ಸಯ್ಯದ್ ಮೋದಿ ಬ್ಯಾಡ್ಮಿಂಟನ್: ಸಿಂಧು-ಮಾಳವಿಕಾ ಫೈನಲ್ ಹಣಾಹಣಿ
Team Udayavani, Jan 23, 2022, 5:45 AM IST
ಲಕ್ನೋ: ನೆಚ್ಚಿನ ಆಟಗಾರ್ತಿ ಪಿ.ವಿ. ಸಿಂಧು ಮತ್ತು ಮಾಳವಿಕಾ ಬನ್ಸೋಡ್ “ಸಯ್ಯದ್ ಮೋದಿ ಇಂಟರ್ನ್ಯಾಶನಲ್ ಬ್ಯಾಡ್ಮಿಂಟನ್’ ಕೂಟದ ಪ್ರಶಸ್ತಿ ಸುತ್ತು ಪ್ರವೇಶಿಸಿದ್ದಾರೆ.
ಹೀಗಾಗಿ ರವಿವಾರ “ಆಲ್ ಇಂಡಿಯನ್’ ಕಾಳಗವೊಂದನ್ನು ಕುತೂಹಲದಿಂದ ವೀಕ್ಷಿಸಬಹುದಾಗಿದೆ. ಯಾರೇ ಗೆದ್ದರೂ ಪ್ರಶಸ್ತಿ ಭಾರತೀಯರಿಗೇ ಒಲಿಯುತ್ತದೆ.
ರಶ್ಯದ ಎದುರಾಳಿ ಕೊಸೆತ್ಸ್ಕಾಯಾ ಪಂದ್ಯದ ನಡುವೆ ಗಾಯಾಳಾಗಿ ಹೊರಬಿದ್ದ ಕಾರಣ ಸಿಂಧು ಹಾದಿ ಸುಗಮಗೊಂಡಿತು. ಆಗ ಸಿಂಧು 21-11ರಿಂದ ಮೊದಲ ಗೇಮ್ ವಶಪಡಿಸಿಕೊಂಡಿದ್ದರು. ಇದಕ್ಕೂ ಮೊದಲು ಕೊಸೆತ್ಸ್ಕಾಯಾ ವಿರುದ್ಧ ಆಡಿದ ಎರಡೂ ಪಂದ್ಯಗಳಲ್ಲಿ ಸಿಂಧು ಜಯ ಸಾಧಿಸಿದ್ದರು.
ಇದನ್ನೂ ಓದಿ:ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್ಗೆ ಹ್ಯಾಟ್ರಿಕ್ ಸೋಲು
ಇನ್ನೊಂದು ಸೆಮಿಫೈನಲ್ನಲ್ಲಿ ಮಾಳವಿಕಾ ಬನ್ಸೋಡ್ 19-21, 21-19, 21-7ರಿಂದ ಭಾರತದವರೇ ಆದ ಅನುಪಮಾ ಉಪಾಧ್ಯಾಯ ಅವರನ್ನು ಸೋಲಿಸಿದರು.
ಮಾಳವಿಕಾ ದೊಡ್ಡ ಬೇಟೆ ಆಡಬಹುದೇ ಎಂಬುದೊಂದು ಕುತೂಹಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ
Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ
Telangana: ಜಾರ್ಖಂಡ್ ಗವರ್ನರ್ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ
Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ
ಶ್ರೀ ನಿತ್ಯಾನಂದ ಸ್ವಾಮಿ ಮಂದಿರ ಮಠ; ಧ್ಯಾನ ಮಂದಿರ, ಭೋಜನ ಶಾಲೆ ನಿರ್ಮಾಣ ಕಾಮಗಾರಿಗೆ ಚಾಲನೆ