ಪಾಕ್‌-ಲಂಕಾ ಪಂದ್ಯಕ್ಕೆ ಮಳೆ ಅಡ್ಡಿ

Team Udayavani, Dec 12, 2019, 10:46 PM IST

ರಾವಲ್ಪಿಂಡಿ: ಪಾಕಿಸ್ಥಾನ-ಲಂಕಾ ನಡುವಿನ ಟೆಸ್ಟ್‌ ಪಂದ್ಯದ ದ್ವಿತೀಯ ದಿನದಾಟಕ್ಕೆ ಮಳೆಯಿಂದ ತೀವ್ರ ಅಡಚಣೆಯಾಗಿದೆ. ಗುರುವಾರ ಕೇವಲ 18 ಓವರ್‌ಗಳಷ್ಟು ಆಟ ಮಾತ್ರ ಸಾಗಿದ್ದು, ಶ್ರೀಲಂಕಾ 6 ವಿಕೆಟಿಗೆ 263 ರನ್‌ ಮಾಡಿದೆ.ಮೊದಲ ದಿನವೂ ಪ್ರತಿಕೂಲ ಹವಾಮಾನದಿಂದ ಪಂದ್ಯ ಬೇಗನೇ ಕೊನೆಗೊಂಡಿತ್ತು. ಆಗ ಲಂಕಾ ಸ್ಕೋರ್‌ 5 ವಿಕೆಟಿಗೆ 255 ರನ್‌ ಆಗಿತ್ತು.

ದ್ವಿತೀಯ ದಿನದ ಮೊದಲ ಅವಧಿಯಲ್ಲಿ 7.5 ಓವರ್‌ಗಳ ಆಟ ಸಾಗಿದ ಬಳಿಕ ಭಾರೀ ಮಳೆ ಸುರಿಯಿತು. ಸುಮಾರು ಎರಡು ಮುಕ್ಕಾಲು ಗಂಟೆ ಬಳಿಕ ಪಂದ್ಯ ಆರಂಭವಾಯಿತಾದರೂ ಕೇವಲ 10 ಓವರ್‌ಗಳ ಆಟವಷ್ಟೇ ಸಾಧ್ಯವಾಯಿತು. ಈ ಅವಧಿಯಲ್ಲಿ ನಿರೋಷನ್‌ ಡಿಕ್ವೆಲ್ಲ (33) ವಿಕೆಟ್‌ ಉರುಳಿತು. 3.30ರ ವೇಳೆ ದಿನದಾಟವನ್ನು ಕೊನೆಗೊಳಿಸಲಾಯಿತು. ಆಗ ಧನಂಜಯ ಡಿ ಸಿಲ್ವ 72 ಮತ್ತು ದಿಲುÅವಾನ್‌ ಪೆರೆರ 2 ರನ್‌ ಮಾಡಿ ಆಡುತ್ತಿದ್ದರು.

ದಶಕದ ಬಳಿಕ ಪಾಕಿಸ್ಥಾನದಲ್ಲಿ ನಡೆಯುತ್ತಿರುವ ಟೆಸ್ಟ್‌ ಪಂದ್ಯ ಇದಾಗಿದ್ದರೂ ವೀಕ್ಷಕರ ಸಂಖ್ಯೆ ವಿರಳವಿತ್ತು.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ