ಫೈನಲ್ನಲ್ಲಿ ಎಡವಿದ ಸಾಯಿ ಪ್ರಣೀತ್
Team Udayavani, Mar 18, 2019, 12:30 AM IST
ಬಾಸೆಲ್: ಭಾರತದ ಬಿ. ಸಾಯಿ ಪ್ರಣೀತ್ ಅವರಿಗೆ “ಸ್ವಿಸ್ ಓಪನ್ ಬ್ಯಾಡ್ಮಿಂಟನ್’ ಪುರುಷರ ಸಿಂಗಲ್ಸ್ ಪ್ರಶಸ್ತಿ ಮರೀಚಿಕೆಯೇ ಆಗುಳಿದಿದೆ. ರವಿವಾರ ನಡೆದ ಫೈನಲ್ ಹಣಾಹಣಿಯಲ್ಲಿ ಅವರು ಚೀನದ ವಿಶ್ವ ನಂ.2 ಆಟಗಾರ ಶಿ ಯುಖೀ ವಿರುದ್ಧ 21-19, 18-21, 12-21 ಅಂತರದಿಂದ ಪರಾಭವಗೊಂಡರು.
2 ವರ್ಷಗಳ ಬಳಿಕ ಮೊದಲ ಸಲ ವಿಶ್ವ ಮಟ್ಟದ ಬ್ಯಾಡ್ಮಿಂಟನ್ ಫೈನಲ್ನಲ್ಲಿ ಸೆಣಸಲು ಇಳಿದಿದ್ದ ವಿಶ್ವದ ನಂ. 22 ಆಟಗಾರ ಸಾಯಿ ಪ್ರಣೀತ್ ಮೊದಲ ಗೇಮ್ ವಶಪಡಿಸಿಕೊಂಡರೂ ಬಳಿಕ ಹಿನ್ನಡೆ ಕಾಣುತ್ತ ಹೋದರು. ನಿರ್ಣಾಯಕ ಗೇಮ್ನಲ್ಲಿ ಚೀನಿ ಆಟಗಾರನಿಗೆ ಸವಾಲೆಸೆಯುವಲ್ಲಿ ಸಂಪೂರ್ಣ ವಿಫಲರಾದರು.
ಸಾಯಿ ಪ್ರಣೀತ್ 2017ರಲ್ಲಿ ಥಾಯ್ಲೆಂಡ್ ಓಪನ್ ಕೂಟದ ಫೈನಲ್ ಪ್ರವೇಶಿಸಿ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಅನಂತರ ಅವರು ಪ್ರಶಸ್ತಿ ಸುತ್ತಿಗೇರಿದ್ದು ಇದೇ ಮೊದಲು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು
LSG vs CSK: ಲಕ್ನೋದಲ್ಲೂ ಚೆನ್ನೈ ಫೇವರಿಟ್
IPL; ರೋಚಕ ಪಂದ್ಯದಲ್ಲಿ ಪಂಜಾಬ್ ಎದುರು 9 ರನ್ ಜಯ ಸಾಧಿಸಿದ ಮುಂಬೈ
Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ
MUST WATCH
ಹೊಸ ಸೇರ್ಪಡೆ
Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮನೆ ರತ್ನಾಕರ್
BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ
Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!
Bidar; ಬಿರುಗಾಳಿ ಸಹಿತ ಭಾರಿ ಮಳೆ :ಸಿಡಿಲು ಬಡಿದು ರೈತ ಸಾವು
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್