ಸ್ಟ್ರಾಂಜಾ ಬಾಕ್ಸಿಂಗ್: ಭಾರತದ ಮೂವರು ಫೈನಲಿಗೆ
Team Udayavani, Feb 19, 2019, 12:30 AM IST
ಸೋಫಿಯಾ (ಬಲ್ಗೇರಿಯ): ಮಾಜಿ ವಿಶ್ವ ಜೂನಿಯರ್ ಚಾಂಪಿಯನ್ ನಿಖತ್ ಜರೀನ್, ಮಂಜುರಾಣಿ ಮತ್ತು ಮೀನಾ ಕುಮಾರಿ ದೇವಿ “ಸ್ಟ್ರಾಂಜಾ ಮೆಮೋರಿಯಲ್ ವನಿತಾ ಬಾಕ್ಸಿಂಗ್’ ಕೂಟದಲ್ಲಿ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದ್ದು, ಭಾರತಕ್ಕೆ ಪದಕಗಳನ್ನು ಖಚಿತಗೊಳಿಸಿದ್ದಾರೆ.
ಸೋಮವಾರ ನಡೆದ 51 ಕೆಜಿ ವಿಭಾಗದ ಪಂದ್ಯದಲ್ಲಿ ನಿಖತ್ ಜರೀನ್ ಪೋಲೆಂಡ್ನ ಸ್ಯಾಂಡ್ರ ಡ್ರಾಬಿಕ್ ವಿರುದ್ಧ 3-2 ಅಂತರದಿಂದ ಗೆಲುವು ದಾಖಲಿಸಿದರು. 48 ಕೆಜಿ ವಿಭಾಗದ ಪಂದ್ಯದಲ್ಲಿ ಮಂಜುರಾಣಿ ಸ್ಥಳೀಯ ಬಾಕ್ಸರ್ ಎಮಿ-ಮಾರಿ ಟೊಡೊರೋವಾ ಅವರನ್ನು ಸೋಲಿಸಿದರು. ಕಳೆದ ಆವೃತ್ತಿಯಲ್ಲಿ ಕಂಚಿನ ಪದಕ ಜಯಿಸಿದ್ದ ಮೀನಾ ಕುಮಾರಿ (54 ಕೆಜಿ) ಈ ಬಾರಿ ತನ್ನ ಆಟವನ್ನು ಉತ್ತಮ ಪಡಿಸಿಕೊಂಡಿದ್ದು, ರಶ್ಯದ ಎಕತೆರಿನಾ ಸಿಶೇವಾ ವಿರುದ್ಧ ಜಯಿಸಿ ಫೈನಲ್ಗೆ ಕಾಲಿಟ್ಟಿದ್ದಾರೆ.