Udayavni Special

ಅಜೇಯ ಭಾರತ ಫೈನಲ್‌ಗೆ ಲಗ್ಗೆ


Team Udayavani, Mar 28, 2019, 6:12 AM IST

HOCKEY

ಇಪೋ (ಮಲೇಶ್ಯ): “ಸುಲ್ತಾನ್‌ ಅಜ್ಲಾನ್‌ ಶಾ’ ಹಾಕಿ ಕೂಟದಲ್ಲಿ ಭಾರತ ಅಜೇಯ ಓಟ ಮುಂದುವರಿಸಿ ಫೈನಲ್‌ ಪ್ರವೇಶಿಸಿದೆ. 6ನೇ ಪ್ರಶಸ್ತಿಯ ನಿರೀಕ್ಷೆಯನ್ನು ಹೆಚ್ಚಿಸಿದೆ. ಮಾ. 30ರಂದು ನಡೆಯುವ ಪ್ರಶಸ್ತಿ ಹಣಾಹಣಿಯಲ್ಲಿ ಭಾರತ-ದಕ್ಷಿಣ ಕೊರಿಯಾ ಮುಖಾ ಮುಖೀಯಾಗಲಿವೆ. ಇವೆರಡೂ ಕೂಟದ ಅಜೇಯ ತಂಡಗಳಾಗಿವೆ.

ಬುಧವಾರ ನಡೆದ 4ನೇ ಲೀಗ್‌ ಪಂದ್ಯದಲ್ಲಿ ಭಾರತ ತಂಡ ಕೆನಡಾ ಮೇಲೆ ಸವಾರಿ ಮಾಡಿ 7-3 ಗೋಲುಗಳ ಜಯಭೇರಿ ಮೊಳಗಿಸಿತು.

ಭಾರತ ಪರ ಮನ್‌ದೀಪ್‌ ಸಿಂಗ್‌ ಹ್ಯಾಟಿಕ್‌ ಗೋಲು ಬಾರಿಸಿ ಗೆಲುವಿನ ರೂವಾರಿ ಎನಿಸಿದರು (20ನೇ, 27ನೇ, 29ನೇ ನಿಮಿಷ). ಉಳಿದಂತೆ ವರುಣ್‌ (12ನೇ ನಿಮಿಷ), ಅಮಿತ್‌ ರೋಹಿದಾಸ್‌ (39ನೇ ನಿಮಿಷ), ವಿವೇಕ್‌ ಪ್ರಸಾದ್‌ (55ನೇ ನಿಮಿಷ) ಮತ್ತು ನೀಲಕಂs… ಶರ್ಮ (58ನೇ ನಿಮಿಷ) ಒಂದೊಂದು ಗೋಲು ಹೊಡೆದರು. ಕೆನಡಾ ಪರ ಮಾರ್ಕ್‌ ಪಿಯರ್ಸನ್‌ (35ನೇ ನಿಮಿಷ), ಫಿನ್‌ ಬೂತ್ರಾಯ್ಡ (50ನೇ ನಿಮಿಷ), ಜೇಮ್ಸ್‌ ವ್ಯಾಲೇಸ್‌ (57ನೇ ನಿಮಿಷ) ಅವರಿಂದ ಗೋಲು ದಾಖಲಾಯಿತು.

ಪಂದ್ಯದ ಆರಂಭದಲ್ಲೇ ಭಾರತ ಆಕ್ರಮಣಕಾರಿ ಆಟಕ್ಕಿಳಿಯಿತು. 12ನೇ ನಿಮಿಷದಲ್ಲಿ ವರುಣ್‌ ಕುಮಾರ್‌ ಗೋಲು ಬಾರಿಸಿ ಮುನ್ನಡೆ ಒದಗಿಸಿದರು. ದ್ವಿತೀಯ ಕ್ವಾರ್ಟರ್‌ನಲ್ಲಿ ಅಮೋಘ ಆಟವಾಡಿದ ಸ್ಟ್ರೈಕರ್‌ ಮನ್‌ದೀಪ್‌ 9 ನಿಮಿಷಗಳ ಅಂತರದಲ್ಲಿ 3 ಗೋಲು ಸಿಡಿಸಿದರು. ಈ ಮೂಲಕ 2ನೇ ಕ್ವಾರ್ಟರ್‌ ಅಂತ್ಯಕ್ಕೆ ಭಾರತ 4-0 ಗೋಲುಗಳ ಮುನ್ನಡೆ ಸಾಧಿಸಿತು. 3ನೇ ಕ್ವಾರ್ಟರ್‌ನ 35ನೇ ನಿಮಿಷದಲ್ಲಿ ಮಾರ್ಕ್‌ ಪಿಯರ್ಸನ್‌ ಗೋಲು ಬಾರಿಸಿ ತಂಡದ ಕೆನಾಡಾ ಖಾತೆ ತೆರೆದರು. ಬಳಿಕ ಭಾರತ ಮತ್ತೆ 2 ಗೋಲು ಬಾರಿಸಿ ಕೆನಡಾಗೆ ಆಘಾತವಿಕ್ಕಿತು.

ಕೊನೆಯ ಹಂತದಲ್ಲಿ ಕೆನಡಾ ಎರಡು ಗೋಲು ಬಾರಿಸಿದರೂ ಭಾರತ ಅಷ್ಟೊತ್ತಿಗಾಗಲೇ ಪಂದ್ಯವನ್ನು ತನ್ನತ್ತ ಸೆಳೆದುಕೊಂಡಿತ್ತು. ಈ ಗೆಲುವಿನ ಮೂಲಕ ಲೀಗ್‌ನ ಕೊನೆಯ ಪಂದ್ಯ ಆಡುವ ಮೊದಲೇ ಭಾರತ ಫೈನಲ್‌ ಪ್ರವೇಶಿಸಿದಂತಾಯಿತು. ಹ್ಯಾಟ್ರಿಕ್‌ ಗೋಲು ಬಾರಿಸಿದ ಮನ್‌ದೀಪ್‌ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ದ. ಕೊರಿಯಾ- ಭಾರತ ಮುಖಾಮುಖೀ
ಬುಧವಾರದ ಅಂತ್ಯಕ್ಕೆ ಭಾರತ ಮತ್ತು ದಕ್ಷಿಣ ಕೊರಿಯಾ ತಲಾ 10 ಅಂಕಗಳೊಂದಿಗೆ ಸಮಬಲದಲ್ಲಿದ್ದರೂ ಗೋಲು ಅಂತರದಲ್ಲಿ ಭಾರತವೇ ಮುಂದಿದೆ.

ಶುಕ್ರವಾರ ಲೀಗ್‌ನ ಕೊನೆಯ 3 ಪಂದ್ಯಗಳು ನಡೆಯಲಿವೆ. ಭಾರತದ ಎದುರಾಳಿಯಾಗಿರುವ ಪೋಲೆಂಡ್‌ ಈವರೆಗೆ ನಾಲ್ಕೂ ಪಂದ್ಯಗಳನ್ನು ಸೋತು ಕೂಟದಿಂದ ನಿರ್ಗಮಿಸಿದೆ. ಹೀಗಾಗಿ ಭಾರತಕ್ಕೆ ಇನ್ನೊಂದು ಜಯ ಅಸಾಧ್ಯವೇನಲ್ಲ.

ಟಾಪ್ ನ್ಯೂಸ್

giyuytrewq

ಕನ್ನಡ ರಾಜ್ಯೋತ್ಸವ ; ಪರಭಾಷಿಕರು 100 ಕನ್ನಡ ಪದ ಬಳಸುವಂತೆ ಸುನಿಲ್ ಕುಮಾರ್  ಮನವಿ

ಸರಕಾರಿ ಆಸ್ತಿ ಉಳಿಸದ ಅಧಿಕಾರಿ ವಿರುದ್ದ ಕ್ರಿಮಿನಲ್ ಮೊಕದ್ದಮೆ : ಶಾಸಕ ಎಚ್ಚರಿಕೆ

ಸರಕಾರಿ ಆಸ್ತಿ ಸಂರಕ್ಷಿಸದ ಅಧಿಕಾರಿ ವಿರುದ್ದ ಕ್ರಿಮಿನಲ್ ಮೊಕದ್ದಮೆ : ಶಾಸಕ ಎಚ್ಚರಿಕೆ

‘ಹೇಳುವುದು ಆಚಾರ, ಮಾಡುವುದು ಅನಾಚಾರ’: ಬಿಜೆಪಿ ವಿರುದ್ಧ ಕಿಡಿಕಾರಿದ ಜೆಡಿಎಸ್

‘ಹೇಳುವುದು ಆಚಾರ, ಮಾಡುವುದು ಅನಾಚಾರ’: ಬಿಜೆಪಿ ವಿರುದ್ಧ ಕಿಡಿಕಾರಿದ ಜೆಡಿಎಸ್

ಮಂಗಳೂರಿನ ಕಾನೂನು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಯತ್ನ: ಸಂತ್ರಸ್ತೆ-ವಕೀಲರ ಆಡಿಯೋ ವೈರಲ್

ಮಂಗಳೂರಿನ ಕಾನೂನು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಯತ್ನ: ಸಂತ್ರಸ್ತೆ-ವಕೀಲರ ಆಡಿಯೋ ವೈರಲ್

d-k-shi

ಮೋದಿ ಹೆಬ್ಬೆಟ್ಟ್ ಗಿರಾಕಿ ಎಂದ ಕಾಂಗ್ರೆಸ್ ಟ್ವೀಟ್ ಗೆ ಡಿಕೆ ಶಿವಕುಮಾರ್ ವಿಷಾದ

ಲಖೀಂಪುರ ಖೇರಿ ಘಟನೆ: ಬಿಜೆಪಿ ನಾಯಕ ಸೇರಿ ನಾಲ್ಕು ಮಂದಿಯ ಬಂಧನ

ಲಖೀಂಪುರ ಖೇರಿ ಘಟನೆ: ಬಿಜೆಪಿ ನಾಯಕ ಸೇರಿ ನಾಲ್ಕು ಮಂದಿಯ ಬಂಧನ

gjhgfds

ಓಟಿಟಿಯಲ್ಲಿ ‘ಸಲಗ’ ದರ್ಶನವಿಲ್ಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದ್ವಿತೀಯ ಪ್ರಯತ್ನದಲ್ಲಿ ಕಪ್‌ ಗೆದ್ದ ಪಾಕ್‌

ದ್ವಿತೀಯ ಪ್ರಯತ್ನದಲ್ಲಿ ಕಪ್‌ ಗೆದ್ದ ಪಾಕ್‌

ಸಯ್ಯದ್‌ ಮುಷ್ತಾಕ್‌ ಅಲಿ’ ಟಿ20: ರಹಾನೆ ಮುಂಬಯಿ ನಾಯಕ

ಸಯ್ಯದ್‌ ಮುಷ್ತಾಕ್‌ ಅಲಿ’ ಟಿ20: ರಹಾನೆ ಮುಂಬಯಿ ನಾಯಕ

ಭಾರತದ ಗೆಲುವಿನ “ಅಭ್ಯಾಸ”; ಬ್ಯಾಟಿಂಗ್‌ನಲ್ಲಿ ಮಿಂಚಿದ ಇಶನ್‌, ರಾಹುಲ್‌

ಭಾರತದ ಗೆಲುವಿನ “ಅಭ್ಯಾಸ”; ಬ್ಯಾಟಿಂಗ್‌ನಲ್ಲಿ ಮಿಂಚಿದ ಇಶಾನ್‌, ರಾಹುಲ್‌

ಬಿಎಂಡಬ್ಲ್ಯು ಕಾರು ಖರೀದಿಸಿದ ಕ್ರಿಕೆಟಿಗ ಪೃಥ್ವಿ ಶಾ

ಬಿಎಂಡಬ್ಲ್ಯು ಕಾರು ಖರೀದಿಸಿದ ಕ್ರಿಕೆಟಿಗ ಪೃಥ್ವಿ ಶಾ

ಕ್ಯಾಮರಾನ್‌ ನೂರಿ, ಪೌಲಾ ಬಡೋಸಾ ಚಾಂಪಿಯನ್ಸ್‌

ಕ್ಯಾಮರಾನ್‌ ನೂರಿ, ಪೌಲಾ ಬಡೋಸಾ ಚಾಂಪಿಯನ್ಸ್‌

MUST WATCH

udayavani youtube

ತೆರೆದ ಹೊಂಡದಲ್ಲಿ ಬಿದ್ದು ಸಾಯುತ್ತಿವೆ ಪ್ರಾಣಿಗಳು : ಕಣ್ಣು ಮುಚ್ಚಿ ಕುಳಿತ ನಗರ ಸಭೆ

udayavani youtube

ದುರಸ್ತಿಗೊಂಡು ಎರಡೇ ದಿನಕ್ಕೆ ಹಳೆ ಚಾಳಿಯನ್ನು ಮುಂದುವರಿಸಿದ ವಾಚ್ ಟವರ್

udayavani youtube

ಕೊನೆಗೂ ರಾಜ್ಯದಲ್ಲಿ 1 ರಿಂದ 5ನೇ ತರಗತಿ ಶಾಲೆ ಆರಂಭಕ್ಕೆ ಸರಕಾರದ ಗ್ರೀನ್ ಸಿಗ್ನಲ್

udayavani youtube

ಮಹಿಳೆಯರಿಗೆ ಉದ್ಯೋಗ ಕಲ್ಪಿಸಿದ ಯಶಸ್ವೀ ಮಹಿಳಾ ಉದ್ಯಮಿ

udayavani youtube

ಹಳೆ ದ್ವೇಷ : ICU ವಾರ್ಡ್ ನಲ್ಲೆ ನಡೆಯಿತು ಎರಡು ತಂಡಗಳ ಮಾರಾಮಾರಿ

ಹೊಸ ಸೇರ್ಪಡೆ

giyuytrewq

ಕನ್ನಡ ರಾಜ್ಯೋತ್ಸವ ; ಪರಭಾಷಿಕರು 100 ಕನ್ನಡ ಪದ ಬಳಸುವಂತೆ ಸುನಿಲ್ ಕುಮಾರ್  ಮನವಿ

9

ಗ್ರಾಪಂ ಗ್ರಂಥಾಲಯಕ್ಕೆ ನವರೂಪ

ಸರಕಾರಿ ಆಸ್ತಿ ಉಳಿಸದ ಅಧಿಕಾರಿ ವಿರುದ್ದ ಕ್ರಿಮಿನಲ್ ಮೊಕದ್ದಮೆ : ಶಾಸಕ ಎಚ್ಚರಿಕೆ

ಸರಕಾರಿ ಆಸ್ತಿ ಸಂರಕ್ಷಿಸದ ಅಧಿಕಾರಿ ವಿರುದ್ದ ಕ್ರಿಮಿನಲ್ ಮೊಕದ್ದಮೆ : ಶಾಸಕ ಎಚ್ಚರಿಕೆ

8

ನಾಗಾವಿ ಯಲ್ಲಮ್ಮ ಪಲ್ಲಕ್ಕಿ ಉತ್ಸವಕ್ಕೆ ಸಕಲ ಸಿದ್ದತೆ

7

ಕಬ್ಬಿನ ಬಾಕಿ ಪಾವತಿಗೆ ಒತ್ತಾಯಿಸಿ ಪ್ರತಿಭಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.