ಸೈಯದ್‌ ಮುಷ್ತಾಕ್‌ ಅಲಿ ಟಿ20: ಸೂಪರ್‌ ಲೀಗ್‌ಗೆ ವೇದಿಕೆ ಸಜ್ಜು

ಗೆಲುವಿನ ಆತ್ಮವಿಶ್ವಾಸದಲ್ಲಿ ಕರ್ನಾಟಕ ಪಡೆ

Team Udayavani, Nov 19, 2019, 11:53 PM IST

ಸೂರತ್‌: ಸೈಯದ್‌ ಮುಷ್ತಾಕ್‌ ಅಲಿ ಟಿ20 ಕ್ರಿಕೆಟ್‌ ಕೂಟದ ಲೀಗ್‌ ಹಂತದ ಪಂದ್ಯಗಳು ಮುಕ್ತಾಯವಾಗಿದ್ದು ಗುರುವಾರದಿಂದ ಸೂಪರ್‌ ಲೀಗ್‌ ಕದನಕ್ಕೆ ವೇದಿಕೆ ಸಿದ್ಧವಾಗಿದೆ.

ಮೊದಲ ಸೆಣಸಾಟದಲ್ಲಿ ಹಾಲಿ ಚಾಂಪಿ ಯನ್‌ ಕರ್ನಾಟಕ ತಂಡವು ತ.ನಾಡು ವಿರುದ್ಧ ಸೆಣಸಲಿದೆ. ನ. 22ರಂದು ನಡೆ ಯುವ 2ನೇ ಪಂದ್ಯದಲ್ಲಿ ಕರ್ನಾಟಕ ತಂಡ ಝಾರ್ಖಂಡ್‌, ನ.24ರ 3ನೇ ಪಂದ್ಯದಲ್ಲಿ ಪಂಜಾಬ್‌ ಹಾಗೂ ನ. 25ರಂದು ನಡೆಯುವ ಪಂದ್ಯದಲ್ಲಿ ಮುಂಬಯಿ ವಿರುದ್ಧ ಸೆಣಸಲಿದೆ. ಈ ಎಲ್ಲ 4 ಪಂದ್ಯಗಳು ಸೂರತ್‌ನಲ್ಲಿಯೇ ನಡೆಯಲಿವೆ.

ರಾಜ್ಯಕ್ಕೆ ಯಾರು ಎಷ್ಟು ಬಲಿಷ್ಠ?
ತಮಿಳುನಾಡು: ಲೀಗ್‌ನಲ್ಲಿ ನೀಡಿರುವ ಪ್ರದರ್ಶನ ಗಮನಿಸಿದರೆ ತಮಿಳುನಾಡು ತಂಡವನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸುವಂತಿಲ್ಲ. ಅದು ಕರ್ನಾಟಕದಷ್ಟೇ ಪ್ರಬಲ ತಂಡ ಎನ್ನುವುದರಲ್ಲಿ ಅನುಮಾನವಿಲ್ಲ. ಆಡಿದ 6 ಪಂದ್ಯಗಳಲ್ಲಿ 5 ಪಂದ್ಯ ಜಯಿಸಿದ್ದು 1 ಪಂದ್ಯದಲ್ಲಿ ಮಾತ್ರ ಸೋಲು ಅನುಭವಿಸಿ “ಬಿ’ ಗುಂಪಿನ ಅಂಕಪಟ್ಟಿಯ ಅಗ್ರಸ್ಥಾನಿಯಾಗಿದೆ.

ಝಾರ್ಖಂಡ್‌: ಗುಂಪು “ಇ’ ಅಂಕಪಟ್ಟಿಯಲ್ಲಿ 2ನೇ ಸ್ಥಾನ ಪಡೆದ ಝಾರ್ಖಂಡ್‌ ಲೀಗ್‌ನಲ್ಲಿ ಒಟ್ಟಾರೆ 7 ಪಂದ್ಯ ಆಡಿತ್ತು. 5 ಪಂದ್ಯದಲ್ಲಿ ಗೆಲುವು, 1 ಪಂದ್ಯದಲ್ಲಿ ಸೋಲು ಹಾಗೂ 1 ಪಂದ್ಯ ರದ್ದಾಗಿತ್ತು. ಝಾರ್ಖಂಡ್‌ ತಂಡಕ್ಕೆ ಸೂಪರ್‌ಲೀಗ್‌ನಲ್ಲಿ ಕರ್ನಾಟಕ ವನ್ನು ಎದುರಿಸುವುದು ಸವಾಲಿನ ಕೆಲಸ ವಾಗಬಹುದು.

ಪಂಜಾಬ್‌: “ಸಿ’ ಗುಂಪಿನಲ್ಲಿ ಸ್ಪರ್ಧಿಸಿದ್ದ ಪಂಜಾಬ್‌ ಲೀಗ್‌ನಲ್ಲಿ 7 ಪಂದ್ಯ ಆಡಿದೆ. 4 ಪಂದ್ಯದಲ್ಲಿ ಜಯ ಸಾಧಿಸಿ 3 ಪಂದ್ಯದಲ್ಲಿ ಶರಣಾಗಿದೆ. ಅದು ಒಟ್ಟಾರೆ ತನ್ನ ಗುಂಪಿನಲ್ಲಿ 16 ಅಂಕ ಪಡೆದು 2ನೇ ಸ್ಥಾನಿಯಾಗಿದೆ.

ಮುಂಬಯಿ: “ಡಿ’ ಗುಂಪಿನ ಅಗ್ರಸ್ಥಾನಿ ಮುಂಬಯಿ ಬಲಿಷ್ಠರಲ್ಲಿ ಬಲಿಷ್ಠ ತಂಡ. ಕರ್ನಾಟಕಕ್ಕೆ ತಮಿಳುನಾಡು ತಂಡವನ್ನು ಹೊರತುಪಡಿಸಿದಂತೆ ಅತ್ಯಂತ ಹೆಚ್ಚು ಅಪಾಯವಿರುವುದು ಮುಂಬಯಿ ತಂಡದಿಂದಲೆ ಎನ್ನಲಡ್ಡಿಯಿಲ್ಲ.

ಕರ್ನಾಟಕದ ಅಪ್ರತಿಮ ಪ್ರದರ್ಶನ
ಕರ್ನಾಟಕ ಲೀಗ್‌ನಿಂದಲೂ ಅಪ್ರತಿಮ ಪ್ರದರ್ಶನ ನೀಡುತ್ತ ಬಂದಿದೆ. ತಾನಾಡಿದ 6 ಪಂದ್ಯಗಳಲ್ಲಿ 5 ಪಂದ್ಯಗಳಲ್ಲಿ ಗೆಲುವು ಬಾರಿಸಿದೆ. ಕರ್ನಾಟಕವು ಉತ್ತರಾಖಂಡ್‌ ತಂಡವನ್ನು 9 ವಿಕೆಟ್‌ಗಳಿಂದ ಸೋಲಿಸಿದ್ದರೆ ಬರೋಡ ವಿರುದ್ಧ 14 ರನ್‌ ಸೋಲು ಅನುಭವಿಸಿತ್ತು. ಆಬಳಿಕ ಸತತ ನಾಲ್ಕು ಪಂದ್ಯಗಳಲ್ಲಿ ಜಯಭೇರಿ ಬಾರಿಸಿ ಗಮನ ಸೆಳೆದಿತ್ತು. ಆಂಧ್ರಪ್ರದೇಶ ವಿರುದ್ಧ 5 ವಿಕೆಟ್‌, ಸರ್ವಿಸಸ್‌ ವಿರುದ್ಧ 80 ರನ್‌, ಬಿಹಾರ ವಿರುದ್ಧ 9 ವಿಕೆಟ್‌ ಹಾಗೂ ಗೋವಾ ವಿರುದ್ಧ 35 ರನ್‌ ಗೆಲುವು ಸಾಧಿಸಿ ಸಂಭ್ರಮಿಸಿತ್ತು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ