ಸಿಡ್ನಿ ಇಂಟರ್ ನ್ಯಾಶನಲ್ ಸೆಮಿಫೈನಲ್ಗೆ ಕ್ವಿಟೋವಾ
Team Udayavani, Jan 11, 2019, 12:55 AM IST
ಸಿಡ್ನಿ: ಪೆಟ್ರಾ ಕ್ವಿಟೋವಾ “ಸಿಡ್ನಿ ಇಂಟರ್ನ್ಯಾಶನಲ್ ಟೆನಿಸ್’ ಕೂಟದಲ್ಲಿ ಹಾಲಿ ಚಾಂಪಿಯನ್ ಆ್ಯಂಜೆಲಿಕ್ ಕೆರ್ಬರ್ ಅವರನ್ನು 6-4, 6-1 ನೇರ ಸೆಟ್ಗಳಿಂದ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಗುರುವಾರ ನಡೆದ ವನಿತಾ ಸಿಂಗಲ್ಸ್ ವಿಭಾಗದ ಪಂದ್ಯದ ಮೊದಲ ಸೆಟ್ ವೇಳೆ ಮಳೆ ಸುರಿದ ಕಾರಣ ಸ್ವಲ್ಪ ಹೊತ್ತು ಪಂದ್ಯವನ್ನು ನಿಲ್ಲಿಸಲಾಯಿತು. ಬಳಿಕ ಕ್ವಿಟೋವಾ ಮೇಲುಗೈ ಸಾಧಿಸಿ ಈ ಕೂಟದಲ್ಲಿ 4ನೇ ಬಾರಿಗೆ ಸೆವಿಸುಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾದರು.
ಸೆಮಿಫೈನಲ್ನಲ್ಲಿ ಕ್ವಿಟೋವಾ ಬೆಲರೂಸ್ನ ಅಲಿಯಕ್ಸಾಂಡ್ರಾ ಸಾಸ್ನೊವಿಕ್ ಅವರನ್ನು ಎದುರಿಸಲಿದ್ದಾರೆ. ಸಾಸ್ನೊವಿಕ್ ಸ್ವಿಜರ್ಲ್ಯಾಂಡಿನ ಟೈಮಿಯಾ ಬಾಕ್ಸಿನ್ಸ್ಕಿ ವಿರುದ್ಧ 6-3, 6-3 ಸೆಟ್ಗಳಿಂದ ಜಯ ಸಾಧಿಸಿದರು.