ರಾಜ್ಯ ಮಟ್ಟದ ಚೆಸ್ ಚಾಂಪಿಯನ್‌ ಸ್ಪರ್ಧೆ ಫಲಿತಾಂಶ: ಆರ್ಯನ್ ಚೇತನ ಆನಂದ್ ಪ್ರಥಮ..

Team Udayavani, Aug 25, 2019, 7:53 PM IST

ಚಿಕ್ಕಬಳ್ಳಾಪುರ: ನಗರದ ಪ್ರತಿಷ್ಟಿತ ಅಗಲಗುರ್ಕಿಯ ಬಿಜಿಎಸ್ ಆಂಗ್ಲ ಶಾಲೆಯಲ್ಲಿ ನಡೆದ ಎರಡು ದಿನಗಳ ರಾಜ್ಯ ಮಟ್ಟದ 11 ವರ್ಷದೊಳಗಿನ ಬಾಲಕ ಹಾಗೂ ಬಾಲಕಿಯರ ವಿಭಾಗದ ರಾಜ್ಯ ಮಟ್ಟದ ಚೆಸ್ ಚಾಂಪಿಯನ್ ಸ್ಪರ್ಧೆಯ ಫಲಿತಾಂಶ ಭಾನುವಾರ ಪ್ರಕಟಗೊಂಡಿದೆ.

ಬಾಲಕರ ವಿಭಾಗದಲ್ಲಿ ಬೆಂಗಳೂರಿನ ವಿದ್ಯಾಶಿಲ್ಪ ಅಕಾಡೆಮಿಯ ಆರ್ಯನ್ ಚೇತನ ಆನಂದ್, ದ್ವೀತಿಯ ಸ್ಥಾನವನ್ನು ಬೆಂಗಳೂರಿನ ಬೆಮೆಲ್ ನ ಶಶಿಕೈ ಶಾಲೆಯ ವಿದ್ಯಾರ್ಥಿನಿ ಅಪೂರ್ವ ಕಾಂಬ್ಲೆ, ಬಾಲಕಿಯರ ವಿಭಾಗದಲ್ಲಿ ಮಂಗಳೂರಿನ ಲೂಟ್ ಸೆಂಟ್ರಲ್ ಶಾಲೆಯ ಶ್ರೀಯಾನ ಎಸ್.ಮಲ್ಯ ಪ್ರಥಮ, ದ್ವೀತಿಯ ಸ್ಥಾನವನ್ನು ಮಂಡ್ಯದ ಶಾಂತಮ್ ಶಾಲೆಯ ಶಿಪಾಲಿ ಪಡೆದುಕೊಂಡಿದ್ದಾರೆ.

ವಿಜೇತ ವಿದ್ಯಾರ್ಥಿಗಳಿಗೆ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಮಂಗಳಾನಂದನಾಥ ಶ್ರೀ, ಆಡಳಿತಾಧಿಕಾರಿ ಡಾ.ಶಿವರಾಮರೆಡ್ಡಿ ಮತ್ತಿತರರು ನಗದು, ಅಭಿನಂಧನಾ ಪತ್ರ, ಫಲಕ ಸೇರಿ ಬಹುಮಾನ ವಿತರಿಸಿದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ 250 ಕ್ಕೂ ಹೆಚ್ವು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ