ವಿಶ್ವಕಪ್ ಗೆಲುವಿಗೆ 9 ವರ್ಷ: 2011ರ ವಿಶ್ವಕಪ್ ಫೈನಲ್ ಸಂಪೂರ್ಣ ನೋಡುವ ಅವಕಾಶ
Team Udayavani, Apr 2, 2020, 1:10 PM IST
ಮುಂಬೈ: ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟೀಂ ಇಂಡಿಯಾ ಏಕದಿನ ವಿಶ್ವಕಪ್ ಗೆದ್ದು ಇಂದಿಗೆ ಒಂಬತ್ತು ವರ್ಷ. 2011ರಲ್ಲಿ ವಾಂಖೇಡೆ ಅಂಗಳದಲ್ಲಿ ಭಾರತ ಕಪ್ ಗೆದ್ದು ಮೆರೆದಾಡಿದ ಕ್ಷಣವನ್ನು ಮತ್ತೆ ನೋಡುವ ಅವಕಾಶ ಈಗ ಸ್ಟಾರ್ ಸ್ಪೋರ್ಟ್ ನೀಡುತ್ತಿದೆ.
ಹೌದು 2011ರ ಫೈನಲ್ ಪಂದ್ಯವನ್ನು ಸಂಪೂರ್ಣವಾಗಿ ಸ್ಟಾರ್ ಸ್ಪೋರ್ಟ್ ಮರುಪ್ರಸಾರ ಮಾಡುತ್ತಿದೆ. ಇಂದು ವಿಶ್ವಕಪ್ ಗೆಲುವಿನ ದಿನವಾದ ಕಾರಣ ಅಭಿಮಾನಿಗಳ ಖುಷಿಯನ್ನು ಹೆಚ್ಚಿಸಲು ಸ್ಟಾರ್ ಸ್ಪೋರ್ಟ್ಸ್ ಈ ನಿರ್ಧಾರ ಕೈಗೊಂಡಿದೆ.
ಇಂದು ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 9.30ರವರೆಗೆ ಈ ಪಂದ್ಯದ ಸಂಪೂರ್ಣ ಮರುಪ್ರಸಾರ ಮಾಡುತ್ತಿದೆ. ದಶಕದ ಪಂದ್ಯವನ್ನು ನೋಡಲು ಕೋಟ್ಯಾಂತರ ಕ್ರಿಡಾಭಿಮಾನಿಗಳು ಕಾತರಿಸುತ್ತಿದ್ದಾರೆ.
2011ರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಲಂಕಾ ತಂಡಗಳು ಸೆಣಸಾಡಿದ್ದವು. ಗೌತಮ್ ಗಂಭಿರ್, ಮಹೇಂದ್ರ ಸಿಂಗ್ ಧೋನಿ ಬ್ಯಾಟಿಂಗ್ ನೆರವಿನಿಂದ ಭಾರತ ಆರು ವಿಕೆಟ್ ಗಳ ಜಯ ಸಾಧಿಸಿತ್ತು.