ರೈನಾ ನಿರ್ಧಾರ ಅಚ್ಚರಿ ತಂದಿದೆ: ರೋಹಿತ್
Team Udayavani, Aug 17, 2020, 6:15 AM IST
ಮುಂಬಯಿ: ಧೋನಿ ನಿವೃತ್ತಿ ಘೋಷಿಸಿದ ಕೆಲವೇ ನಿಮಿಷಗಳಲ್ಲಿ ಸುರೇಶ್ ರೈನಾ ಕೂಡ ವಿದಾಯದ ನಿರ್ಧಾರ ತೆಗೆದುಕೊಂಡದ್ದು ತನಗೆ ಅಚ್ಚರಿಯಾಗಿ ಕಂಡಿದೆ ಎಂಬುದಾಗಿ ರೋಹಿತ್ ಶರ್ಮ ಹೇಳಿದ್ದಾರೆ.
‘ನಾವಿಬ್ಬರೂ ತಂಡಕ್ಕೆ ಆಗಮಿಸಿದ ದಿನಗಳನ್ನು ಮರೆತಿಲ್ಲ. ನಿಮ್ಮ ನಿವೃತ್ತ ಬದುಕು ಉಜ್ವಲವಾಗಿರಲಿ ಬ್ರದರ್’ ಎಂಬುದಾಗಿ ರೋಹಿತ್ ಶರ್ಮ ಟ್ವೀಟ್ ಮಾಡಿದ್ದಾರೆ.
ಧೋನಿಗೆ ಹೋಲಿಸಿದರೆ ರೈನಾಗೆ ಟೀಮ್ ಇಂಡಿಯಾಕ್ಕೆ ಮರಳುವ ಯಾವ ಮಾರ್ಗವೂ ಇರಲಿಲ್ಲ. 2015ರಲ್ಲಿ ಕೊನೆಯ ಟೆಸ್ಟ್ ಆಡಿದ ರೈನಾ, 2018ರ ಇಂಗ್ಲೆಂಡ್ ಪ್ರವಾಸದ ವೇಳೆ ಕೊನೆಯ ಸಲ ಏಕದಿನ ಹಾಗೂ ಟಿ20 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಹೀಗಾಗಿ ರೈನಾ ಟೀಮ್ ಇಂಡಿಯಾ ಪಾಲಿಗೆ ಅನಿವಾರ್ಯವೇನೂ ಆಗಿರಲಿಲ್ಲ. ಅಲ್ಲದೇ ತಂಡದಲ್ಲಿ ಜಾಗವೂ ಇರಲಿಲ್ಲ.
ಹೀಗಾಗಿ ಜೀವದ ಗೆಳೆಯ ಧೋನಿ ನಿವೃತ್ತಿ ಘೋಷಿಸಿದೊಡನೆಯೆ ರೈನಾ ಕೂಡ ಇದೇ ಹಾದಿ ಹಿಡಿದರು. ಇಬ್ಬರೂ ಐಪಿಎಲ್ ಅಭ್ಯಾಸಕ್ಕೆಂದು ಚೆನ್ನೈಗೆ ಆಗಮಿಸಿದ್ದು, ಒಟ್ಟಿಗೆ ಚರ್ಚಿಸಿ ಈ ನಿರ್ಧಾರಕ್ಕೆ ಬಂದಿರುವ ಸಾಧ್ಯತೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು