ನಟರಾಜನ್ ಮನೆ ತಲುಪಿತು “ಮಹೀಂದ್ರ’
Team Udayavani, Apr 2, 2021, 7:08 AM IST
ಚೆನ್ನೈ,: ಕಳೆದ ಆಸ್ಟ್ರೇಲಿಯ ಪ್ರವಾಸದಲ್ಲಿ ಭಾರತದ ಯಶಸ್ಸಿಗೆ ಕಾರಣರಾದ 6 ಮಂದಿ ಕ್ರಿಕೆಟಿಗರಿಗೆ “ಮಹೀಂದ್ರ ಥಾರ್ ಎಸ್ಯುವಿ ಜೀಪ್’ ಉಡುಗೊರೆ ನೀಡುವುದಾಗಿ ಘೋಷಿಸಿದ್ದ ಆನಂದ ಮಹೀಂದ್ರ ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ. ಈ ವಾಹನ ಕೈ ಸೇರಿರುವ ಕುರಿತು ಟಿ. ನಟರಾಜನ್ ಸಾಮಾಜಿಕ ಜಾಲತಾಣದಲ್ಲಿ ಚಿತ್ರ ಸಹಿತ ಪ್ರಕಟಿಸಿದ್ದಾರೆ.
ಇದಕ್ಕೆ ಪ್ರತಿಯಾಗಿ ಟಿ. ನಟರಾಜನ್ ಬ್ರಿಸ್ಬೇನ್ ಟೆಸ್ಟ್ ವೇಳೆ ಧರಿಸಿದ್ದ ಜೆರ್ಸಿಯೊಂದನ್ನು ತಮ್ಮ ಹಸ್ತಾಕ್ಷರದೊಂದಿಗೆ ಆನಂದ ಮಹೀಂದ್ರ ಅವರಿಗೆ ರಿಟರ್ನ್ ಗಿಫ್ಟ್ ಆಗಿ ನೀಡಿದ್ದಾರೆ.
ಉಡುಗೊರೆ ಸದಾ ನಮಗೆ ಸ್ಫೂರ್ತಿ :
“ಭಾರತದ ಪರ ಕ್ರಿಕೆಟ್ ಆಡಿದ್ದು ನನ್ನ ಬದುಕಿನ ಹೆಮ್ಮೆ ಹಾಗೂ ಸಾರ್ಥಕನ ಕ್ಷಣಗಳಾಗಿವೆ. ಶ್ರೇಷ್ಠ ವ್ಯಕ್ತಿಗಳ ಇಂಥ ಬೆಂಬಲ, ಪ್ರೋತ್ಸಾಹ, ಉಡುಗೊರೆ ಸದಾ ನಮಗೆ ಸ್ಫೂರ್ತಿ. ಈ ಬ್ಯೂಟಿಫುಲ್ ಮಹೀಂದ್ರ ವಾಹನವನ್ನು ಚಲಾಯಿಸಿ ಮನೆಗೆ ತಂದಿದ್ದೇನೆ’ ಎಂಬುದಾಗಿ ನಟರಾಜನ್ ಖುಷಿಯಿಂದ ಹೇಳಿದ್ದಾರೆ.
ಮಹೀಂದ್ರ ಉಡುಗೊರೆ ಪಡೆದ ಉಳಿದ ಕ್ರಿಕೆಟಿಗರೆಂದರೆ ಶಾದೂìಲ್ ಠಾಕೂರ್, ಮೊಹಮ್ಮದ್ ಸಿರಾಜ್, ಶುಭಮನ್ ಗಿಲ್, ವಾಷಿಂಗ್ಟನ್ ಸುಂದರ್ ಮತ್ತು ನವದೀಪ್ ಸೈನಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ