ಗಾಲೆ ಟೆಸ್ಟ್ : ಗೆಲುವಿನತ್ತ ಇಂಗ್ಲೆಂಡ್
Team Udayavani, Jan 18, 2021, 6:20 AM IST
ಗಾಲೆ: ಪ್ರವಾಸಿ ಇಂಗ್ಲೆಂಡ್ ತಂಡ ಗಾಲೆ ಟೆಸ್ಟ್ನಲ್ಲಿ ಗೆಲುವಿನತ್ತ ಸಾಗಿದೆ. ಶ್ರೀಲಂಕಾ ದ್ವಿತೀಯ ಇನ್ನಿಂಗ್ಸ್ನಲ್ಲಿ ದಿಟ್ಟ ಹೋರಾಟ ನೀಡಿದರೂ ಸೋಲಿನಿಂದ ಪಾರಾಗುವುದು ಅಸಾಧ್ಯವಾಗಿದೆ.
ಗೆಲುವಿಗೆ 74 ರನ್ ಗುರಿ ಪಡೆದ ಇಂಗ್ಲೆಂಡ್ 4ನೇ ದಿನದಾಟದ ಅಂತ್ಯಕ್ಕೆ 3 ವಿಕೆಟಿಗೆ 38 ರನ್ ಗಳಿಸಿದೆ. ಇನ್ನು 36 ರನ್ನಷ್ಟೇ ಬೇಕಿದೆ. ಜಾನಿ ಬೇರ್ಸ್ಟೊ 11, ಡೇನಿಯಲ್ ಲಾರೆನ್ಸ್ 7 ರನ್ ಮಾಡಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಮೊದಲ ಇನ್ನಿಂಗ್ಸ್ನಲ್ಲಿ ದ್ವಿಶತಕ ಬಾರಿಸಿ ಮೆರೆದಿದ್ದ ನಾಯಕ ಜೋ ರೂಟ್ ಎರಡನೇ ಸರದಿಯಲ್ಲಿ ಒಂದೇ ರನ್ ಗಳಿಸಿ ರನೌಟಾದರು.
286 ರನ್ ಹಿನ್ನಡೆಗೆ ಸಿಲುಕಿದ ಶ್ರೀಲಂಕಾ ದ್ವಿತೀಯ ಇನ್ನಿಂಗ್ಸ್ನಲ್ಲಿ 359 ರನ್ ಗಳಿಸಿತು. ಆರಂಭಕಾರ ಲಹಿರು ತಿರಿಮನ್ನೆ 111 ರನ್ ಹೊಡೆದರು. 71 ರನ್ ಮಾಡಿದ ಏಂಜೆಲೊ ಮ್ಯಾಥ್ಯೂಸ್ ಮತ್ತೋರ್ವ ಪ್ರಮುಖ ಸ್ಕೋರರ್.
ಇಂಗ್ಲೆಂಡಿನ ಎಡಗೈ ಸ್ಪಿನ್ನರ್ ಜಾಕ್ ಲೀಚ್ 122 ರನ್ನಿತ್ತು 5 ವಿಕೆಟ್ ಉರುಳಿಸಿದರು. ಮತ್ತೋರ್ವ ಸ್ಪಿನ್ನರ್ ಡಾಮ್ ಬೆಸ್ 3 ವಿಕೆಟ್ ಕಿತ್ತರು.
ಸಂಕ್ಷಿಪ್ತ ಸ್ಕೋರ್: ಶ್ರೀಲಂಕಾ-135 ಮತ್ತು 359 (ತಿರಿಮನ್ನೆ 111, ಮ್ಯಾಥ್ಯೂಸ್ 71, ಕುಸಲ್ ಪೆರೆರ 62, ಲೀಚ್ 122ಕ್ಕೆ 5, ಬೆಸ್ 100ಕ್ಕೆ 3, ಸ್ಯಾಮ್ ಕರನ್ 37ಕ್ಕೆ 2). ಇಂಗ್ಲೆಂಡ್-421 ಮತ್ತು 3 ವಿಕೆಟಿಗೆ 38.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು
Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ
ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ