ಸೂಪರ್ ಓವರ್ ಕ್ಲೈಮಾಕ್ಸ್ ನಲ್ಲಿ ಗೆದ್ದು ಬೀಗಿದ ಭಾರತ

Team Udayavani, Jan 29, 2020, 4:21 PM IST

ಹ್ಯಾಮಿಲ್ಟನ್: ಇಲ್ಲಿನ ಸೆಡ್ಡಾನ್ ಪಾರ್ಕ್ ನಲ್ಲಿ ನಡೆದ ಮೂರನೇ ಟಿ ಟ್ವೆಂಟಿ ಪಂದ್ಯ ಸೂಪರ್ ಓವರ್ ಕ್ಲೈಮಾಕ್ಸ್ ಗೆ ಸಾಕ್ಷಿಯಾಯಿತು. ಅಂತಿಮವಾಗಿ ಭಾರತ ಪಂದ್ಯವನ್ನು ಗೆದ್ದು ಬೀಗಿದೆ.

ಮೊದಲು ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ ರೋಹಿತ್ ಅರ್ಧಶತಕದ ನೆರವಿನಿಂದ 178 ರನ್ ಗಳಿಸಿತು. ಭಾರತದ 179 ರನ್ ಗುರಿಯನ್ನು ಬೆನ್ನತ್ತಿದ ಆತಿಥೇಯರಿಗೆ ನೆರವಾಗಿದ್ದು ನಾಯಕ ಕೇನ್ ವಿಲಿಯಮ್ಸನ್. ಭರ್ಜರಿ 95 ರನ್ ಗಳಿಸಿದ ಕೇನ್ ತಂಡವನ್ನು ಬಹುತೇಕ ಜಯದ ಹಾದಿಗೆ ತಂದಿದ್ದರು. ಆದರೆ ಅಂತಿಮ ಓವರ್  ನಲ್ಲಿ ಎರಡು ವಿಕೆಟ್ ಕಿತ್ತ ಶಮಿ ಪಂದ್ಯಕ್ಕೆ ಟೈ ಮುದ್ರೆ ಒತ್ತಿದರು.

ಸೂಪರ್ ಓವರ್:

ಪಂದ್ಯ ಟೈ ಆದ ಕಾರಣ ಸೂಪರ್ ಓವರ್ ಆಡಸಿಲಾಯಿತು. ಕಿವೀಸ್ ಪರ ಬ್ಯಾಟಿಂಗ್ ಗೆ ಇಳಿದಿದ್ದದು ವಿಲಿಯಮ್ಸನ್ ಮತ್ತು ಮಾರ್ಟಿನ್ ಗಪ್ಟಿಲ್ . ಭಾರತದ ಬೌಲರ್ ಬುಮ್ರಾ. ಕಿವೀಸ್  ಒಂದು ಓವರ್ ನಲ್ಲಿ ಎರಡು ಬೌಂಡರಿ ಮತ್ತು ಒಂದು ಸಿಕ್ಸ್ ನೆರವಿನಿಂದ 17 ರನ್ ಗಳಿಸಿತು.

18 ರನ್ ಗುರಿ ಪಡೆದ ಭಾರತದಿಂದ ಬ್ಯಾಟಿಂಗ್ ಗೆ ಇಳಿದಿದ್ದು ರಾಹುಲ್ ಮತ್ತು ರೋಹಿತ್ ಶರ್ಮಾ.  ಕಿವೀಸ್ ಪರ ಬೌಲರ್ ಟಿಮ್ ಸೌಥಿ. ಮೊದಲೆರಡು ಬಾಲ್ ಗಳಿಗೆ ಮೂರು ರನ್. ಮೂರನೇ ಎಸೆತಕ್ಕೆ ರಾಹುಲ್ ಬೌಂಡರಿ. ನಾಲ್ಕನೇ ಬಾಲ್ ನಲ್ಲಿ ಒಂಟಿ ರನ್. ಐದನೇ ಎಸೆತದಲ್ಲಿ ರೋಹಿತ್  ಭರ್ಜರಿ ಸಿಕ್ಸರ್. ಅಂತಿಮ ಎಸೆತದಲ್ಲಿ ನಾಲ್ಕು ರನ್ ಅಗತ್ಯ. ಸೌಥಿ ಎಸೆತವನ್ನು ರೋಹಿತ್ ಶರ್ಮಾ ಭರ್ಜರಿ ಸಿಕ್ಸರ್ ಬಾರಿಸಿ ತಂಡವನ್ನು ಭಾರತಕ್ಕೆ ಜಯದ ಮಾಲೆ ತೊಡಿಸಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ