ಟಿ-20 ರ್‍ಯಾಂಕಿಂಗ್‌ಇಮಾದ್‌ ವಾಸಿಮ್‌ ನಂ.1 ಬೌಲರ್‌

Team Udayavani, Jun 28, 2017, 3:35 AM IST

ದುಬಾೖ: ಪಾಕಿಸ್ಥಾನದ ಎಡಗೈ ಸ್ಪಿನ್ನರ್‌ ಇಮಾದ್‌ ವಾಸಿಮ್‌ ಟಿ-20 ಕ್ರಿಕೆಟಿನ ನೂತನ ನಂಬರ್‌ ಬೌಲರ್‌ ಆಗಿ ಮೂಡಿಬಂದಿದ್ದಾರೆ. ಅಗ್ರಸ್ಥಾನದಲ್ಲಿದ್ದ ದಕ್ಷಿಣ ಆಫ್ರಿಕಾದ ಇಮ್ರಾನ್‌ ತಾಹಿರ್‌ ಮೂರಕ್ಕೆ ಇಳಿದಿದ್ದಾರೆ. ಇದರಿಂದ ಭಾರತದ ಜಸ್‌ಪ್ರೀತ್‌ ಬುಮ್ರಾ ದ್ವಿತೀಯ ಸ್ಥಾನಕ್ಕೆ ಏರುವಂತಾಯಿತು.

ಇಮ್ರಾನ್‌ ತಾಹಿರ್‌ ಕಳೆದ ಜನವರಿಯಿಂದಲೂ ನಂಬರ್‌ ವನ್‌ ಟಿ-20 ಬೌಲರ್‌ ಆಗಿದ್ದರು. ಆದರೆ ಇಂಗ್ಲೆಂಡ್‌ ವಿರುದ್ಧದ ಸರಣಿಯಲ್ಲಿ ವೈಫ‌ಲ್ಯ ಅನುಭವಿಸುವುದರೊಂದಿಗೆ ಅಗ್ರಸ್ಥಾನದಿಂದ ಜಾರಬೇಕಾಯಿತು. ಈ ಸರಣಿಯ ವೇಳೆ ಎಸೆಯಲಾದ ಕೊನೆಯ 7 ಓವರ್‌ಗಳಲ್ಲಿ ತಾಹಿರ್‌ 75 ರನ್‌ ಬಿಟ್ಟುಕೊಟ್ಟು ಬಹಳ ದುಬಾರಿಯಾಗಿದ್ದರು. ಉರುಳಿಸಿದ್ದು ಒಂದೇ ವಿಕೆಟ್‌.

ಇಮಾದ್‌ ವಾಸಿಮ್‌ ಟಿ-20 ಕ್ರಿಕೆಟಿನ ಟಾಪ್‌ ಬೌಲರ್‌ ಎನಿಸಿಕೊಳ್ಳುತ್ತಿರುವುದು ಇದೇ ಮೊದಲು. ಬುಮ್ರಾ ಹೊರತುಪಡಿಸಿ ಟಾಪ್‌-10 ಯಾದಿಯಲ್ಲಿರುವ ಭಾರತದ ಮತ್ತೂಬ್ಬ ಬೌಲರ್‌ ಆರ್‌. ಅಶ್ವಿ‌ನ್‌. ದಕ್ಷಿಣ ಆಫ್ರಿಕಾದ ಕ್ರಿಸ್‌ ಮಾರಿಸ್‌ 32 ಸ್ಥಾನಗಳ ಭರ್ಜರಿ ನೆಗೆತ ಕಂಡಿದ್ದು, 29ನೇ ಸ್ಥಾನಕ್ಕೆ ಬಂದಿದ್ದಾರೆ. ಇಂಗ್ಲೆಂಡಿನ ಲಿಯಮ್‌ ಪ್ಲಂಕೆಟ್‌ ಕೂಡ ಭಾರೀ ಪ್ರಗತಿ ಸಾಧಿಸಿದ್ದು, 26 ಸ್ಥಾನಗಳ ಏರಿಕೆಯೊಂದಿಗೆ 38ನೇ ಸ್ಥಾನ ತಲುಪಿದ್ದಾರೆ.

ಬ್ಯಾಟಿಂಗ್‌ ರ್‍ಯಾಂಕಿಂಗ್‌ನಲ್ಲಿ ವಿರಾಟ್‌ ಕೊಹ್ಲಿ ನಂಬರ್‌ ವನ್‌ ಸ್ಥಾನದಲ್ಲಿ ಮುಂದುವರಿದಿದ್ದು, ಆರನ್‌ ಫಿಂಚ್‌ ಹಾಗೂ ಕೇನ್‌ ವಿಲಿಯಮ್ಸನ್‌ ಅನಂತರದ ಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಗೆದ್ದ ಇಂಗ್ಲೆಂಡ್‌ ಟೀಮ್‌ ರ್‍ಯಾಂಕಿಂಗ್‌ ಯಾದಿಯ ದ್ವಿತೀಯ ಸ್ಥಾನದಲ್ಲಿ ಒಂಟಿಯಾಗಿ ಕಾಣಿಸಿಕೊಂಡಿತು. 3 ಪಂದ್ಯಗಳ ಈ ಸರಣಿಗೂ ಮುನ್ನ ಇಂಗ್ಲೆಂಡ್‌ ಪಾಕಿಸ್ಥಾನದೊಂದಿಗೆ ಜಂಟಿ ದ್ವಿತೀಯ ಸ್ಥಾನದಲ್ಲಿತ್ತು. ನ್ಯೂಜಿಲ್ಯಾಂಡ್‌ ಅಗ್ರಸ್ಥಾನ ಉಳಿಸಿಕೊಂಡಿದೆ.

ಟಾಪ್‌-10 ಟಿ-20 ಬೌಲರ್: 1. ಇಮಾದ್‌ ವಾಸಿಮ್‌ (780), 2. ಜಸ್‌ಪ್ರೀತ್‌ ಬುಮ್ರಾ (764), 3. ಇಮ್ರಾನ್‌ ತಾಹಿರ್‌ (744), 4. ರಶೀದ್‌ ಖಾನ್‌ (717), 4. ಸಾಮ್ಯುಯೆಲ್‌ ಬದ್ರಿ (717), 6. ಮುಸ್ತಫಿಜುರ್‌ ರೆಹಮಾನ್‌ (695), 7. ಜೇಮ್ಸ್‌ ಫಾಕ್ನರ್‌ (688), 8. ಸುನೀಲ್‌ ನಾರಾಯಣ್‌ (652), 9. ಶಕಿಬ್‌ ಅಲ್‌ ಹಸನ್‌ (648), 10. ಆರ್‌. ಅಶ್ವಿ‌ನ್‌ (644).

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ