ವಿಶ್ವ ಅಥ್ಲೆಟಿಕ್ಸ್‌ಗೆ ಸುಧಾ ಸಿಂಗ್‌ಇನ್ನೂ ಬಗೆಹರಿಯದ ಗೊಂದಲ

Team Udayavani, Jul 31, 2017, 8:11 AM IST

ನವದೆಹಲಿ: ಲಂಡನ್‌ನಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ ಶಿಪ್‌ನಲ್ಲಿ ಭಾರತೀಯ ಅಥ್ಲೀಟ್‌ ಸುಧಾ ಸಿಂಗ್‌ ಭಾಗವಹಿಸುವುದು ಇನ್ನೂ ಖಚಿತವಾಗಿಲ್ಲ. ಬಗೆಹರಿಯದ ಗೊಂದಲದಿಂದ ಸ್ಟೀಪಲ್‌ಚೇಸ್‌ ಸ್ಪರ್ಧಿ ಸುಧಾ ಈಗ ಇಕ್ಕಟ್ಟಿಗೆ ಸಿಲುಕಿದ್ದಾರೆ.

ಹೌದು, 24 ಮಂದಿ ಅಥ್ಲೀಟ್‌ಗಳ ಭಾರತ ತಂಡವನ್ನು ಮೊದಲೇ ಪ್ರಕಟಿಸಲಾಗಿತ್ತು. ಇದ ರಲ್ಲಿ ಸ್ಟೀಪಲ್‌ಚೇಸ್‌ ಸುಧಾ ಸಿಂಗ್‌ ಹೆಸರು ಇರಲಿಲ್ಲ. ಇವರು ವಿಶ್ವ ಚಾಂಪಿಯನ್‌ಶಿಪ್‌ ಅಥ್ಲೆಟಿಕ್ಸ್‌ ಅರ್ಹತಾ ಸಮಯದಲ್ಲಿ ಗುರಿ ತಲುಪಿಲ್ಲ. ಹೀಗಾಗಿ ಅವರಿಗೆ ಸ್ಥಾನ ನೀಡಿಲ್ಲ ಎಂದು
ಭಾರತೀಯ ಅಥ್ಲೆಟಿಕ್ಸ್‌ ಒಕ್ಕೂಟ (ಎಎಫ್ಐ) ಹೇಳಿತ್ತು. ಆದರೆ ಶನಿವಾರ ತಡರಾತ್ರಿ ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್‌ ಒಕ್ಕೂಟದ ಪಟ್ಟಿಯಲ್ಲಿ ದಿಢೀರ್‌ ಎಂದು ಸುಧಾ ಹೆಸರು ಸೇರಿಕೊಳ್ಳಲಾಗಿದೆ. ಆದರೆ ಈ ಬಗ್ಗೆ ಭಾರತೀಯ ಅಥ್ಲೆಟಿಕ್ಸ್‌ ಒಕ್ಕೂಟ ಏನನ್ನೂ ಖಚಿತ ಪಡಿಸಿಲ್ಲ. ಇದು ಗೊಂದಲಕ್ಕೆ ಕಾರಣವಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಸುಧಾ ಸಿಂಗ್‌, ಚಾಂಪಿಯನ್‌ಶಿಪ್‌ಗೆ ತನ್ನ ಹೆಸರು ಇದೆಯೋ? ಇಲ್ಲವೋ? ಅನ್ನುವುದು ಗೊತ್ತಿಲ್ಲ. ಇಲ್ಲಿ ಯವರೆಗೂ ಯಾರೂ ಖಚಿತಪಡಿಸಿಲ್ಲ. ಆದರೆ ತಾನು ಕೂಟದಲ್ಲಿ ಪಾಲ್ಗೊಳ್ಳುವುದನ್ನು ಎದುರು ನೋಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ