ಭಾರತೀಯ ಫುಟ್ ಬಾಲ್ ತಂಡಕ್ಕೆ ಮರಳಿದ ಸುನೀಲ್ ಚೆಟ್ರಿ
Team Udayavani, May 24, 2022, 10:47 PM IST
ಹೊಸದಿಲ್ಲಿ: ಆರು ತಿಂಗಳ ಸುದೀರ್ಘ ವಿಶ್ರಾಂತಿಯ ಬಳಿಕ ಸುನೀಲ್ ಚೆಟ್ರಿ ಭಾರತೀಯ ಫುಟ್ ಬಾಲ್ ತಂಡಕ್ಕೆ ವಾಪಸಾದರು.
ಜೋರ್ಡನ್ ವಿರುದ್ಧ ಮೇ 28ರಂದು ದೋಹಾದಲ್ಲಿ ನಡೆಯಲಿರುವ ಸೌಹಾರ್ದ ಫುಟ್ ಬಾಲ್ ಪಂದ್ಯಕ್ಕಾಗಿ ಪ್ರಕಟಿಸಲಾದ ತಂಡದಲ್ಲಿ ಚೆಟ್ರಿ ಸ್ಥಾನ ಪಡೆದರು.
37 ವರ್ಷದ ಸುನೀಲ್ ಚೆಟ್ರಿ ಕೊನೆಯ ಸಲ ಭಾರತವನ್ನು ಪ್ರತಿನಿಧಿಸಿದ್ದು ಕಳೆದ ವರ್ಷದ ಅಕ್ಟೋಬರ್ನಲ್ಲಿ. ಅದು ನೇಪಾಲ ವಿರುದ್ಧ ಆಡಲಾದ ಸ್ಯಾಫ್ ಟೂರ್ನಿಯ ಪಂದ್ಯವಾಗಿತ್ತು. ಭಾರತ 3-0 ಗೆಲುವು ಸಾಧಿಸಿತ್ತು. ಅನಂತರ ಗಾಯಾಳಾದ ಚೆಟ್ರಿ ತಂಡದಿಂದ ಬೇರ್ಪಟ್ಟಿದ್ದರು.
ಜೋರ್ಡನ್ ಎದುರಿನ ಪಂದ್ಯದ ಬಳಿಕ ಕೋಲ್ಕತಾಕ್ಕೆ ಆಗಮಿಸಲಿರುವ ಫುಟ್ ಬಾಲ್ ತಂಡ, ಎಎಫ್ಸಿ ಏಷ್ಯನ್ ಕಪ್ ಕ್ವಾಲಿಫೈಯರ್ಗಾಗಿ ತರಬೇತಿ ಆರಂಭಿಸಲಿದೆ.
ಗೋಲ್ಕೀಪರ್: ಗುರುಪ್ರೀತ್ ಸಿಂಗ್ ಸಂಧು, ಲಕ್ಷ್ಮೀಕಾಂತ್ ಕಟ್ಟಿಮನಿ, ಅಮರೀಂದರ್ ಸಿಂಗ್.
ಡಿಫೆಂಡರ್: ರಾಹುಲ್ ಭೆಕೆ, ಆಕಾಶ್ ಮಿಶ್ರಾ, ಹರ್ಮನ್ಜೋತ್ ಸಿಂಗ್, ರೋಷನ್ ಸಿಂಗ್, ಅನ್ವರ್ ಅಲಿ, ಸಂದೇಶ್ ಹಿಂಗಾನ್, ಸುಭಾಶಿಷ್ ಬೋಸ್, ಪ್ರೀತಂ ಕೋಟಲ್.
ಮಿಡ್ಫಿಲ್ಡರ್: ಜೀಕ್ಸನ್ ಸಿಂಗ್, ಅನಿರುದ್ಧ್ ಥಾಪ, ಗ್ಲ್ಯಾನ್ ಮಾರ್ಟಿನ್ಸ್, ಬೃಂಡನ್ ಫೆರ್ನಾಂಡಿಸ್, ರಿತ್ವಿಕ್ ದಾಸ್, ಉದಾಂತ್ ಸಿಂಗ್, ಯಾಸಿರ್ ಮೊಹಮ್ಮದ್, ಸಹಾಲ್ ಅಬ್ದುಲ್ ಸಮದ್, ಸುರೇಶ್ ವಾಂಗ್ಜಾಮ್, ಆಶಿಕ್ ಕುರಿಯನ್, ಲಿಸ್ಟನ್ ಕೊಲಾಕೊ.
ಫಾರ್ವರ್ಡ್ಸ್: ಇಶಾನ್ ಪಂಡಿತ್, ಸುನೀಲ್ ಚೆಟ್ರಿ, ಮಾನ್ವೀರ್ ಸಿಂಗ್.