Udayavni Special

ಪಂಜಾಬ್‌ ವಿರುದ್ಧ ಸೇಡಿಗೆ ಕಾದಿದೆ ಕರ್ನಾಟಕ

ಇಂದಿನಿಂದ ಸಯ್ಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟಿ20 ನಾಕೌಟ್‌

Team Udayavani, Jan 26, 2021, 6:50 AM IST

ಪಂಜಾಬ್‌ ವಿರುದ್ಧ ಸೇಡಿಗೆ ಕಾದಿದೆ ಕರ್ನಾಟಕ

ಅಹ್ಮದಾಬಾದ್‌: ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಪಂದ್ಯಾವಳಿಯ ಕ್ವಾರ್ಟರ್‌ ಫೈನಲ್‌ ಪಂದ್ಯಗಳು ಮಂಗಳವಾರ ಮತ್ತು ಬುಧವಾರ ಅಹ್ಮದಾಬಾದ್‌ನಲ್ಲಿ ನಡೆಯಲಿವೆ. ಹ್ಯಾಟ್ರಿಕ್‌ ಹಾದಿಯಲ್ಲಿರುವ ಕಳೆದೆರಡು ಬಾರಿಯ ಹಾಲಿ ಚಾಂಪಿಯನ್‌ ಕರ್ನಾಟಕ ತಂಡ ಮೊದಲ ಪಂದ್ಯದಲ್ಲಿ ಪಂಜಾಬ್‌ ವಿರುದ್ಧ ಸೆಣಸಲಿದೆ.

ಸ್ವಾರಸ್ಯವೆಂದರೆ, ಲೀಗ್‌ ಹಂತದಲ್ಲಿ ಕರ್ನಾಟಕ ಮತ್ತು ಪಂಜಾಬ್‌ ಒಂದೇ ವಿಭಾಗದಲ್ಲಿದ್ದವು. ಕರ್ನಾಟಕ ತನ್ನ ಏಕೈಕ ಸೋಲನ್ನು ಪಂಜಾಬ್‌ ವಿರುದ್ಧವೇ ಅನುಭವಿಸಿತ್ತು. ಅಂತರ 9 ವಿಕೆಟ್‌. ಸಿದ್ಧಾರ್ಥ್ ಕೌಲ್‌ ಹ್ಯಾಟ್ರಿಕ್‌ ಸಾಧಿಸಿದರೆ, ಆರಂಭಕಾರ ಪ್ರಭ್‌ಶಿಮ್ರಾನ್‌ ಸಿಂಗ್‌ 89 ರನ್‌ ಸಿಡಿಸಿ ರಾಜ್ಯದ ಬೌಲಿಂಗ್‌ ಪಡೆಯ ಮೇಲೆ ಸವಾರಿ ಮಾಡಿದ್ದರು.

ಪಂಜಾಬ್‌ ಲೀಗ್‌ ಹಂತದ ಎಲ್ಲ ಪಂದ್ಯಗಳನ್ನು ಗೆದ್ದು ಅಗ್ರಸ್ಥಾನಿಯಾಗಿ ನಾಕೌಟ್‌ಗೆ ಲಗ್ಗೆ ಇರಿಸಿದ ತಂಡ. ರನ್‌ ಸರಾಸರಿ ಉತ್ತಮ ಮಟ್ಟದಲ್ಲಿದ್ದುದರಿಂದ ಕರುಣ್‌ ನಾಯರ್‌ ಪಡೆಗೆ ನಾಕೌಟ್‌ ಟಿಕೆಟ್‌ ಲಭಿಸಿತು. ಈಗ ಪಂಜಾಬ್‌ ವಿರುದ್ಧ ಸೇಡು ತೀರಿಸಿಕೊಂಡು ಮುನ್ನುಗ್ಗಬೇಕಿದೆ.

ಈ ಪಂದ್ಯ ಯುವ ಓಪನರ್‌ಗಳ ಬ್ಯಾಟಿಂಗ್‌ ಸಾಮರ್ಥ್ಯಕ್ಕೆ ವೇದಿಕೆಯಾಗುವ ಸಾಧ್ಯತೆ ಇದೆ. ಕರ್ನಾಟಕದ ದೇವದತ್ತ ಪಡಿಕ್ಕಲ್‌ ಮತ್ತು ಪಂಜಾಬ್‌ನ ಪ್ರಭ್‌ಶಿಮ್ರಾನ್‌ ಸಿಂಗ್‌ ಕೂಟದಲ್ಲಿ ಪ್ರಚಂಡ ಫಾರ್ಮ್ ಪ್ರದರ್ಶಿಸಿದ್ದಾರೆ. ಕ್ರಮವಾಗಿ 277 ಹಾಗೂ 207 ರನ್‌ ಪೇರಿಸಿದ್ದಾರೆ. ಎರಡೂ ತಂಡಗಳ ಮಧ್ಯಮ ಕ್ರಮಾಂಕ ಬಲಿಷ್ಠವಾಗಿದೆ. ಪಂಜಾಬ್‌ನ ಪೇಸ್‌ ಬೌಲಿಂಗ್‌ ಸಾಮರ್ಥ್ಯ ತುಸು ಮೇಲ್ಮಟ್ಟದಲ್ಲಿದೆ. ಸಿದ್ಧಾರ್ಥ್ ಕೌಲ್‌ (10 ವಿಕೆಟ್‌) ಮತ್ತು ಸಂದೀಪ್‌ ಶರ್ಮ ಉತ್ತಮ ಲಯದಲ್ಲಿದ್ದಾರೆ. ಕರ್ನಾಟಕದ ಅಭಿಮನ್ಯು ಮಿಥುನ್‌, ಪ್ರಸಿದ್ಧ್ ಕೃಷ್ಣ ಕೂಡ ಅಪಾಯಕಾರಿಗಳೇ.

ಸ್ಪಿನ್‌ ವಿಭಾಗದಲ್ಲಿ ಜೆ. ಸುಚಿತ್‌ ಮತ್ತು ಶ್ರೇಯಸ್‌ ಗೋಪಾಲ್‌ ಕರ್ನಾಟಕದ ನೆರವಿಗಿದ್ದಾರೆ. ಪಂಜಾಬ್‌ ಮಾಯಾಂಕ್‌ ಮಾರ್ಕಂಡೆ ಅವರನ್ನು ನಂಬಿಕೊಂಡಿದೆ.

ಕ್ವಾರ್ಟರ್‌ ಫೈನಲ್ಸ್‌ :

ದಿನಾಂಕ              ಪಂದ್ಯ                         ಆರಂಭ

ಜ. 26        ಕರ್ನಾಟಕ-ಪಂಜಾಬ್‌              ಅ. 12.00

ಜ. 26        ತ.ನಾಡು-ಹಿಮಾಚಲ             ಸಂ. 7.00

ಜ. 27        ಹರ್ಯಾಣ-ಬರೋಡ                ಅ. 12.00

ಟಾಪ್ ನ್ಯೂಸ್

ವಿವಾದದ ಅಂಕಣವಾದ ಮೊಟೆರಾದ ಕ್ರೀಡಾಂಗಣ!

ವಿವಾದದ ಅಂಕಣವಾದ ಮೊಟೆರಾದ ಕ್ರೀಡಾಂಗಣ!

pooja gandhi

ನಾನು ಕೇವಲ ನಟಿಯಲ್ಲ, ಉದ್ಯಮಿಯೂ ಆಗಿದ್ದೇನೆ:  ಪೂಜಾ ಗಾಂಧಿ

ರೇಣು @ 59 : ಸರಳತೆಯ ಸಾಕಾರಮೂರ್ತಿ ಕ್ಷೇತ್ರ ಮೆಚ್ಚಿದ ಸೇವಕ

ರೇಣು @ 59 : ಸರಳತೆಯ ಸಾಕಾರಮೂರ್ತಿ ಕ್ಷೇತ್ರ ಮೆಚ್ಚಿದ ಸೇವಕ

ರೇಣು @ 59 : ರಾಜಕೀಯ ಚತುರ ಅಭಿವೃದ್ಧಿ ಹರಿಕಾರ

ರೇಣು @ 59 : ರಾಜಕೀಯ ಚತುರ ಅಭಿವೃದ್ಧಿ ಹರಿಕಾರ

ರೇಣು @ 59 :  ಹೋರಾಟವೇ ಉಸಿರು ಜನರೇ ದೇವರು

ರೇಣು @ 59 : ಹೋರಾಟವೇ ಉಸಿರು ಜನರೇ ದೇವರು

horo

ಇಂದಿನ ಗ್ರಹಬಲ: ಈ ರಾಶಿಯ ನಿರುದ್ಯೋಗಿಗಳಿಗೆ ಇಂದು ಹಲವು ಅವಕಾಶಗಳು ಕೂಡಿ ಬರಲಿದೆ

ರೇಣು@ 59 ಜನ ಸೇವಕ ನಾಯಕ

ರೇಣು@ 59 ಜನ ಸೇವಕ ನಾಯಕಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿವಾದದ ಅಂಕಣವಾದ ಮೊಟೆರಾದ ಕ್ರೀಡಾಂಗಣ!

ವಿವಾದದ ಅಂಕಣವಾದ ಮೊಟೆರಾದ ಕ್ರೀಡಾಂಗಣ!

ಭಾರತ ಟೆಸ್ಟ್‌ ವಿಶ್ವಕಪ್‌ ಫೈನಲ್‌ ತಲುಪಿದರೆ ಏಶ್ಯ ಕಪ್‌ ಮುಂದಕ್ಕೆ?

ಭಾರತ ಟೆಸ್ಟ್‌ ವಿಶ್ವಕಪ್‌ ಫೈನಲ್‌ ತಲುಪಿದರೆ ಏಶ್ಯ ಕಪ್‌ ಮುಂದಕ್ಕೆ?

ವಿಜಯ್‌ ಹಜಾರೆ ಟ್ರೋಫಿ: ಪಡಿಕ್ಕಲ್‌ ಹ್ಯಾಟ್ರಿಕ್‌ ಶತಕ, ಸಮರ್ಥ್ 2ನೇ ಸೆಂಚುರಿ

ವಿಜಯ್‌ ಹಜಾರೆ ಟ್ರೋಫಿ: ಪಡಿಕ್ಕಲ್‌ ಹ್ಯಾಟ್ರಿಕ್‌ ಶತಕ, ಸಮರ್ಥ್ 2ನೇ ಸೆಂಚುರಿ

ಐಸಿಸಿ ಟೆಸ್ಟ್‌ ಬ್ಯಾಟಿಂಗ್‌ ರ್‍ಯಾಂಕಿಂಗ್‌ : 8ನೇ ಸ್ಥಾನಕ್ಕೆ ಏರಿದ ರೋಹಿತ್‌ ಶರ್ಮ

ಐಸಿಸಿ ಟೆಸ್ಟ್‌ ಬ್ಯಾಟಿಂಗ್‌ ರ್‍ಯಾಂಕಿಂಗ್‌ : 8ನೇ ಸ್ಥಾನಕ್ಕೆ ಏರಿದ ರೋಹಿತ್‌ ಶರ್ಮ

ಕ್ರೀಡಾಲೋಕದ ಮೇಲೆ ಮತ್ತೆ ಕೆಂಗಣ್ಣು ಬೀರಿದ ಕೋವಿಡ್

ಕ್ರೀಡಾಲೋಕದ ಮೇಲೆ ಮತ್ತೆ ಕೆಂಗಣ್ಣು ಬೀರಿದ ಕೋವಿಡ್

MUST WATCH

udayavani youtube

ದರೋಡೆಕೋರರನ್ನು ಅಟ್ಟಾಡಿಸಿದ ಜನರು.. ಯಾವ ಸಿನಿಮಾಗೂ ಕಡಿಮೆಯಿಲ್ಲ ಚೇಸಿಂಗ್ ದೃಶ್ಯ

udayavani youtube

ಕುಮಾರಸ್ವಾಮಿಯನ್ನು ನಂಬಬೇಡಿ, ಅವರೊಂದಿಗೆ ಹೊಂದಾಣಿಕೆ ಬೇಡ: ಬಿಜೆಪಿ ವರಿಷ್ಠರಿಗೆ ಯೋಗೀಶ್ವರ್

udayavani youtube

CoWin App ಸಮಸ್ಯೆ ! ಎರಡು ದಿನ ಲಸಿಕೆ ಹಂಚಿಕೆ ಇಲ್ಲ ! | Udayavani

udayavani youtube

ದಾನದ ಪರಿಕಲ್ಪನೆಯ ಕುರಿತು Dr. Gururaj Karajagi ಹೇಳಿದ ಕತೆ ಕೇಳಿ.. Part-3

udayavani youtube

ಕಾಯಕದಲ್ಲಿ ಕಟ್ಟಡ ಕಟ್ಟುವ ಮೇಸ್ತ್ರಿ; ಬಿಡುವಿನಲ್ಲಿ ಹಾಳೆ ಮುಟ್ಟಾಳೆ ತಯಾರಕರು

ಹೊಸ ಸೇರ್ಪಡೆ

ವಿವಾದದ ಅಂಕಣವಾದ ಮೊಟೆರಾದ ಕ್ರೀಡಾಂಗಣ!

ವಿವಾದದ ಅಂಕಣವಾದ ಮೊಟೆರಾದ ಕ್ರೀಡಾಂಗಣ!

pooja gandhi

ನಾನು ಕೇವಲ ನಟಿಯಲ್ಲ, ಉದ್ಯಮಿಯೂ ಆಗಿದ್ದೇನೆ:  ಪೂಜಾ ಗಾಂಧಿ

ರೇಣು @ 59 : ಸರಳತೆಯ ಸಾಕಾರಮೂರ್ತಿ ಕ್ಷೇತ್ರ ಮೆಚ್ಚಿದ ಸೇವಕ

ರೇಣು @ 59 : ಸರಳತೆಯ ಸಾಕಾರಮೂರ್ತಿ ಕ್ಷೇತ್ರ ಮೆಚ್ಚಿದ ಸೇವಕ

ರೇಣು @ 59 : ರಾಜಕೀಯ ಚತುರ ಅಭಿವೃದ್ಧಿ ಹರಿಕಾರ

ರೇಣು @ 59 : ರಾಜಕೀಯ ಚತುರ ಅಭಿವೃದ್ಧಿ ಹರಿಕಾರ

ರೇಣು @ 59 :  ಹೋರಾಟವೇ ಉಸಿರು ಜನರೇ ದೇವರು

ರೇಣು @ 59 : ಹೋರಾಟವೇ ಉಸಿರು ಜನರೇ ದೇವರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.