ಟಿ20: ಬಾಂಗ್ಲಾದೇಶವನ್ನು ಮಣಿಸಿದ ಪಾಕಿಸ್ಥಾನ

Team Udayavani, Jan 25, 2020, 1:22 AM IST

ಲಾಹೋರ್‌: ಪ್ರವಾಸಿ ಬಾಂಗ್ಲಾ ವಿರುದ್ಧ ಶುಕ್ರವಾರ ಇಲ್ಲಿನ “ಗದ್ದಾಫಿ ಸ್ಟೇಡಿಯಂ’ನಲ್ಲಿ ಆಡಲಾದ ಮೊದಲ ಟಿ20 ಪಂದ್ಯವನ್ನು ಪಾಕಿಸ್ಥಾನ 5 ವಿಕೆಟ್‌ಗಳಿಂದ ಗೆದ್ದಿದೆ.

ಬಾಂಗ್ಲಾದೇಶ 5 ವಿಕೆಟಿಗೆ 141 ರನ್‌ ಮಾಡಿದರೆ, ಪಾಕಿಸ್ಥಾನ 19.3 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 142 ರನ್‌ ಬಾರಿಸಿ ಗೆಲುವು ಸಾಧಿಸಿತು.

ಪಾಕ್‌ ಚೇಸಿಂಗ್‌ ವೇಳೆ ಶೋಯಿಬ್‌ ಮಲಿಕ್‌ 58 ರನ್‌ ಬಾರಿಸಿ ಅಜೇಯರಾಗಿ ಉಳಿದರು. ಆರಂಭಿಕನಾಗಿ ಇಳಿದ ನಾಯಕ ಬಾಬರ್‌ ಆಜಂ ಖಾತೆ ತೆರೆಯಲು ವಿಫ‌ಲರಾದರೆ, ಮತ್ತೋರ್ವ ಓಪನರ್‌ ಅಹಸಾನ್‌ ಅಲಿ 36 ರನ್‌ ಮಾಡಿದರು.
ಬಾಂಗ್ಲಾದೇಶಕ್ಕೆ ತಮಿಮ್‌ ಇಕ್ಬಾಲ್‌ (39), ಮೊಹಮ್ಮದ್‌ ನೈಮ್‌ (43) ಉತ್ತಮ ಆರಂಭ ಒದಗಿಸಿದರೂ ಇವರ ಆಟದಲ್ಲಿ ಬಿರುಸಿರಲಿಲ್ಲ. 11 ಓವರ್‌ಗಳ ಜತೆಯಾಟ ನಿಭಾಯಿಸಿ ಕೇವಲ 71 ರನ್‌ ಮಾಡಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ