ಟಿ20: ಪ್ರಯೋಗಕ್ಕೆ ಇದು ಸೂಕ್ತ ಸಮಯ


Team Udayavani, Jan 31, 2020, 12:57 AM IST

t20

ವೆಲ್ಲಿಂಗ್ಟನ್‌: ಬುಧವಾರ ಹ್ಯಾಮಿಲ್ಟನ್‌ನಲ್ಲಿ ಅಸಾಮಾನ್ಯ ಪ್ರದರ್ಶನ ನೀಡಿ ನ್ಯೂಜಿಲ್ಯಾಂಡ್‌ ವಿರುದ್ಧ ಟಿ20 ಸರಣಿ ಗೆದ್ದು ಇತಿಹಾಸ ನಿರ್ಮಿಸಿದ ಭಾರತ ತಂಡವೀಗ ಪ್ರಯೋಗಕ್ಕೆ ಒಡ್ಡಿಕೊಳ್ಳುವ ಯೋಜನೆಯಲ್ಲಿದೆ. 4ನೇ ಮುಖಾಮುಖೀ ಶುಕ್ರವಾರ ವೆಲ್ಲಿಂಗ್ಟನ್‌ನಲ್ಲಿ ನಡೆಯಲಿದ್ದು, ಇಲ್ಲಿಯ ತನಕ ಅವಕಾಶ ಪಡೆಯದ ಆಟಗಾರರಲ್ಲಿ ಕೆಲವರಿಗೆ ಬಾಗಿಲು ತೆರೆಯುವ ಸಾಧ್ಯತೆ ಇದೆ.

ಇನ್ನೊಂದೆಡೆ ತವರಲ್ಲೇ ಮುಖಭಂಗ ಅನುಭವಿಸಿ ತೀವ್ರ ಒತ್ತಡದಲ್ಲಿರುವ ನ್ಯೂಜಿಲ್ಯಾಂಡ್‌ ಉಳಿದೆರಡು ಪಂದ್ಯಗಳಲ್ಲಿ ಪ್ರತಿಷ್ಠೆಯನ್ನು ಪಣ ಕ್ಕೊಡ್ಡಲೇಬೇಕಿದೆ. ಗೆದ್ದು ಸರಣಿ ಸೋಲಿನ ಅಂತರವನ್ನು ಕಡಿಮೆಗೊಳಿಸಲು ಕಾರ್ಯತಂತ್ರ ರೂಪಿಸಬೇಕಿದೆ. ಇದಕ್ಕೆ ಕೊಹ್ಲಿ ಪಡೆ ಆಸ್ಪದ ಕೊಟ್ಟಿàತೇ ಎಂಬುದೊಂದು ಪ್ರಶ್ನೆ ಹಾಗೂ ಕುತೂಹಲ.

ಭಾರತದ ಗುರಿ 5-0
ಭಾರತ ಈಗಾಗಲೇ ಸರಣಿ ಗೆದ್ದಿರುವುದರಿಂದ ಇಲ್ಲಿಯ ತನಕ ವೀಕ್ಷಕರಾಗಿಯೇ ಉಳಿದ ಕ್ರಿಕೆಟಿಗರನ್ನು ಆಡಿಸಲು ತಂಡದ ಆಡಳಿತ ಮಂಡಳಿ ಉತ್ಸುಕವಾಗಿದೆ. ಅಲ್ಲದೇ ಕಳೆದ ಮೂರೂ ಪಂದ್ಯಗಳಲ್ಲಿ ಭಾರತ ಬದಲಾಗದ ತಂಡದೊಂದಿಗೆ ಹೋರಾಟ ಸಂಘಟಿಸಿ ಭರಪೂರ ಯಶಸ್ಸು ಕಂಡಿತ್ತು. ಹೀಗಾಗಿ ಪ್ರಯೋಗಕ್ಕೆ ಇದು ಸೂಕ್ತ ಸಮಯವೂ ಹೌದು.

ಈವರೆಗೆ ನವದೀಪ್‌ ಸೈನಿ, ಸಂಜು ಸ್ಯಾಮ್ಸನ್‌, ಪಂತ್‌, ಕುಲದೀಪ್‌, ವಾಷಿಂಗ್ಟನ್‌ ಸುಂದರ್‌ ವೀಕ್ಷಕರ ಸಾಲಿನಲ್ಲೇ ಉಳಿದಿದ್ದರು. ಇವರಲ್ಲಿ ಒಂದಿಬ್ಬರಾದರೂ ವೆಲ್ಲಿಂಗ್ಟನ್‌ನಲ್ಲಿ ಅವಕಾಶ ಪಡೆಯಬಹುದೇ ಎಂಬ ನಿರೀಕ್ಷೆ ಎಲ್ಲರಲ್ಲೂ ಇದೆ.

ಹಾಗೆ ನೋಡಹೋದರೆ ಭಾರತದ ಬ್ಯಾಟಿಂಗ್‌ ಸರದಿಯಲ್ಲಿ ಬದಲಾವಣೆ ಸಂಭವಿಸುವುದು ಅನುಮಾನ. ರೋಹಿತ್‌, ರಾಹುಲ್‌, ಕೊಹ್ಲಿ, ಅಯ್ಯರ್‌, ಪಾಂಡೆ ಅವರನ್ನೊಳಗೊಂಡ ಬ್ಯಾಟಿಂಗ್‌ ಲೈನ್‌ಅಪ್‌ ಬಲಿಷ್ಠವಾಗಿದೆ. ಆದರೆ ಆಲ್‌ರೌಂಡರ್‌ ಹಾಗೂ ಬೌಲಿಂಗ್‌ ವಿಭಾಗದಲ್ಲಿ ಇದೇ ಮಾತನ್ನು ಹೇಳುವಂತಿಲ್ಲ. ದುಬೆ ಬದಲು ವಾಷಿಂಗ್ಟನ್‌ ಸುಂದರ್‌, ಠಾಕೂರ್‌ ಬದಲು ಸೈನಿ ಅವಕಾಶ ಪಡೆಯುವ ಸಾಧ್ಯತೆ ಇದೆ.

ಆದರೆ ನಾಯಕ ವಿರಾಟ್‌ ಕೊಹ್ಲಿ ಮತ್ತು ಕೋಚ್‌ ರವಿಶಾಸಿŒ ಅವರೀಗ 5-0 ಕ್ಲೀನ್‌ಸಿÌàಪ್‌ ಮೂಡ್‌ನ‌ಲ್ಲಿದ್ದಾರೆ. ಆಸ್ಟ್ರೇಲಿಯದಲ್ಲಿ ನಡೆಯುವ ಟಿ20 ವಿಶ್ವಕಪ್‌ ಪಂದ್ಯಾವಳಿಗೆ ಇದೊಂದು ಬೂಸ್ಟ್‌ ಆಗಲಿದೆ ಎಂಬುದು ಇವರ ಲೆಕ್ಕಾಚಾರ. ಆಗ ಭಾರತ ಭಾರೀ ಪ್ರಯೋಗಕ್ಕೆ ಮುಂದಾಗುವುದು ಅನುಮಾನ ಎಂದೂ ಭಾವಿಸಬೇಕಾಗುತ್ತದೆ.

ಕಿವೀಸ್‌ಗೆ ಕೈಹಿಡಿಯದ ಅದೃಷ್ಟ
ವಿಲಿಯಮ್ಸನ್‌ ಪಡೆ ಎಲ್ಲ ದಿಕ್ಕುಗಳಿಂದಲೂ ಹೊಡೆತ ಅನುಭವಿಸುತ್ತಿದೆ. ದೊಡ್ಡ ಹಿನ್ನಡೆ ಎದುರಾಗಿರುವುದು ಬೌಲಿಂಗ್‌ ವಿಭಾಗದಲ್ಲಿ. ಬ್ಯಾಟಿಂಗ್‌ ವಿಭಾಗ ಸದೃಢವಾಗಿದ್ದರೂ ಪಂದ್ಯವನ್ನು ಫಿನಿಶಿಂಗ್‌ ಮಾಡುವಲ್ಲಿ ಘೋರ ವೈಫ‌ಲ್ಯ ಕಾಣುತ್ತಿದೆ. ಜತೆಗೆ ವಿಶ್ವಕಪ್‌ ಫೈನಲ್‌ನಲ್ಲಿ ಕೈಕೊಟ್ಟ ಅದೃಷ್ಟ ಇನ್ನೂ ಮರಳಿ ಬಂದಿಲ್ಲ. ಇದಕ್ಕೆ ಹ್ಯಾಮಿಲ್ಟನ್‌ ಪಂದ್ಯಕ್ಕಿಂತ ಮಿಗಿಲಾದ ನಿದರ್ಶನ ಬೇಕಿಲ್ಲ.

ಅಬ್ಬರಿಸುತ್ತ ಸಾಗಿದ್ದ ವಿಲಿಯಮ್ಸನ್‌ ಮತ್ತು ಟೇಲರ್‌ ಅವರಿಗೆ ಅಂತಿಮ ಓವರಿನಲ್ಲಿ 9 ರನ್‌ ತೆಗೆಯುವುದು ಸವಾಲೇ ಆಗಿರಲಿಲ್ಲ. ಕಿವೀಸ್‌ ನಿಗದಿತ ಅವಧಿಯಲ್ಲೇ ಗೆದ್ದು ಸಂಭ್ರಮಿಸಬಹುದಿತ್ತು. ಆದರೆ ಮೊಹಮ್ಮದ್‌ ಶಮಿ ಅದ್ಭುತವನ್ನೇ ಸಾಧಿಸಿದರು. ಸೂಪರ್‌ ಓವರ್‌ನಲ್ಲಿ ರೋಹಿತ್‌ ಶರ್ಮ ಸಿಡಿದು ನಿಂತರು. ಅಲ್ಲಿಗೆ ಕಿವೀಸ್‌ ಕತೆ ಮುಗಿದಿತ್ತು. ಅದು ಎದ್ದು ನಿಂತೀತೇ?

ವೆಲ್ಲಿಂಗ್ಟನ್‌: ಎರಡನ್ನೂ ಸೋತಿರುವ ಭಾರತ
ಆಕ್ಲೆಂಡ್‌ ಹೊರತುಪಡಿಸಿ ನ್ಯೂಜಿಲ್ಯಾಂಡಿನ ಬೇರೆ ಯಾವುದೇ ಕ್ರಿಕೆಟ್‌ ತಾಣಗಳಲ್ಲಿ ಟಿ20 ಗೆಲುವು ಸಾಧಿಸದ ಭಾರತ ಬುಧವಾರ ಹ್ಯಾಮಿಲ್ಟನ್‌ ಕಂಟಕವನ್ನು ನಿವಾರಿಸಿಕೊಂಡಿತು. ಶುಕ್ರವಾರ ವೆಲ್ಲಿಂಗ್ಟನ್‌ನಲ್ಲೂ ಗೆಲುವಿನ ಖಾತೆ ತೆರೆದೀತೇ ಎಂಬುದು ಸದ್ಯದ ಕುತೂಹಲ.

ಇಲ್ಲಿನ “ವೆಸ್ಟ್‌ಪಾಕ್‌ ಸ್ಟೇಡಿಯಂ’ನಲ್ಲಿ ಆಡಿದ ಎರಡೂ ಟಿ20 ಪಂದ್ಯಗಳಲ್ಲಿ ಭಾರತ ನ್ಯೂಜಿಲ್ಯಾಂಡಿಗೆ ಶರಣಾಗಿತ್ತು. 2009ರ ಮೊದಲ ಮುಖಾಮುಖೀಯನ್ನು 5 ವಿಕೆಟ್‌ಗಳಿಂದ ಕಳೆದುಕೊಂಡರೆ, ಕಳೆದ ವರ್ಷ 80 ರನ್ನುಗಳ ಆಘಾತಕಾರಿ ಸೋಲನುಭವಿಸಿತ್ತು.

11 ವರ್ಷಗಳ ಹಿಂದೆ ಇಲ್ಲಿ ಧೋನಿ ಪಡೆ 6ಕ್ಕೆ 149 ರನ್‌ ಮಾಡಿದರೆ, ಕಿವೀಸ್‌ 5ಕ್ಕೆ 150 ರನ್‌ ಮಾಡಿ ಅಂತಿಮ ಎಸೆತದಲ್ಲಿ ಗೆದ್ದು ಬಂದಿತ್ತು. ಸರಣಿ 2-0 ಅಂತರದಿಂದ ಆತಿಥೇಯರ ಪಾಲಾಗಿತ್ತು.

ಕಳೆದ ವರ್ಷದ ಮುಖಾಮುಖೀಯಲ್ಲಿ ಕಿವೀಸ್‌ 6ಕ್ಕೆ 219 ರನ್‌ ಪೇರಿಸಿ ಸವಾಲೊಡ್ಡಿತ್ತು. ರೋಹಿತ್‌ ಬಳಗ 19.2 ಓವರ್‌ಗಳಲ್ಲಿ 139ಕ್ಕೆ ಆಲೌಟ್‌ ಆಗಿತ್ತು.

ಇನ್ನೊಂದೆಡೆ, 2014ರ ಬಳಿಕ ಇಲ್ಲಿ ಆಡಲಾದ ಎಲ್ಲ 6 ಪಂದ್ಯಗಳಲ್ಲಿ ಗೆದ್ದ ಸಾಧನೆ ನ್ಯೂಜಿಲ್ಯಾಂಡಿನದ್ದಾಗಿದೆ.

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.