ಚೇಸಿಂಗ್ ನಲ್ಲಿ ಮುಗ್ಗರಿಸಿದ ಡೆಲ್ಲಿ ; ಸನ್ ರೈಸರ್ಸ್ ಗೆ 15 ರನ್ ಜಯ
ಸ್ಪಿನ್ನರ್ ರಶೀದ್ ಖಾನ್ ಬೌಲಿಂಗ್ ಗೆ ಬೆದರಿದ ಅಯ್ಯರ್ ಪಡೆ ; 4 ಓವರ್ ನಲ್ಲಿ 14 ರನ್ ನೀಡಿ 3 ವಿಕೆಟ್ ಪಡೆದ ರಶೀದ್
Team Udayavani, Sep 29, 2020, 11:23 PM IST
ಅಬುದಾಭಿ: ಸನ್ ರೈಸರ್ಸ್ ಹೈದ್ರಾಬಾದ್ ನೀಡಿದ 163 ರನ್ ಸವಾಲನ್ನು ಬೆನ್ನಟ್ಟುವಲ್ಲಿ ವಿಫಲವಾದ ಡೆಲ್ಲಿ ಕ್ಯಾಪಿಟಲ್ಸ್ 15 ರನ್ ಗಳ ಸೋಲನ್ನು ಕಂಡಿದೆ.
ಧವನ್, ಪಂತ್, ಅಯ್ಯರ್, ಪೃಥ್ವೀ ಶಾ, ಹೈಟ್ಮೇರ್ ರಂತಹ ಸ್ಪೆಷಲಿಸ್ಟ್ ಬ್ಯಾಟ್ಸ್ ಮನ್ ಗಳನ್ನು ಹೊಂದಿದ್ದರೂ ಡೆಲ್ಲಿ ಪಡೆ ಹೈದ್ರಾಬಾದ್ ತಂಡದ ಶಿಸ್ತುಬದ್ಧ ಬೌಲಿಂಗ್ ಮತ್ತು ಉತ್ತಮ ಫೀಲ್ಡಿಂಗ್ ಗೆ ಬೆದರಿ 20 ಓವರ್ ಗಳಲ್ಲಿ 7 ವಿಕೆಟ್ ಗಳನ್ನು ಕಳೆದುಕೊಂಡು 147 ರನ್ ಗಳಷ್ಟನ್ನೇ ಕಲೆ ಹಾಕಲು ಶಕ್ತವಾಯಿತು.
162 ರನ್ ಗುರಿಯನ್ನು ಚೇಸ್ ಮಾಡಲಾರಂಭಿಸಿದ ಡೆಲ್ಲಿಗೆ ಪೃಥ್ವಿ ಶಾ ವಿಕೆಟ್ 2 ರನ್ ಆಗುವಷ್ಟರಲ್ಲಿ ಉರುಳುವುದರೊಂದಿಗೆ ಆಘಾತ ಪ್ರಾರಂಭವಾಯಿತು.
ಬಳಿಕ, 17 ರನ್ ಮಾಡಿದ ಕಪ್ತಾನ ಶ್ರೇಯಸ್ ಅಯ್ಯರ್ ಸಹ ಔಟಾದರು. ಆದರೆ, ಅನುಭವಿ ಬ್ಯಾಟ್ಸ್ ಮನ್ ಶಿಖರ್ ಧವನ್ (34) ಹಾಗೂ ರಿಷಭ್ ಪಂತ್ (32) ತಂಡವನ್ನು ಆಧರಿಸುವ ಕೆಲಸವನ್ನು ಮಾಡಿದರು.
ಇದನ್ನೂ ಓದಿ: ಬೇರ್ ಸ್ಟೋ ಫಿಪ್ಟೀ ; ವಿಲಿಯಮ್ಸನ್ ಭರ್ಜರಿ ಬ್ಯಾಟಿಂಗ್ ; ಡೆಲ್ಲಿಗೆ 163 ರನ್ ಟಾರ್ಗೆಟ್
ಆದರೆ ಡೆಲ್ಲಿ ತಂಡದ ಯಾವೊಬ್ಬ ಬ್ಯಾಟ್ಸ್ ಮನ್ ಸಹ ಪಂದ್ಯದ ಯಾವುದೇ ಹಂತದಲ್ಲೂ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಲು ಸಾಧ್ಯವಾಗಲೇ ಇಲ್ಲ. ಇದಕ್ಕೆ ಹೈದ್ರಾಬಾದ್ ತಂಡದ ಶಿಸ್ತಿನ ಬೌಲಿಂಗ್ ಅವಕಾಶ ನೀಡಲಿಲ್ಲ. ಹಾಗಾಗಿ ಈ ಸಾಮಾನ್ಯ ಗುರಿಯನ್ನೂ ಸಹ ಚೇಸ್ ಮಾಡಲು ಸಾಧ್ಯವಾಗಲಿಲ್ಲ.
ಇಂದಿನ ಪಂದ್ಯದಲ್ಲಿ ಹೈದ್ರಾಬಾದ್ ಬೌಲರ್ ಗಳ ಪರ್ ಫಾರ್ಮೆನ್ಸ್ ಉತ್ತಮವಾಗಿತ್ತು. ಅನುಭವಿ ಸ್ಪಿನ್ನರ್ ರಶೀದ್ ಖಾನ್ ಕೇವಲ 3.50 ಎಕಾನಮಿಯಲ್ಲಿ ಬೌಲಿಂಗ್ ಮಾಡಿ 3 ವಿಕೆಟ್ ಪಡೆಯುವ ಮೂಲಕ ಅಯ್ಯರ್ ಬಳಗವನ್ನು ಕಟ್ಟಿಹಾಕಿದರು.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಅವರಿಗೆ ಉತ್ತಮ ಸಾಥ್ ನೀಡಿದ ವೇಗಿ ಭುವನೇಶ್ವರ್ ಕುಮಾರ್ 2 ವಿಕೆಟ್ ಪಡೆದರೆ ಬ್ಯಾಟಿಂಗ್ ನಲ್ಲೂ ಮಿಂಚಿದ್ದ ಖಲೀಲ್ ಅಹಮ್ಮದ್ ಮತ್ತು ಟಿ. ನಟರಾಜನ್ ತಲಾ 1 ವಿಕೆಟ್ ಪಡೆದರು.
ಡೆಲ್ಲಿ ಪರ 34 ರನ್ ಬಾರಿಸಿದ ಶಿಖರ್ ಧವನ್ ಅವರೇ ಟಾಪ್ ಸ್ಕೋರರ್ ಎಣಿಸಿದರು. ಉಳಿದಂತೆ, ರಿಷಭ್ ಪಂತ್ (28), ಹೈಟ್ಮೇರ್ (21), ಶ್ರೇಯಸ್ ಅಯ್ಯರ್ (17), ಸ್ಟೋಯ್ನ್ಸ್ (11), ರಬಾಡ (ಔಟಾಗದೇ 7 ಎಸೆತಗಳಲ್ಲಿ 15) ರನ್ ಬಾರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಣ್ಣ ಸಾಧನೆಯಲ್ಲ, ಇದನ್ನು ಮುಂದುವರಿಸಿ: ಮೋದಿ
ದಕ್ಷಿಣ ಆಫ್ರಿಕಾ ವಿರುದ್ಧದ ಟಿ 20 ಸರಣಿ: ಭಾರತ ತಂಡದಲ್ಲಿ ಉಮ್ರಾನ್ ಮಲಿಕ್
ಟೀಂ ಇಂಡಿಯಾ ಟೆಸ್ಟ್ ತಂಡದಲ್ಲಿ ಈ ವೇಗಿ ಇರಲೇಬೆಕು: ಸುನಿಲ್ ಗವಾಸ್ಕರ್
ಒಂದೇ ಒಂದು ತಪ್ಪಿನಿಂದ ಪ್ಲೇ ಆಫ್ ಟಿಕೆಟ್ ತಪ್ಪಿಸಿಕೊಂಡ ರಿಷಭ್ ಪಂತ್
ಹೈದರಾಬಾದ್-ಪಂಜಾಬ್ ಲಾಸ್ಟ್ ಶೋ; ಇಂದು ಕೊನೆಯ ಲೀಗ್ ಪಂದ್ಯ ; ಕೇವಲ ಔಪಚಾರಿಕ ಮುಖಾಮುಖಿ