ಶ್ರೀಲಂಕಾ ವಿಶ್ವಕಪ್ ತಂಡದಲ್ಲಿ ನಾಲ್ವರು ಸ್ಪಿನ್ನರ್
Team Udayavani, Sep 13, 2021, 6:20 AM IST
ಕೊಲಂಬೊ: ಟಿ20 ವಿಶ್ವಕಪ್ಗಾಗಿ ಶ್ರೀಲಂಕಾ ತನ್ನ ತಂಡದಲ್ಲಿ ನಾಲ್ವರು ಸ್ಪಿನ್ನರ್ಗಳನ್ನು ಸೇರಿಸಿಕೊಂಡಿದೆ.
21 ವರ್ಷದ ಮಿಸ್ಟರಿ ಸ್ಪಿನ್ನರ್ ಮಹೀಶ ತೀಕ್ಷಣ ಕೂಡ ಇವರಲ್ಲೊಬ್ಬರು. ಇವರು ಕಳೆದ ವಾರವಷ್ಟೇ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಕ್ರಿಕೆಟಿಗೆ ಪದಾರ್ಪಣೆ ಮಾಡಿದ್ದರು. ಪ್ರವೀಣ ಜಯವಿಕ್ರಮ ಹೊಸ ಮುಖ. ಉಳಿದಿಬ್ಬರು ಸ್ಪಿನ್ನರ್ಗಳೆಂದರೆ ವನಿಂದು ಹಸರಂಗ ಮತ್ತು ಅಖೀಲ ಧನಂಜಯ.
ಹಿರಿಯ ಸೀಮರ್ ನುವಾನ್ ಪ್ರದೀಪ್ ತಂಡಕ್ಕೆ ಮರಳಿದ್ದಾರೆ. ಆದರೆ ಗಾಯಾಳಾದ ಕಾರಣ ಕೀಪರ್ ಕುಸಲ್ ಪೆರೆರ ಅವರನ್ನು ಆಯ್ಕೆಗೆ ಪರಿಗಣಿಸಿಲ್ಲ. ಮಿನೋದ್ ಭನುಕ ಕೀಪಿಂಗ್ ನಡೆಸಲಿದ್ದಾರೆ.
ಶ್ರೀಲಂಕಾ ತಂಡ: ದಸುನ್ ಶಣಕ (ನಾಯಕ), ಧನಂಜಯ ಡಿ ಸಿಲ್ವ, ಕುಸಲ್ ಪೆರೆರ, ದಿನೇಶ್ ಚಂಡಿಮಾಲ್, ಆವಿಷ್ಕ ಫೆರ್ನಾಂಡೊ, ಭನುಕ ರಾಜಪಕ್ಷ, ಚರಿತ ಅಸಲಂಕ, ವನಿಂದು ಹಸರಂಗ, ಕಮಿಂದು ಮೆಂಡಿಸ್, ಚಮಿಕ ಕರುಣರತ್ನೆ, ನುವಾನ್ ಪ್ರದೀಪ್, ದುಷ್ಮಂತ ಚಮೀರ, ಪ್ರವೀಣ್ ಜಯವಿಕ್ರಮ, ಲಹಿರು ಮದುಶಂಕ, ಮಹೀಶ ತೀಕ್ಷಣ.