2019ರ ಐಸಿಸಿ ವಿಶ್ವಕಪ್ಗೆ ಶ್ರೀಲಂಕಾ ತೇರ್ಗಡೆ
Team Udayavani, Sep 21, 2017, 10:30 AM IST
ಮುಂಬಯಿ: ಪ್ರವಾಸಿ ವೆಸ್ಟ್ ಇಂಡೀಸ್ ತಂಡ ಮಂಗಳವಾರ ನಡೆದ ಇಂಗ್ಲೆಂಡ್ ತಂಡದೆದುರಿನ ಮೊದಲ ಏಕದಿನ ಪಂದ್ಯದಲ್ಲಿ ಸೋಲುವುದರೊಂದಿಗೆ ಶ್ರೀಲಂಕಾ ತಂಡವು 2019ರ ಐಸಿಸಿ ವಿಶ್ವಕಪ್ನಲ್ಲಿ ಆಡಲು ಅರ್ಹತೆ ಗಳಿಸಿಕೊಂಡಿದೆ ಎಂದು ಇಂಟರ್ನ್ಯಾಶ ನಲ್ ಕ್ರಿಕೆಟ್ ಕೌನ್ಸಿಲ್ ಪ್ರಕಟನೆ ತಿಳಿಸಿದೆ.
ಐಸಿಸಿ ವಿಶ್ವಕಪ್ಗೆ ನೇರ ಅರ್ಹತೆ ಗಳಿಸಲು 2017ರ ಸೆಪ್ಟಂಬರ್ 30ರ ಕೊನೆ ದಿನವಾಗಿದ್ದು ಕೇವಲ 78 ಅಂಕ ಹೊಂದಿ ರುವ ವೆಸ್ಟ್ಇಂಡೀಸ್ ತಂಡವು 86 ಅಂಕ ಹೊಂದಿರುವ ಶ್ರೀಲಂಕಾವನ್ನು ಹಿಂದಿಕ್ಕಲು ಸಾಧ್ಯವಾಗುವುದಿಲ್ಲ, ಹಾಗಾಗಿ ಇಂಗ್ಲೆಂಡ್ ವಿರುದ್ಧದ ಇನ್ನುಳಿದ ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್ ಯಾವುದೇ ರೀತಿಯ ನಿರ್ವಹಣೆ ನೀಡಿದರೂ ವೆಸ್ಟ್ಇಂಡೀಸ್ 2018ರಂದು ನಡೆ ಯುವ 10 ತಂಡಗಳ ಐಸಿಸಿ ವಿಶ್ವಕಪ್ ಅರ್ಹತಾ ಕೂಟದಲ್ಲಿ ಆಡಿ ಮುನ್ನಡೆಯಬೇಕಾಗಿದೆ.
ವೆಸ್ಟ್ಇಂಡೀಸ್ ಹೊರಬಿದ್ದ ಕಾರಣ 1996ರ ವಿಶ್ವ ಚಾಂಪಿಯನ್ ಶ್ರೀಲಂಕಾ ತಂಡವು ಎಂಟನೇ ತಂಡವಾಗಿ ನೇರವಾಗಿ ವಿಶ್ವಕಪ್ಗೆ ಅರ್ಹತೆ ಗಳಿಸಿದೆ. ಆಸ್ಟ್ರೇಲಿಯ, ಬಾಂಗ್ಲಾದೇಶ, ಇಂಗ್ಲೆಂಡ್, ಭಾರತ, ನ್ಯೂಜಿಲ್ಯಾಂಡ್, ಪಾಕಿಸ್ಥಾನ ಮತ್ತು ದಕ್ಷಿಣ ಆಫ್ರಿಕಾ ನೇರ ಅರ್ಹತೆ ಗಳಿಸಿದ ಇನ್ನುಳಿದ ತಂಡಗಳಾಗಿವೆ.