ಈತ ಯುವರಾಜ್, ಸೆಹ್ವಾಗ್ ರಂತೆ ಸ್ಪೋಟಕ ಆಟಗಾರ: ಯುವ ಭಾರತೀಯನ ಕುರಿತು ಸುರೇಶ್ ರೈನಾ
Team Udayavani, Apr 28, 2020, 11:11 AM IST
ಹೊಸದಿಲ್ಲಿ: ಕೋವಿಡ್-19 ಕಾರಣ ದೇಶದೆಲ್ಲೆಡೆ ಲಾಕ್ ಡೌನ್ ಇರುವ ಕಾರಣ ಯಾವುದೇ ಕ್ರೀಡಾಕೂಟಗಳ ನಡೆಯುತ್ತಿಲ್ಲ. ಕೋವಿಡ್ ಅಲ್ಲದಿದ್ದರೆ ಐಪಿಎಲ್ ನಲ್ಲಿ ಬ್ಯುಸಿ ಇರುತ್ತಿದ್ದ ಕ್ರಿಕೆಟರ್ಸ್ ಈಗ ಇನ್ಸ್ಟಾ ಗ್ರಾಮ್ ಲೈವ್ ನಲ್ಲಿ ಬ್ಯುಸಿ ಇದ್ದಾರೆ. ಈ ಲೈವ್ ಚಾಟ್ ನಲ್ಲಿ ಸುರೇಶ್ ಕೆಲ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
ಯುವ ಆಟಗಾರ ರಿಷಭ್ ಪಂತ್ ಅವರ ಬಗ್ಗೆ ಮಾತನಾಡಿರುವ ರೈನಾ, ಪಂತ್ ಒಬ್ಬ ಮ್ಯಾಚ್ ವಿನ್ನರ್. ಆತನಿಗೆ ಟೀಂ ಮ್ಯಾನೇಜ್ ಮೆಂಟ್ ಸರಿಯಾದ ಅವಕಾಶ ನೀಡಿದರೆ ಆತ ಯುವರಾಜ್ ಸಿಂಗ್ ಮತ್ತು ವಿರೇಂದ್ರ ಸೆಹ್ವಾಗ್ ರಂತೆ ಸ್ಪೋಟಕ ಆಟಗಾರನಾಗಬಲ್ಲ ಎಂದಿದೆ.
ಆತ ಅದ್ಭುತ ಆಟಗಾರ. ಯಾವಾಗ ಆತ ಉತ್ತಮ ಫಾರ್ಮ್ ನಲ್ಲಿ ಆಡುತ್ತಾನೋ ಆಗ ಆತ ನಮಗೆ ಖುಷಿ ಕೊಡುತ್ತಾನೆ. ಮತ್ತು ಆತ ನಮಗೆ ಯುವರಾಜ್, ಸೆಹ್ವಾಗ್ ನೆನಪಿಸುತ್ತಾನೆ. ಈತ ಫ್ಲಿಕ್ ಮಾಡಿದಾಗ ರಾಹುಲ್ ದ್ರಾವಿಡ್ ನೆನಪಾಗುತ್ತಾರೆ ಎಂದು ಸುರೇಶ್ ರೈನಾ ಅವರು ತನ್ನ ಲೈವ್ ಚಾಟ್ ನಲ್ಲಿ ಚಾಹಲ್ ಜೊತೆಗೆ ಹೇಳಿದ್ದಾರೆ.