಾ. ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಅವರ ಈ ನೋಬಾಲ್ ಭಾರತ ತಂಡದ ಗೆಲುವಿಗೂ ಅಡ್ಡಿಯಾಗಿತ್ತು. ಆದರೆ ಸತತ ಪರಿಶ್ರಮ ಮತ್ತು ಛಲದಿಂದ ಆ ದೌರ್ಬಲ್ಯವನ್ನು ಮೀರಿ ನಿಂತರು.
ತಮ್ಮ ಬೌಲಿಂಗ್ ಲೈನಪ್ ನಲ್ಲಿ ತುಸು ಬದಲಾವಣೆ ಮಾಡಿಕೊಂಡ ಅವರು ಮೊದಲಿಗಿಂತಲೂ ಪರಿಣಾಮಕಾರಿ ಬೌಲರ್ ಆಗಿ ರೂಪುಗೊಂಡರು. ಏಕದಿನ ಕ್ರಿಕೆಟ್‌ನಲ್ಲಿ ಅಗ್ರ ಶ್ರೇಯಾಂಕ ಗಳಿಸಿದ್ದಾರೆ. ಇತ್ತೀಚೆಗೆ ಇಂಗ್ಲೆಂಡ್‌ನಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿಯೂ ಬೂಮ್ರಾ ತನ್ನ ಮಿಂಚನ್ನು ಹರಿಸಿದ್ದರು
– ಅಭಿ
ಈ ವಿಭಾಗದಿಂದ ಇನ್ನಷ್ಟು
-
ಕೋಲ್ಕತ: ಐಪಿಎಲ್ ಮೂಲಕ ಅದ್ಭುತ ಪ್ರದರ್ಶನ ನೀಡಿ ಭಾರತ ತಂಡಕ್ಕೆ ಆಯ್ಕೆಯಾದ ರಿಷಭ್ ಪಂತ್ ಇತ್ತೀಚೆಗೆ ಟೀಕೆಗಳಿಂದಲೇ ಸುದ್ದಿಯಾಗುತ್ತಿದ್ದಾರೆ. ಆರಂಭದಲ್ಲಿ ...
-
ಕಾರ್ಕಳ: ನಿಟ್ಟೆ ಸಮೂಹ ಶಿಕ್ಷಣ ಸಂಸ್ಥೆಗಳ ಪ್ರಾಯೋಜಕತ್ವದಲ್ಲಿ, ಕರಾವಳಿ ಕ್ರಿಕೆಟ್ ಅಕಾಡೆಮಿ ವತಿಯಿಂದ ಅಂಡರ್18 ವಿಭಾಗದ ನಿಟ್ಟೆ ಇಂಟರ್ ನ್ಯಾಷನಲ್ ಫ್ರೆಂಡ್ಶಿಪ್...
-
ಹೈದರಾಬಾದ್: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ ಟ್ವೆಂಟಿ ಪಂದ್ಯವನ್ನು ಭಾರತ ಆರು ವಿಕೆಟ್ ಗಳಿಂದ ಭರ್ಜರಿಯಾಗಿ ಗೆದ್ದಿತ್ತು. ವಿರಾಟ್ ಕೊಹ್ಲಿಯ ನಾಯಕನ...
-
ಮುಂಬೈ: ವೆಸ್ಟ್ ಇಂಡೀಸ್ ವಿರುದ್ದದ ಮೊದಲ ಟಿ ಟ್ವೆಂಟಿ ಪಂದ್ಯದಲ್ಲಿ ಭಾರತದ ನಾಯಕ ವಿರಾಟ್ ಕೊಹ್ಲಿ ವಿರೋಚಿತ ಆಟವಾಡಿ ಭಾರತಕ್ಕೆ ಜಯ ತಂದಿತ್ತರು. ವಿಂಡೀಸ್ ನೀಡಿದ...
-
ಮುಂಬಯಿ: ಇತ್ತೀಚೆಗೆ ವಿಶ್ವ ದರ್ಜೆಯ ಕ್ರಿಕೆಟಿಗರು ವಿಪರೀತ ಒತ್ತಡದಿಂದಾಗಿ ಖಿನ್ನತೆಗೆ ಒಳಗಾಗುತ್ತಿರುವುದು ದೊಡ್ಡ ಸುದ್ದಿಯಾಗುತ್ತಿದೆ. ಆಸ್ಟ್ರೇಲಿಯದ...
ಹೊಸ ಸೇರ್ಪಡೆ
-
ಚಿಕ್ಕಮಗಳೂರು: ಮಲೆನಾಡಿನ ಹೇಮಾವತಿ ಲಕ್ಷಾಂತರ ಜನರ ಜೀವನದಿಯಾಗಿದ್ದು, ಮೂಡಿಗೆರೆ ತಾಲೂಕಿನ ಜಾವಳಿಯಲ್ಲಿ ಹುಟ್ಟಿ ಬಣಕಲ್ ಮೂಡಿಗೆರೆಯಿಂದ ಹರಿದು ಹಾಸನ ಜಿಲ್ಲೆಯ...
-
ಹರಪನಹಳ್ಳಿ: ತಾಲೂಕಿನ ಅರಸೀಕೆರೆ ಗ್ರಾಪಂನಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಚುನಾಯಿತ ಸದಸ್ಯರು ರಾಜೀನಾಮೆಗೆ ಮುಂದಾದ ಘಟನೆ ನಡೆದಿದೆ. ಗ್ರಾಪಂ ಅಧ್ಯಕ್ಷೆ...
-
ಮಂಗಳೂರು: ಒಬ್ಬ ಮಹಿಳೆಯನ್ನ ಒಂದು ವಸ್ತುವಿಗೆ ಹೋಲಿಕೆ ಮಾಡಿದ್ದಾರೆ. ಬಿಜೆಪಿಗರ ಮನಸ್ಥಿತಿ ನೋಡಿ, ಹೇಳಿದ್ರೆ ಮಹಿಳೆಯರು, ಮಾತೆಯರು ಅಂತ ಮಾತನಾಡ್ತಾರೆ. ಒಬ್ಬ...
-
ಲಕ್ನೋ: ಸಫ್ಜರ್ ಜಂಗ್ ಆಸ್ಪತ್ರೆಯಲ್ಲಿ ಸುಟ್ಟ ಗಾಯಗಳಿಂದ ಜೀವನ್ಮರಣ ಹೋರಾಟ ನಡೆಸಿ ಕೊನೆಯುಸಿರೆಳೆದಿದ್ದ ಉನ್ನಾವ್ ಅತ್ಯಾಚಾರ ಸಂತ್ರಸ್ತೆ ಮನೆಗೆ ಶನಿವಾರ ಸಂಜೆ...
-
ಮುಂಬಯಿ, ಡಿ. 6: ಮನುಷ್ಯನಿಗೆ ಜೀವನದಲ್ಲಿ ಬಡತನ, ಶ್ರೀಮಂತಿಕೆ ಶಾಶ್ವತವಲ್ಲ. ಸತ್ಯ, ಧರ್ಮದಲ್ಲಿ ನಡೆದರೆ ಆತನ ದಾರಿ ಸುಗಮವಾಗಿ ಸಾಗುತ್ತದೆ ಎಂದು ಮುಂಬಯಿ ಅಗ್ಯಾನಿಕ್...