ಸೆಮಿಫೈನಲ್ಗೆ ಸುಮಿತ್ ನಾಗಲ್
Team Udayavani, Oct 6, 2019, 6:02 AM IST
ಕ್ಯಾಂಪಿನಾಸ್ (ಬ್ರಝಿಲ್): ಇಲ್ಲಿ ನಡೆಯುತ್ತಿರುವ ಎಟಿಪಿ ಚಾಲೆಂಜರ್ ಪಂದ್ಯಾವಳಿಯಲ್ಲಿ ಭಾರತದ ಭರವಸೆಯ ಟೆನಿಸಿಗ ಸುಮಿತ್ ನಾಗಲ್ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಅವರು ಆರ್ಜೆಂಟೀ ನಾದ 13ನೇ ಶ್ರೇಯಾಂಕಿತ ಆಟಗಾರ ಫ್ರಾನ್ಸಿಸ್ಕೊ ಸೆರುಂಡೊಲೊ ವಿರುದ್ಧ ಭಾರೀ ಹೋರಾಟ ನಡೆಸಿ 7-6 (7-2), 7-5 ಅಂತರದಿಂದ ಗೆದ್ದು ಬಂದರು.
ಸೆಮಿಫೈನಲ್ನಲ್ಲಿ ಸುಮಿತ್ ಆರ್ಜೆಂಟೀನಾದ ಮತ್ತೂಬ್ಬ ಆಟಗಾರ ಜುವಾನ್ ಪಾಬ್ಲೊ ಫಿಕೋವಿಕ್ ವಿರುದ್ಧ ಸೆಣಸಲಿದ್ದಾರೆ.
ವಾರದ ಆರಂಭದಲ್ಲಿ “ಬ್ಯೂನಸ್ ಐರಿಸ್ ಎಟಿಪಿ ಚಾಲೆಂಜರ್ ಟೂರ್’ ಪ್ರಶಸ್ತಿ ಜಯಿಸಿದ್ದ ಸುಮಿತ್ ನಾಗಲ್ಗೆ ಬ್ರಝಿಲ್ ಕೂಟದ ಮೊದಲ ಸುತ್ತಿನಲ್ಲಿ ಬೈ ಲಭಿಸಿತ್ತು. ದ್ವಿತೀಯ ಸುತ್ತಿನ ವೇಳೆ ಪೋರ್ಚುಗಲ್ನ ಎದುರಾಳಿ ಗಸ್ತಾವೊ ಎಲಿಯಾಸ್ ಗಾಯಾಳಾಗಿ ಅರ್ಧದಲ್ಲೇ ಹೊರನಡೆದರು. ಬಳಿಕ ಬ್ರಝಿಲ್ನ ಒರ್ಲಾಂಡೊ ಲುಝ್ ವಿರುದ್ಧ 7-5, 6-3 ಅಂತರದಿಂದ ಗೆದ್ದು ಬಂದರು.