ಹಾಂಕಾಂಗ್‌ ಓಪನ್‌ ಬ್ಯಾಡ್ಮಿಂಟನ್‌ ಸೆಮಿಯಲ್ಲಿ ಎಡವಿದ ಶ್ರೀಕಾಂತ್‌

Team Udayavani, Nov 16, 2019, 11:54 PM IST

ಹಾಂಕಾಂಗ್‌: ಹಾಂಕಾಂಗ್‌ ಓಪನ್‌ ಬ್ಯಾಡ್ಮಿಂಟನ್‌
ಪಂದ್ಯಾವಳಿಯ ಪುರುಷರ ಸಿಂಗಲ್ಸ್‌ ಸೆಮಿಫೈನಲ್‌ನಲ್ಲಿ ಕಿಡಂಬಿ ಶ್ರೀಕಾಂತ್‌ ಸೋಲನುಭವಿಸಿದ್ದಾರೆ. ಇದರೊಂದಿಗೆ 400,000 ಡಾಲರ್‌ ಬಹುಮಾನದ ಈ ಕೂಟದಲ್ಲಿ ಭಾರತೀಯರ ಹೋರಾಟ ಕೊನೆಗೊಂಡಿದೆ.

ಶನಿವಾರ ನಡೆದ ಮುಖಾಮುಖೀಯಲ್ಲಿ ಸ್ಥಳೀಯ ನೆಚ್ಚಿನ ಆಟಗಾರ, ಮಾಜಿ ನಂ.1 ಶಟ್ಲರ್‌ ಲೀ ಚುಕ್‌ ಯಿಯು ವಿರುದ್ಧ ಶ್ರೀಕಾಂತ್‌ 9-21, 23-25 ಅಂತರದಿಂದ ಎಡವಿದರು. ಮೊದಲ ಗೇಮ್‌ನಲ್ಲಿ ತೀರಾ ಕಳಪೆ ಆಟವಾಡಿದರೂ ದ್ವಿತೀಯ ಗೇಮ್‌ನಲ್ಲಿ ಶ್ರೀಕಾಂತ್‌ ದಿಟ್ಟ ಹೋರಾಟ ಪ್ರದರ್ಶಿಸಿ ಗಮನ ಸೆಳೆದರು. 42 ನಿಮಿಷಗಳ ತನಕ ಇವರ ಸ್ಪರ್ಧೆ ಜಾರಿಯಲ್ಲಿತ್ತು.

ಇದು “ಇಂಡಿಯಾ ಓಪನ್‌ 500′ ಪಂದ್ಯಾವಳಿ ಬಳಿಕ ಶ್ರೀಕಾಂತ್‌ ಆಡಿದ ಮೊದಲ ಸೆಮಿಫೈನಲ್‌ ಪಂದ್ಯವಾಗಿತ್ತು. ಅಲ್ಲಿ ಅವರು ರನ್ನರ್‌ ಅಪ್‌ ಆಗಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ