
ಇಂದು ಮಹಿಳಾ ಕ್ರಿಕೆಟ್ ಕೋಚ್ ಆಯ್ಕೆ
Team Udayavani, Aug 10, 2018, 6:05 AM IST

ನವದೆಹಲಿ: ಭಾರತ ಮಹಿಳಾ ಕ್ರಿಕೆಟ್ ತಂಡದ ಕೋಚ್ ಹುದ್ದೆಗೆ ಬಿಸಿಸಿಐ (ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ)ಮುಂಬೈನಲ್ಲಿ ಶುಕ್ರವಾರ ಸಂದರ್ಶನ ನಡೆಸಲಿದೆ.
ರಾಜ್ಯದ ಕ್ರಿಕೆಟ್ ದಿಗ್ಗಜ ಸುನೀಲ್ ಜೋಶಿ ಸೇರಿದಂತೆ ಒಟ್ಟು 20 ಆಕಾಂಕ್ಷಿಗಳು ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ. ಜೋಶಿ ಜತೆಗೆ ಮಾಜಿ ಕ್ರಿಕೆಟಿಗರಾದ ರಮೇಶ್ ಪೊವಾರ್, ಅಜಯ್ ರಾತ್ರಾ, ವಿಜಯ್ ಯಾದವ್, ಮಾಜಿ ಮಹಿಳಾ ಆಟಗಾರ್ತಿಯರಾದ ಮಮತಾ ಮೆಬಿನ್, ಸುಮನ್ ಶರ್ಮ ಪೈಪೋಟಿಯಲ್ಲಿದ್ದಾರೆ. ವಿದೇಶಿಗರ ಪೈಕಿ ನ್ಯೂಜಿಲೆಂಡ್‌ನ ಮಾಜಿ ಆಟಗಾರ್ತಿ ಮರಿಯಾ ಫಾಹೆ ಹೆಸರಿದೆ. ಮೂಲಗಳ ಪ್ರಕಾರ ಜೋಶಿ ಹಾಗೂ ಪೊವಾರ್ ನಡುವೆ ನೇರ ಸ್ಪರ್ಧೆಯಿದೆ ಎನ್ನಲಾಗಿದೆ. ಎಡಗೈ ಸ್ಪಿನ್ನರ್ ಜೋಶಿ ಒಟ್ಟು 15 ಟೆಸ್ಟ್, 69 ಏಕದಿನ ಕ್ರಿಕೆಟ್‌ನಲ್ಲಿ ಭಾರತ ಪ್ರತಿನಿಧಿಸಿದ್ದರು. ಅಷ್ಟೇ ಅಲ್ಲ 160 ಪ್ರಥಮ ದರ್ಜೆ ಕ್ರಿಕೆಟ್‌ನಲ್ಲೂ ಆಡಿದ್ದಾರೆ. ಪೋವಾರ್ 2 ಟೆಸ್ಟ್, 31 ಏಕದಿನ ಕ್ರಿಕೆಟ್‌ನಲ್ಲಿ ಭಾರತ ಪ್ರತಿನಿಧಿಸಿದ್ದರು. ಬಿಸಿಸಿಐ ಆಡಳಿತಾಧಿಕಾರಿ ಸದಸ್ಯೆ ಡಯಾನ ಎಡುಲ್ಜಿ, ಬಿಸಿಸಿಐ ಕ್ರಿಕೆಟ್ ಅಪರೇಷನ್ ಜಿಎಂ ಆಗಿರುವ ಸಾಬಾ ಕರೀಂ ಮತ್ತು ಹಂಗಾಮಿ ಕಾರ್ಯದರ್ಶಿ ಅಮಿತಾಬ್ ಚೌಧರಿ ಸಂದರ್ಶನ ನಡೆಸಲಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Asia Cup ಶ್ರೀಲಂಕಾದಲ್ಲಿ ಆಡಿ, ಇಲ್ಲವಾದರೆ ಬಿಟ್ಟುಹೋಗಿ: ಪಾಕಿಸ್ಥಾನಕ್ಕೆ BCCI ಚಾಟಿಯೇಟು

WTC Final: ಆಸೀಸ್ ತಂಡ ಈ ಇಬ್ಬರು ಆಟಗಾರರ ಬಗ್ಗೆ ತಲೆಕೆಡೆಸಿಕೊಂಡಿದೆ ಎಂದ ಪಾಂಟಿಂಗ್

IPL Final: ಮೋಹಿತ್ ಜತೆ ಮಾತನಾಡಿದ್ದು ಹಾರ್ದಿಕ್ ಮಾಡಿದ ತಪ್ಪು: ಸೆಹವಾಗ್ ಕಿಡಿ

ICC ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್- ಟೀಮ್ ಇಂಡಿಯಾ ಕಠಿನ ಅಭ್ಯಾಸ

Namibia ತಂಡದೊಂದಿಗೆ ಕರ್ನಾಟಕ ತಂಡದ ಐದು ಪಂದ್ಯಗಳ ಏಕದಿನ ಸರಣಿ
MUST WATCH
ಹೊಸ ಸೇರ್ಪಡೆ

Asia Cup ಶ್ರೀಲಂಕಾದಲ್ಲಿ ಆಡಿ, ಇಲ್ಲವಾದರೆ ಬಿಟ್ಟುಹೋಗಿ: ಪಾಕಿಸ್ಥಾನಕ್ಕೆ BCCI ಚಾಟಿಯೇಟು

ಪಣಜಿ: ಮುಂದಿನ ನಾಲ್ಕು ದಿನ ಗೋವಾದಲ್ಲಿ ಗುಡುಗು ಸಹಿತ ಮಳೆ… ಹವಾಮಾನ ಇಲಾಖೆ ಎಚ್ಚರಿಕೆ

ಹೊಸ ಚಿತ್ರದ ಟೀಸರ್ ನಿರೀಕ್ಷೆಯಲ್ಲಿ ಸುದೀಪ್ ಫ್ಯಾನ್ಸ್

ನರಗುಂದ: ಆಯುರ್ವೇದದಲ್ಲಿದೆ ಪರಿಣಾಮಕಾರಿ ಚಿಕಿತ್ಸೆ

Foxconn ಗೆ ಜುಲೈ 1ರ ವೇಳೆಗೆ ಪೂರ್ತಿ ಭೂಮಿ ಹಸ್ತಾಂತರ: ಎಂ.ಬಿ.ಪಾಟೀಲ್