ಯೋಗಾಸನಗಳಿಗೆ “ಕ್ರೀಡಾ ಯೋಗ’: ಆಯುಷ್‌ ಪ್ರಸ್ತಾವ

ಒಲಿಂಪಿಕ್‌ ಗೇಮ್ಸ್‌ ಗೆ ಸೇರ್ಪಡೆ ಪ್ರಯತ್ನ

Team Udayavani, Jul 25, 2019, 5:06 AM IST

ಹೊಸದಿಲ್ಲಿ: ಆಯುಷ್‌ ಸಚಿವಾಲಯವು ಯೋಗಾಸನಗಳಿಗೆ ಕ್ರೀಡೆಯ ಸ್ಥಾನಮಾನ ನೀಡುವ ಕುರಿತು ಪ್ರಸ್ತಾವ ಸಲ್ಲಿಸಲು ಸಿದ್ಧತೆ ನಡೆಸುತ್ತಿದೆ. ಒಲಿಂಪಿಕ್‌ ಗೇಮ್ಸ್‌ಗೆ ಸೇರ್ಪಡೆ ಮತ್ತು ಯೋಗಕ್ಕೆ ಇನ್ನಷ್ಟು ಉತ್ತೇಜನ ನೀಡುವ ದೃಷ್ಟಿಯಿಂದ ಕ್ರೀಡಾ ಸ್ಥಾನಮಾನ ದೊರಕಿಸಿಕೊಡುವುದು ಇದರ ಹಿಂದಿನ ಪ್ರಮುಖ ಉದ್ದೇಶವಾಗಿದೆ.

ಯೋಗಾಸನಗಳನ್ನು ಕ್ರೀಡೆಯೆಂದು ಪರಿಗಣಿಸಬೇಕೆಂದು ಯೋಗ ಮತ್ತು ನ್ಯಾಚುರೋಪತಿಯ ಉತ್ತೇಜನ ಮತ್ತು ಅಭಿವೃದ್ಧಿಯ ರಾಷ್ಟ್ರೀಯ ಮಂಡಳಿಯು ಶಿಫಾರಸು ಮಾಡಿದೆ. ಈ ಮೂಲಕ ಹೆಚ್ಚೆಚ್ಚು ಯುವಕರು ಯೋಗದ ಕಡೆ ಸಾಗಲು ಪ್ರಯೋಜನವಾಗಲಿದೆ ಎಂದು ಸರಕಾರದ ಅಧಿಕಾರಿ ಹೇಳಿದ್ದಾರೆ.

ಕ್ರೀಡೆಯಾಗಿ ಯೋಗಾಸನಗಳನ್ನು ಉತ್ತೇಜಿಸಿದರೆ ಯುವಕರು ಇದರಿಂದ ಆಕರ್ಷಿತರಾಗುವ ಸಾಧ್ಯತೆಯಿದೆ. ಹಾಗಾಗಿ 2036 ಅಥವಾ 2040ರ ಒಲಿಂಪಿಕ್ಸ್‌ ವೇಳೆಗೆ ಯೋಗ ಒಂದು ಸ್ಪರ್ಧೆಯಾಗಿ ಗೇಮ್ಸ್‌ನಲ್ಲಿ ಕಾಣಿಸಿಕೊಳ್ಳಬಹುದು ಎಂದು ಅವರು ತಿಳಿಸಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ